»   » ಕತ್ರಿನಾ ಕೈಫ್ ಜೊತೆ ಕುಣಿಯಲು ಸಿದ್ಧ : ಸಲ್ಮಾನ್

ಕತ್ರಿನಾ ಕೈಫ್ ಜೊತೆ ಕುಣಿಯಲು ಸಿದ್ಧ : ಸಲ್ಮಾನ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಏಕ್ ಥಾ ಟೈಗರ್ ಜೋಡಿ ಮತ್ತೆ ಒಂದಾಗಲಿದೆಯಂತೆ. ಕತ್ರೀನಾ ಜೊತೆ ಕುಣಿದಾಡಲು ಸಲ್ಲೂ ಖುಷಿಯಿಂದ ಒಪ್ಪಿದ್ದಾರಂತೆ ಎಂಬ ಸುದ್ದಿ ಬಾಲಿವುಡ್ ನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಭಾವ ಬಾಮೈದ ಸೇರಿಕೊಂಡು ಹೊರ ತರುತ್ತಿರುವ ಹೊಸ ಚಿತ್ರಕ್ಕೆ ಕತ್ರೀನಾ ಕೈಫ್ ಬುಕ್ ಆಗಿದ್ದಾರಂತೆ. ಅತುಲ್ ಅಗ್ನಿಹೋತ್ರಿ ಅವರು ತಮ್ಮ ಭಾವ ಸಲ್ಮಾನ್ ಗಾಗಿ 'ಏಕ್ ಥಾ ಟೈಗರ್' ಜೋಡಿಯಾದ ಕತ್ರೀನಾ ಅವರೇ ಬೇಕು ಎಂದು ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ.

ನಾನು ಅತುಲ್ ಅಗ್ನಿ ಹೋತ್ರಿ ಜೊತೆ ಮುಂದಿನ ಚಿತ್ರ ಮಾಡುತ್ತಿದ್ದೇನೆ. ಹೆಚ್ಚಿನ ಡೀಟೈಲ್ಸ್ ನನಗೂ ಗೊತ್ತಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ. [ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ]

Salman keen to work with Katrina in his next

ಈ ಹಿಂದೆ 2011ರಲ್ಲಿ ಅತುಲ್ ಹಾಗೂ ಸಲ್ಮಾನ್ ಖಾನ್ ಜೋಡಿಯ 'ಬಾಡಿಗಾರ್ಡ್' ಚಿತ್ರ ಭರ್ಜರಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಕತ್ರೀನಾ ಅವರು ಕುಣಿದಿದ್ದರು. ['ಭಾಯಿ' ಕೈವಶವಾದ 10 ದಾಖಲೆಗಳು]

ಕತ್ರೀನಾ ಅವರನ್ನು ನಿಮ್ಮ ಮುಂದಿನ ಚಿತ್ರದ ನಾಯಕಿತನ್ನಾಗಿಸಲು ಬಯಸಿತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, ನನ್ನ ಚಿತ್ರದಲ್ಲಿ ಕತ್ರೀನಾ ಇದ್ದರೆ ತುಂಬಾ ಸಂತೋಷ. ಅವರ ಜೊತೆ ನಟಿಸಲು ನನಗೂ ಖುಷಿ, ಅದರೆ, ಚಿತ್ರದ ತಾರಾಗಣದ ಬಗ್ಗೆ ನಾನೇನು ಹೇಳಲಾರೆ ಎಂದಿದ್ದಾರೆ. [ಕತ್ರಿನಾ ನೀ ಮಾಡಿದ್ದು ಸರೀನಾ, ಸಲ್ಲು ಸಂಕಟ ಕೇಳೋರು ಯಾರು?]

ಕಬೀರ್ ಖಾನ್ ಅವರ ನಿರ್ದೇಶನದಲ್ಲಿ ಈಗಷ್ಟೇ ಫ್ಯಾಂಟಮ್ ಸಿನಿಮಾ ಮುಗಿಸಿರುವ ಕತ್ರೀನಾ ಮತ್ತೊಮ್ಮೆ ಕಬೀರ್ ನಿರ್ದೇಶನದಲ್ಲಿ ಸಲ್ಮಾನ್ ಜೋಡಿಯಾಗುವ ಸುದ್ದಿಯಿದೆ. [ಫ್ಯಾಂಟಮ್ ವಿಮರ್ಶೆ: ಥ್ರಿಲ್ ಇದ್ದರೂ ಬೋರ್ ಬೋರ್]

ಸಲ್ಮಾನ್ ಹಾಗೂ ಕತ್ರೀನಾ ಜೋಡಿ ಈ ಹಿಂದೆ ಪಾರ್ಟ್ನರ್, ಯುವರಾಜ್, ಮೈನೇ ಪ್ಯಾರ್ ಕ್ಯೂ ಕಿಯಾ ಹಾಗೂ ಏಕ್ ಥಾ ಟೈಗರ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಸದ್ಯಕ್ಕೆ ಸಲ್ಮಾನ್ ಖಾನ್ ಅವರು ಹೋಂ ಪ್ರೊಡೆಕ್ಷನ್ ನ 'ಹೀರೋ' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದ್ದಲ್ಲದೆ 49 ವರ್ಷ ವಯಸ್ಸಿನ ಸಲ್ಮಾನ್ ಅವರು ಆದಿತ್ಯಾ ಚೋಪ್ರಾ ಅವರ 'ಸುಲ್ತಾನ್', ಸೋನಮ್ ಜೊತೆ ಸೂರಜ್ ಭರ್ಜಾತ್ಯಾ ಅವರ 'ಪ್ರೇಮ್ ರತನ್ ದಾನ್ ಪಾಯೋ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. (ಪಿಟಿಐ)

English summary
Superstar Salman Khan has expressed his desire to share screen space with Katrina Kaif in his next film. Gossip mills are abuzz that the ‘Ek Tha Tiger’ co-stars will star opposite each other again in Salman’s brother-in-law Atul Agnihotri’s next film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada