For Quick Alerts
  ALLOW NOTIFICATIONS  
  For Daily Alerts

  ಕೊನೆಗೂ 'ಮದುವೆ' ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ರು ಸಲ್ಮಾನ್!

  By Suneel
  |

  ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು ಎಂದು ಕೇಳಿದ್ರೆ ತಕ್ಷಣ ಯಾರೇ ಆದರೂ ಸಲ್ಲು ಎನ್ನುತ್ತಾರೆ. 'ಸುಲ್ತಾನ್' ಸಲ್ಮಾನ್ ಖಾನ್ ಗೆ ಬರುವ ಡಿಸೆಂಬರ್ 27 ಕ್ಕೆ 52 ವರ್ಷ ಕಂಪ್ಲೀಟ್ ಆಗಲಿದೆ. ಆದ್ದರಿಂದ ಸಹಜವಾಗಿ ಸಲ್ಲುಗೆ ಎಲ್ಲೇ ಹೋದರೂ ಮಾಧ್ಯಮದವರು ಮಿಸ್ ಮಾಡದೇ ಕೇಳುವ ಒಂದೇ ಪ್ರಶ್ನೆ ಅಂದ್ರೆ 'ನಿಮ್ಮ ಮದುವೆ ಯಾವಾಗ?' ಅಂತ.

  ಸಲ್ಮಾನ್ ಖಾನ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆದರೂ ಸಹ ಬರೋಬ್ಬರಿ 8 ಕ್ಕೂ ಹೆಚ್ಚು ಲವ್ ಫೇಲ್ಯೂರ್ ಕಹಾನಿಗಳು ಇವೆ. ಅವರುಗಳಲ್ಲಿ ಮಾಜಿ ಪ್ರಿಯತಮೆ ಕತ್ರಿನಾ ಕೈಫ್ ಮಾತ್ರ ಸಲ್ಲು ಜೊತೆ ಇಂದಿಗೂ ಉತ್ತಮ ಗೆಳೆತನ ಹೊಂದಿದ್ದಾರೆ.[ಸಲ್ಮಾನ್ ಬಗ್ಗೆ 'ಎಬಿಸಿಡಿ' ನಿರ್ದೇಶಕನಿಂದ ಹೊರಬಿತ್ತು ಆಶ್ಚರ್ಯಕರ ಹೇಳಿಕೆ!]

  ಅಂದಹಾಗೆ ಸಲ್ಲು ಲವ್, ಬ್ಯಾಚುಲರ್ ಲೈಫ್ ಬಗ್ಗೆ ಇಷ್ಟೆಲ್ಲಾ ಏಕೆ ಹೇಳ್ತಿದ್ದೀವಿ ಅಂದ್ರೆ, ಅವರು ಇತ್ತೀಚೆಗೆ ಮದುವೆ ಬಗ್ಗೆ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಮದುವೆ ಬಗ್ಗೆ ಏನ್ ಹೇಳಿದ್ರು ಅಂತ ಇಲ್ಲಿ ನೋಡಿ..

  ಮದುವೆ ಬಗ್ಗೆ ಸಲ್ಲು ಅಭಿಪ್ರಾಯ

  ಮದುವೆ ಬಗ್ಗೆ ಸಲ್ಲು ಅಭಿಪ್ರಾಯ

  ಇತ್ತೀಚೆಗೆ 'ಟ್ಯೂಬ್‌ಲೈಟ್' ಸಿನಿಮಾ ಪ್ರಮೋಷನ್ ವೇಳೆ ಸಲ್ಮಾನ್ ಖಾನ್ ಗೆ ನೀವು ಯಾವಾಗ ಮದುವೆ ಆಗುತ್ತೀರಿ ಎಂಬ ಪ್ರಶ್ನೆ ಮಾಧ್ಯಮದವರಿಂದ ತೂರಿ ಬಂದಿತ್ತು. ಇದಕ್ಕೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ 'ಮದುವೆಯೆಂಬುದು ಹಣ ದುಂದುವೆಚ್ಚ ಮಾಡುವುದು' ಎಂದು ತಮ್ಮ ಅಲೋಚನೆ ವ್ಯಕ್ತಪಡಿಸಿದ್ದಾರೆ. ಇನ್ನೂ ಲವ್ ಬಗ್ಗೆ ಏನಂದ್ರು ಗೊತ್ತಾ..

  ಪ್ರೀತಿಯ ಬಗ್ಗೆ ಸಲ್ಲು ಹೇಳಿದ್ದು..

  ಪ್ರೀತಿಯ ಬಗ್ಗೆ ಸಲ್ಲು ಹೇಳಿದ್ದು..

  ಹೆಚ್ಚು ಪ್ರೇಮ ವೈಫಲ್ಯಗಳನ್ನು ಅನುಭವಿಸಿರುವ ಸಲ್ಮಾನ್ ಖಾನ್, "ಪ್ರೀತಿ ಬಗ್ಗೆ ನನಗೆ ನಂಬಿಕೆ ಇಲ್ಲ. ಪ್ರೀತಿ ಅನ್ನುವ ಬದಲು ಅದನ್ನೊಂದು ಅವಶ್ಯಕತೆ ಅಂತ ಹೇಳಬಹುದು. ರಿಲೇಶನ್‌ಶಿಪ್ ಎನ್ನುವುದು ಯಾರ ಅವಶ್ಯಕತೆ ಹೆಚ್ಚು ಎಂಬುದರ ಮೇಲೆ ಆಧಾರವಾಗಿದೆ. ಸಂಬಂಧದಲ್ಲಿ ಒಬ್ಬರಿಗೆ ಮತ್ತೊಬ್ಬರು ಅವಶ್ಯಕ ಎಂಬ ಭಾವನೆ ಇರಬೇಕು" ಎಂದಿದ್ದಾರೆ.

  ಸಲ್ಲು ಮದುವೆ ಬಗ್ಗೆ ಪ್ರಶ್ನೆ ಏಕೆ?

  ಸಲ್ಲು ಮದುವೆ ಬಗ್ಗೆ ಪ್ರಶ್ನೆ ಏಕೆ?

  ಸಲ್ಲು ಕಳೆದ ವರ್ಷವೇ ತಮ್ಮ ಮದುವೆ ಯಾವಾಗ ಎಂಬುದಕ್ಕೆ ಖಡಕ್ ಉತ್ತರವನ್ನು ನೀಡಿದ್ದರು. ಆದರೂ ಈಗೇಕೆ ಅವರ ಮದುವೆ ಬಗ್ಗೆ ಪ್ರಶ್ನೆ ಎಂದರೇ.. ಇತ್ತೀಚೆಗೆ ರೊಮೆನಿಯಾ ಮಾಡೆಲ್ Iulia Vântur ಗೆ ದುಬೈ ಏರ್‌ಪೋರ್ಟ್ ನಲ್ಲಿ ಪರಸ್ಪರ ಕಿಸ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಆದ್ದರಿಂದ ಇವರಿಬ್ಬರು ಮದುವೆ ಆಗಲಿದ್ದಾರೆ ಎಂಬ ಗಾಸಿಪ್ ಸುದ್ದಿಗಳು ಹರಿದಾಡಿದ್ದವು. ಹಾಗೆ ಅದಕ್ಕೆ ಪ್ಯಾಚಪ್ ಸುದ್ದಿಗಳು ಬಂದವು. ಆದರೆ ಅವರೊಂದಿಗಿನ ಒಡನಾಟ ಇನ್ನು ಚೆನ್ನಾಗಿರುವ ಹಿನ್ನೆಲೆಯಲ್ಲಿ ಮದುವೆ ಬಗ್ಗೆ ಕೇಳಲಾಗಿತ್ತು.

  ಈ ಹಿಂದೆ ಮದುವೆ ಬಗ್ಗೆ ಸಲ್ಲು ನೀಡಿದ್ದ ಉತ್ತರ

  ಈ ಹಿಂದೆ ಮದುವೆ ಬಗ್ಗೆ ಸಲ್ಲು ನೀಡಿದ್ದ ಉತ್ತರ

  ಸಲ್ಲು ಈ ಹಿಂದೆ, 'ನಾನೇನಾದರೂ ಎಂಗೇಜ್ ಆದಲ್ಲಿ ಅಥವಾ ಮದುವೆ ಮಾಡಿಕೊಳ್ಳಲು ಮುಂದಾದಲ್ಲಿ ಮಾಧ್ಯಮಗಳು ಈ ಸುದ್ದಿಯನ್ನು ಲೀಕ್ ಮಾಡುವವರೆಗೆ ಕಾಯುವುದಿಲ್ಲ. ನಾನೇ ಪ್ರಕಟಣೆ ಮಾಡುತ್ತೇನೆ. ನನಗೆ ಅದೊಂದು ಸಂತೋಷದ ಸಂದರ್ಭ' ಎಂದು 'ಮುಂಬೈ ಮಿರರ್'ಗೆ ಹೇಳಿದ್ದರು.

  English summary
  Bollywood Actor Salman Khan, who was busy promoting his recently released film ‘Tubelight’, spoke about his idea of marriage and love. The actor, who’s been incessantly posed the question of when he will tie the knot over the years, said that he thinks marriage is just a "waste of money".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X