'ಬಜರಂಗಿ ಭಾಯಿಜಾನ್' ಪೋರಿಯ 10ನೇ ತರಗತಿ ರಿಸಲ್ಟ್ ಔಟ್; ಪಾಸ್ ಆಗಲ್ಲ ಅಂದವರಿಗೆ ತಿರುಗೇಟು!

ಸಲ್ಮಾನ್ ಖಾನ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ 'ಬಜರಂಗಿ ಭಾಯಿಜಾನ್'. ಈ ಸಿನಿಮಾ ಇಂದಿಗೂ ಸಿನಿ ಪ್ರೇಮಿಗಳಿಗೆ ಅಚ್ಚು ಮೆಚ್ಚು. 2015ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತ್ತು. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಪುಟ್ಟ ಬಾಲಕಿ ನಿಮಗೆ ನೆನಪಿರಬಹುದು. ಆ ನಟಿಯ ಹೆಸರು ಹರ್ಷಾಲಿ ಮಲ್ಹೋತ್ರಾ.

9 ವರ್ಷಗಳ ಹಿಂದೆ ತೆರೆಕಂಡಿದ್ದ 'ಬಜರಂಗಿ ಭಾಯಿಜಾನ್' ಸಿನಿಮಾ ಪುಟ್ಟ ಬಾಲಕಿಯಾಗಿ ಪ್ರೇಕ್ಷಕರ ಮನಗೆದ್ದಿದ್ದ ನಟಿಯೀಗ 10ನೇ ತರಗತಿ ಮುಗಿಸಿದ್ದಾರೆ. ಡ್ಯಾನ್ಸ್, ರೀಲ್ಸ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಹರ್ಷಾಲಿ ಮಲ್ಹೋತ್ರಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಈ ಕಾರಣಕ್ಕೆ ಟ್ರೋಲಿಗರು ಈಕೆಯನ್ನು ಆಗಾಗ ಟ್ರೋಲ್ ಮಾಡುತ್ತಲೇ ಇದ್ದರು.

actress harshaali malhotra SSLC result

10ನೇ ತರಗತಿಯಲ್ಲಿ ಹರ್ಷಾಲಿ ಮಲ್ಹೋತ್ರಾ ಸಿಬಿಎಸ್‌ಸಿ ಸಿಲಬಸ್‌ನಲ್ಲಿ ಸ್ಟಡಿ ಮಾಡುತ್ತಿದ್ದರು. ಆದರೆ, ಶಿಕ್ಷಣದ ಜೊತೆಗೆ ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳಲ್ಲೂ ಆಕ್ಟಿವ್ ಆಗಿದ್ದರು. ಮೇ 14 ರಂದು ನಟಿ ಹರ್ಷಾಲಿ ಮಲ್ಹೋತ್ರಾ ಅವರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ. ಇಷ್ಟು ದಿನ ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

'ಬಜರಂಗಿ ಭಾಯಿಜಾನ್' ಸಿನಿಮಾದಲ್ಲಿ ಮುನ್ನಿ ಪಾತ್ರದಲ್ಲಿ ಹರ್ಷಾಲಿ ಮಲ್ಹೋತ್ರಾ ಗಮನ ಸೆಳೆದಿದ್ದರು. ಆ ಬಳಿಕ ಬೇರೆ ಯಾವುದೇ ಸಿನಿಮಾಗಳಲ್ಲಿ ಕಾಣಸಿಕೊಂಡಿರಲಿಲ್ಲ. ಕೆಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರಷ್ಟೇ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಹೀಗಾಗಿ ನೆಟ್ಟಿಗರು 10ನೇ ತರಗತಿ ಪಾಸ್ ಆಗುವುದು ಅನುಮಾನ ಅಂತ ಕಾಮೆಂಟ್ ಮಾಡುತ್ತಿದ್ದರು. ಹೀಗೆ ಕಾಮೆಂಟ್ ಹಾಗೂ ಟ್ರೋಲ್ ಮಾಡಿದವರಿಗೆ ಹರ್ಷಾಲಿ ಮಲ್ಹೋತ್ರಾ ಖಡಕ್ ರಿಪ್ಲೈ ಕೊಟ್ಟಿದ್ದಾರೆ.

ಅಂದ್ಹಾಗೆ ಹರ್ಷಾಲಿಗೆ 10ನೇ ತರಗತಿಯಲ್ಲಿ 83 ಪರ್ಸೆಂಟ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ಅದೂ ಸಿಬಿಎಸ್‌ಸಿ ಸಿಲಬಸ್‌ನಲ್ಲಿ ಉತ್ತಮ ಅಂಕ ಪಡೆದು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಈ ಸಂಬಂಧ ವಿಡಿಯೋ ರಿಲೀಸ್ ಮಾಡಿ, ತಮ್ಮ ವಿರುದ್ಧ ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟಿದ್ದಾರೆ.

ಅಲ್ಲದೆ, ನನ್ನ ಕಥಕ್ ಕ್ಲಾಸ್, ಶೂಟ್‌ಗಳು ಹಾಗೂ ಶಿಕ್ಷಣ ಮೂರರ ನಡುವೆ ಪರ್ಫೆಕ್ಟ್ ಬ್ಯಾಲೆನ್ಸ್ ಮಾಡಿದ್ದೇನೆ ಎಂದು ಹರ್ಷಾಲಿ ಮಲ್ಹೋತ್ರಾ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ. ನಟಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಪಡೆದಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್‌ಗಳು ಈಗ ಸೈಲೆಂಟ್ ಆಗಿದ್ದಾರೆ.

More from Filmibeat

English summary
Salman Khan starrer Bajrangi bhaijaan movie actress harshaali malhotra SSLC result
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X