ಈದ್‌ಗೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್': ಮೊದಲ ದಿನದ ಅಂದಾಜು ಕಲೆಕ್ಷನ್ ಎಷ್ಟು?

ಸಲ್ಮಾನ್ ಖಾನ್ ಸಿನಿಮಾ ಈದ್ 2023ಗೆ ರಿಲೀಸ್ ಆಗಿದೆ. ಈ ಹಬ್ಬದಂದು ತೆರೆಕಂಡ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ. ಹೀಗಾಗಿ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಸಿನಿಮಾ ಬಗ್ಗೆನೂ ಸಿಕ್ಕಾಪಟ್ಟೆ ನಿರೀಕ್ಷೆಯಿದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳು 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಸಿನಿಮಾದ ಮೊದಲ ದಿನದ ಅಂದಾಜು ಲೆಕ್ಕಾಚಾರ ಹಾಕಿದ್ದಾರೆ. ಭಾರತದಲ್ಲಿ ಈ ಸಿನಿಮಾ ಲೆಕ್ಕ ಹಾಕಿರೋ ಪ್ರಕಾರ, ಮೊದಲ ದಿನ ಗಳಿಕೆ ನಿರೀಕ್ಷಿಸಿದಷ್ಟು ತಲುಪಿಲ್ಲ ಎಂದು ಅಂದಾಜಿಲಾಗಿದೆ.

Salman Khan Starrer Kisi Ka Bhai Kisi Ki Jaan Day 1 Box Office prediction 12.50cr

'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಈ ಸಿನಿಮಾದಲ್ಲಿ ಸ್ಟಾರ್ ನಟರೇ ಇದ್ದಾರೆ. ಸಲ್ಮಾನ್ ಖಾನ್ ಜೊತೆಗೆ ಪೂಜಾ ಹೆಗ್ಡೆ, ದಗ್ಗುಬಾಟಿ ವೆಂಕಟೇಶ್ ನಟಿಸಿದ್ದಾರೆ. ಇವರ ಜೊತೆ ಶೆಹನಾಜ್ ಗಿಲ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಿತ್ತು. ಹಾಗಿದ್ರೆ, ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿರೋ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸಲ್ಮಾನ್ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಎಷ್ಟು?

'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಮೊದಲ ದಿನ ಅಂದಾಜು 12.50 ಕೋಟಿ ರೂಪಾಯಿಯಿಂದ 13.50 ಕೋಟಿ ರೂ. ಗಳಿಸಿರಬಹುದು ಎನ್ನಲಾಗುತ್ತಿದೆ. ಇದು ಭಾರತದ ಕಲೆಕ್ಷನ್ ಆಗಿದ್ದು, ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದೂ ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ.

ಭಾರತದ ಮೂರು ಅತೀ ದೊಡ್ಡ ಮಲ್ಟಿಪ್ಲೆಕ್ಸ್ ಚೈನ್‌ಗಳಾದ ಪಿವಿಆರ್,ಐನಾಕ್ಸ್ ಹಾಗೂ ಸಿನಿಪೊಲಿಸ್ ಅಂತಹವುಗಳಲ್ಲಿ 5,20 ಕೋಟಿ ರೂ.ಯಿಂದ 5.25 ಕೋಟಿ ರೂ. ಅಷ್ಟು ಕಲೆಕ್ಷನ್ ಆಗಿರಬಹುದು ಎಂದು ಪಿಂಕ್ ವಿಲ್ಲಾದಲ್ಲಿ ವರದಿ ಮಾಡಲಾಗಿದೆ. ಅಲ್ಲದೆ ಈ ಮಾಸ್ ಸಿನಿಮಾ ಇನ್ನೂ ದೊಡ್ಡ ಮೊತ್ತವನ್ನು ಕಲೆಹಾಕಬಹುದಿತ್ತು ಎನ್ನಲಾಗಿದೆ.

ವೀಕೆಂಡ್ ಮೇಲೆ ನಿರ್ಧಾರ

ಮೊದಲವೇ ದೊಡ್ಡ ಮೊತ್ತ ಕಲೆ ಹಾಕಿದ್ದರೆ, ಸಿನಿಮಾ ಬಗ್ಗೆ ಯೋಚನೆ ಮಾಡೋ ಅಗತ್ಯವೇ ಇರಲಿಲ್ಲ. ಆದರೆ, ಮೊದಲ ದಿನವೇ ಕಲೆಕ್ಷನ್ 15 ಕೋಟಿ ರೂ.ನೂ ದಾಟಿಲ್ಲ ಎನ್ನಲಾಗಿದೆ. ಹೀಗಾಗಿ ವೀಕೆಂಡ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಶನಿವಾರ ಹಾಗೂ ಭಾನುವಾರ ಈ ಸಿನಿಮಾ ಮಾಸ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲೇ ಬೇಕಿದೆ.

Salman Khan Starrer Kisi Ka Bhai Kisi Ki Jaan Day 1 Box Office prediction 12.50cr

'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಇದು ಭಾರತದಲ್ಲಿ ಸುಮಾರು 4500 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಹೀಗಾಗಿ ವೀಕೆಂಡ್ ಕಲೆಕ್ಷನ್ ತುಂಬಾನೇ ಮುಖ್ಯ. ಶನಿವಾರ ಹಾಗೂ ಭಾನುವಾರ ಈ ಎರಡೂ ದಿನ ಕಮ್ಮಿ ಅಂದರೂ, 20 ಕೋಟಿ ರೂ. ಕಲೆಕ್ಷನ್ ಮಾಡಬೇಕಿದೆ. ಹಾಗೇನಾದರೂ ಆದರೆ, ಸಿನಿಮಾ 55 ಕೋಟಿ ರೂ. ಕಲೆಕ್ಷನ್ ಆದಂತೆ.

'ಈದ್‌' ಸಲ್ಮಾನ್ ಖಾನ್‌ಗೆ ಲಕ್ಕಿ

ಈದ್ ವೇಳೆ ರಿಲೀಸ್ ಆದ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಹೀಗಾಗಿ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಗೆದ್ದೇ ಗೆಲ್ಲುತ್ತೋ ಅನ್ನೋ ನಿರೀಕ್ಷೆಯಲ್ಲಿ ಬಾಲಿವುಡ್ ಇದೆ. ಆದರೆ, ಮೊದಲ ನಿರಾಸೆಯಾಗಿದ್ದರೂ, 'ಈದ್' ಸಂದರ್ಭದಲ್ಲಿ ಮುಂದಿನ ಎರಡು ದಿನ ಉತ್ತಮ ಗಳಿಕೆಯ ನಿರೀಕ್ಷೆಯಲ್ಲಿದ್ದಾರೆ.

ಈ ಸಿನಿಮಾ ಥಿಯೇಟರ್‌ನಲ್ಲಿ ಹೆಚ್ಚು ಕಾಲ ಉಳಿಯಬೇಕು ಅಂದ್ರೆ, ಸಿಂಗಲ್‌ ಸ್ಕ್ರೀನ್‌ಗೆ ಜನರು ಬರಬೇಕಿದೆ. ಸದ್ಯ ಮಲ್ಟಿಪ್ಲೆಕ್ಸ್‌ನಲ್ಲಿ ಕಲೆಕ್ಷನ್ ಚೆನ್ನಾಗಿದೆ. ಈ ಕಾರಣಕ್ಕೆ ಮುಂದಿನ ಎರಡು ದಿನ ಕಲೆಕ್ಷನ್ ಚೆನ್ನಾಗಿ ಆದರೆ, ಬಾಕ್ಸಾಫೀಸ್‌ನಲ್ಲಿ ಸಲ್ಮಾನ್ ಖಾನ್ ಮತ್ತೆ ಸುಲ್ತಾನ್ ಆಗೋದ್ರಲ್ಲಿ ಡೌಟೇ ಇಲ್ಲ.

More from Filmibeat

English summary
Salman Khan Starrer Kisi Ka Bhai Kisi Ki Jaan Day 1 Box Office prediction 12.50cr, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X