ಶಾರುಖ್ 200 ಕೋಟಿ ಬಂಗಲೆಯನ್ನು ಸಲ್ಮಾನ್ ಖಾನ್ ಖರೀದಿಸಬೇಕಿತ್ತು: ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದೇಕೆ?
ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳು. ಇಂದಿಗೂ ಸಿನಿಮಾಗಳಲ್ಲಿ ತಮ್ಮ ಚಾರ್ಮ್ ಅನ್ನು ಬಿಟ್ಟು ಕೊಟ್ಟಿಲ್ಲ. ಯುವ ಪ್ರತಿಭೆಗಳು ಪೈಪೋಟಿ ಕೊಡುವುದಕ್ಕೆ ಅದೆಷ್ಟೇ ಪ್ರಯತ್ನ ಪಟ್ಟರೂ, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅನ್ನು ಹಿಂದಿಕ್ಕೆ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ.
ಬಾಲಿವುಡ್ ಈ ಇಬ್ಬರು ಸೂಪರ್‌ಸ್ಟಾರ್‌ಗಳು ಸ್ನೇಹಿತರಾಗಿ ಒಟ್ಟಿಗೆ ನಟಿಸಿದ್ದಾರೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿವೆ. ಇಷ್ಟೇ ಅಲ್ಲದೆ ಬಾಲಿವುಡ್‌ನಲ್ಲಿ ಇವರಿಬ್ಬರೂ ಉತ್ತಮ ಗೆಳೆಯರು. ಇತ್ತೀಚೆಗಷ್ಟೇ ಇತ್ತಿಚೇಗಷ್ಟೇ ತೆರೆಕಂಡಿದ್ದ 'ಪಠಾಣ್' ಸಿನಿಮಾದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಗೊತ್ತೇ ಇದೆ.

ಬಾಲಿವುಡ್‌ನಲ್ಲಿ 'ಗಾಢ್ ಫಾದರ್' ಇಲ್ಲದೇನೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶಾರುಖ್ ಖಾನ್ ಇಂದು ಸಾವಿರಾರು ಕೋಟಿ ಒಡೆಯ. ಸುಮಾರು 4 ಸಾವಿರದಿಂದ 6 ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಶಾರುಖ್ ಖಾನ್ ಬಳಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮೈಸೂರಿನಲ್ಲಿ ಶಾರುಖ್ ಖಾನ್ ವಾಸವಿರುವ ಬಂಗಲೆಯೇ 200 ಕೋಟಿ ರೂಪಾಯಿ ಅಧಿಕ ಎನ್ನಲಾಗಿದೆ. ಈ ಬಂಗಲೆಯನ್ನು ಸಲ್ಮಾನ್ ಖಾನ್ ಖರೀದಿ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಯಾಕೆ ಗೊತ್ತೇ?
ಹೆಚ್ಚು ಕಡಿಮೆ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಒಟ್ಟೊಟ್ಟಿಗೆ ವೃತ್ತಿ ಬದುಕನ್ನು ಆರಂಭಿಸಿದ್ದರು. ಇಂದು ಇಬ್ಬರೂ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು. ಆರಂಭದಲ್ಲಿ ಸ್ನೇಹಿತರಾಗಿ 'ಕರಣ್ ಅರ್ಜುನ್', 'ಕುಚ್ ಕುಚ್ ಹೋತಾ ಹೇ' ಇತ್ತೀಚೆಗೆ ತೆರೆ ಕಂಡ 'ಪಠಾಣ್' ಅಂತಹ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ, ಒಂದು ಕಾಲದಲ್ಲಿ ಇವರಿಬ್ಬರೂ ಬದ್ಧ ವೈರಿಗಳಾಗಿದ್ದರು. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಸದ್ಯ ಸಲ್ಮಾನ್ ಹಾಗೂ ಶಾರುಖ್ ಖಾನ್ ಈಗ ಬೆಸ್ಟ್ ಫ್ರೆಂಡ್.
ಶಾರುಖ್ ಖಾನ್ ನೋಡುವುದಕ್ಕೆ ಇಂದಿಗೂ ಅವರ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿತ್ತಾರೆ. ತನ್ನ ನೆಚ್ಚಿನ ನಟನನ್ನು ನೋಡುವುದಕ್ಕೆ ಕ್ಯೂ ನಿಲ್ಲುತ್ತಾರೆ. ಮುಂಬೈನಲ್ಲಿರುವ ಬೀಚ್ ಸೈಡ್‌ನ ಈ ಬೃಹತ್ ಬಂಗಲೆ 'ಮನ್ನತ್' ಟೂರಿಸ್ಟ್‌ಗಳ ನೆಚ್ಚಿನ ತಾಣ ಕೂಡ ಹೌದು. ಶಾರುಖ್ ಖಾನ್ ವಾಸವಿರುವ ಸ್ಥಳ ಕೂಡ ಇದೇನೇ. ಇದರ ಬೆಲೆ ಅಂದಾಜು 200 ಕೋಟಿ ರೂಪಾಯಿ ಎಂದು ಲೆಕ್ಕ ಹಾಕಲಾಗಿದೆ.

ಶಾರುಖ್ ಖಾನ್ ಸ್ಟಾರ್ ಪಟ್ಟಕ್ಕೇರುತ್ತಿದ್ದಂತೆ 'ಮನ್ನತ್' ಖರೀದಿ ಮಾಡುವುದಕ್ಕಿಂತ ಮುಂದಾಗಿದ್ದರು. ಮನ್ನತ್ 26,328 ಚದರ ಅಡಿಗಳಷ್ಟು ದೊಡ್ಡದಿದೆ. 'ಮನ್ನತ್' ಬಂಗಲೆಗೆ ಮೊದಲಿದ್ದ ಹೆಸರು 'ವಿಲ್ಲ ವಿಯೆನ್ನ'. ಶಾರುಖ್ ಖಾನ್ ಖರೀದಿ ಮಾಡುವುದಕ್ಕಿಂತ ಮುನ್ನ ಈ ಬಂಗಲೆ ಲೀಜ್‌ನಲ್ಲಿ ಇತ್ತು. ಶಾರುಖ್ ಖಾನ್ 13.32 ಕೋಟಿ ರೂಪಾಯಿ ಕೊಟ್ಟು ಮನ್ನತ್ ಅಂತ ಬದಲಾಯಿಸಿದ್ದರು. ಆದರೆ, ಶಾರುಖ್ ಖಾನ್ ಖರೀದಿಗೂ ಮುನ್ನ ಈ ಆಫರ್ ಸಲ್ಮಾನ್ ಖಾನ್‌ಗೆ ನೀಡಲಾಗಿತ್ತು.
ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ತಾನೇಕೆ 'ಮನ್ನತ್' ಅನ್ನು ಖರೀದಿ ಮಾಡಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದರು. ಸಲ್ಮಾನ್ ಖಾನ್‌ಗೆ ಈ ಬಂಗಲೆಯನ್ನು ಖರೀದಿ ಮಾಡಲು ಆಫರ್ ಬಂದಾಗ, ಅವರ ತಂದೆ ಸಲೀಂ ಖಾನ್ ಇಷ್ಟು ದೊಡ್ಡ ಮನೆ ಅಗತ್ಯವೇ ಇಲ್ಲ ಎಂದಿದ್ದರಂತೆ. ಹೀಗಾಗಿ ಮನ್ನತ್ ಅನ್ನು ಖರೀದಿ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
"ಇಷ್ಟು ದೊಡ್ಡ ಮನೆಯಲ್ಲಿ ಇದ್ದು ಏನು ಮಾಡುತ್ತೀಯಾ? ಎಂದಿದ್ದರು. ಹಾಗೇ ನಾನು ಶಾರುಖ್‌ಗೆ ಕೇಳುತ್ತೇನೆ. ಇಷ್ಟು ಮನೆಯಲ್ಲಿ ನೀವು ಏನು ಮಾಡುತ್ತೀಯಾ?" ಎಂದು ಸಲ್ಮಾನ್ ಖಾನ್‌ಗೆ ಅವರ ತಂದೆ ಸಲೀಂ ಖಾನ್ ಪ್ರಶ್ನೆ ಮಾಡಿದ್ದರು. ಹೀಗಾಗಿ ಮನ್ನತ್ ಬಂಗಲೆ ಖರೀದಿಯನ್ನು ಡ್ರಾಪ್ ಮಾಡಿದ್ದಾಗಿ ಸಲ್ಮಾನ್ ಖಾನ್ ಹೇಳಿಕೊಂಡೊದ್ದರು.


Click it and Unblock the Notifications











