'ವಿಕ್ರಾಂತ್ ರೋಣ' ಹಿಂದಿ ಟ್ರೈಲರ್ ಲಾಂಚ್ ಮಾಡಲಿರೋ ಸಲ್ಮಾನ್ ಖಾನ್: ಎಷ್ಟೊತ್ತಿಗೆ?

ಕನ್ನಡ ಮೂರನೇ ಪ್ಯಾನ್ ಇಂಡಿಯಾ ಸಿನಿಮಾ ಭರ್ಜರಿ ಪ್ರಚಾರ ಆರಂಭಿಸಿದೆ. ದಿನದಿಂದ ದಿನಕ್ಕೆ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್ ಸಿನಿಮಾ 'ವಿಕ್ರಾಂತ್ ರೋಣ' ಅರ್ಭಟನೂ ಜೋರಾಗಿಯೇ ಇದೆ. ಇನ್ನೇನು ಬಹು ನಿರೀಕ್ಷಿತ ಸಿನಿಮಾದ ಟ್ರೈಲರ್ ರಿಲೀಸ್‌ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ ಅಷ್ಟೇ. ಅಷ್ಟರಲ್ಲಿಯೇ ಚಿತ್ರತಂಡ ಒಂದೊಂದೇ ಸುದ್ದಿಯ ಮೂಲಕ ಸೌಂಡ್ ಮಾಡುತ್ತಿದೆ.

ಕಿಚ್ಚ ಸುದೀಪ್ ಹಾಗೂ ತಂಡ ಈಗಾಗಲೇ 'ವಿಕ್ರಾಂತ್ ರೋಣ' ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಗೋಷ್ಠಿ ಮಾಡಿದೆ. ಸಿನಿಮಾ ಬಗ್ಗೆ ರಿಲೀಸ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ. ಈ ಬೆನ್ನಲ್ಲೇ ನಾಳೆ (ಜೂನ್ 23) ಒಂದೊಂದೂ ಭಾಷೆಯಲ್ಲೂ ಒಬ್ಬೊಬ್ಬ ಸೂಪರ್‌ಸ್ಟಾರ್ ಟ್ರೈಲರ್ ರಿಲೀಸ್ ಮಾಡುವ ವಿಷಯವನ್ನೂ ಸ್ವತ: ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್‌ರಿಂದ ಟ್ರೈಲರ್ ಲಾಂಚ್

'ಕೆಜಿಎಫ್ 2', '777 ಚಾರ್ಲಿ' ಬಳಿಕ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ 'ವಿಕ್ರಾಂತ್ ರೋಣ' ರಿಲೀಸ್ ಬಗ್ಗೆ ಎಲ್ಲರಲ್ಲೂ ಕುತೂಹಲವಿದ್ದೇ ಇದೆ. 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಾ? ಅನ್ನುವ ಪ್ರಶ್ನೆಗೆ ನಾಳೆ ( ಜೂನ್ 23) ರಿಲೀಸ್ ಆಗಲಿರುವ ಟ್ರೈಲರ್‌ ಹಿಂಟ್ ಕೊಡಲಿದೆ. ಹೀಗಾಗಿ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಟ್ರೈಲರ್ ಅನ್ನು ಸಲ್ಮಾನ್ ಖಾನ್ ಬಳಿ ರಿಲೀಸ್ ಮಾಡಿಸುತ್ತಿದೆ ಚಿತ್ರತಂಡ. ನಾಳೆ ಸಂಜೆ 5.02ಕ್ಕೆ ನಿಮಿಷಕ್ಕೆ ಸಲ್ಮಾನ್ ಖಾನ್ ಡಿಜಿಟಲ್ ಮೀಡಿಯಾ ಮೂಲಕ ಟ್ರೈಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ.

ಉತ್ತರದಲ್ಲಿ ಸಲ್ಲು ಸಾಥ್

ಉತ್ತರದಲ್ಲಿ ಸಲ್ಲು ಸಾಥ್

'ವಿಕ್ರಾಂತ್ ರೋಣ' ಸಿನಿಮಾಗೆ ಆನೆಬಲ ಬಂದಿರೋದು ಸಲ್ಮಾನ್ ಖಾನ್ ಎಂಟ್ರಿ ಆದಮೇಲೆನೇ. ಉತ್ತರ ಭಾರತದಲ್ಲಿ 'ವಿಕ್ರಾಂತ್ ರೋಣ' ಸಿನಿಮಾಗೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆ ವಿತರಣೆ ಮಾಡಲಿದೆ. ಈ ಸಿನಿಮಾ 3ಡಿಯಲ್ಲಿಯೂ ಬಿಡುಗಡೆಯಾಗುತ್ತಿರುವುದರಿಂದ ಉತ್ತರ ಭಾರತ ಮಂದಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಕೌತುಕವಿದೆ. ಇದು ನಾಳೆ ( ಜೂನ್ 23) ಬಿಡುಗಡೆಯಾಗುತ್ತಿರುವ ಟ್ರೈಲರ್ ಮೇಲೆ ಎಲ್ಲಾ ನಿಂತಿದೆ.

ಒಂದು ದಿನ ಮೊದಲೇ ಟ್ರೈಲರ್ ಪ್ರೀಮಿಯರ್

ಒಂದು ದಿನ ಮೊದಲೇ ಟ್ರೈಲರ್ ಪ್ರೀಮಿಯರ್

'ವಿಕ್ರಾಂತ್ ರೋಣ' ತಂಡ ಟ್ರೈಲರ್ ರಿಲೀಸ್‌ಗೂ ಮುನ್ನವೇ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಇಲ್ಲಿ ಮಾಧ್ಯಮಗಳಿಗೆ ಸಿನಿಮಾದ ಟ್ರೈಲರ್ ಅನ್ನು ಪ್ರೀಮಿಯರ್ ಮಾಡಿದೆ. ಸಿನಿಮಾ ಶೈಲಿಯಂತೆ ಒಂದು ದಿನ ಮೊದಲೇ ಟ್ರೈಲರ್ ಅನ್ನು ಪ್ರೀಮಿಯರ್ ಮಾಡಿದೆ. ಟ್ರೈಲರ್‌ ಬಗ್ಗೆ ಮೆಚ್ಚಗೆ ವ್ಯಕ್ತವಾಗಿತ್ತು. ಕಿಚ್ಚನ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹುಟ್ಟಿದೆ. ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಟ್ರೈಲರ್‌ಗೆ ರೆಸ್ಪಾನ್ಸ್ ಹೇಗಿರುತ್ತೆ? ಅನ್ನುವ ಕುತೂಹಲವೂ ಇದೆ.

'ವಿಕ್ರಾಂತ್ ರೋಣ' ರಿಲೀಸ್‌ಗೂ ಮುನ್ನವೇ ಬ್ಯುಸಿನೆಸ್

'ವಿಕ್ರಾಂತ್ ರೋಣ' ರಿಲೀಸ್‌ಗೂ ಮುನ್ನವೇ ಬ್ಯುಸಿನೆಸ್

ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲ ಸೃಷ್ಟಿಯಾಗಿದೆ. ಕ್ರೇಜ್ ಹೆಚ್ಚಾಗುತ್ತಿದ್ದಂತೆ 'ವಿಕ್ರಾಂತ್ ರೋಣ' ಓವರ್‌ಸೀಸ್ ಮಾರುಕಟ್ಟೆನಲ್ಲಿ ಬೆಲೆ ಹೆಚ್ಚಾಗಿತ್ತು. ಸುಮಾರು 10 ಕೋಟಿ ರೂ.ಗೆ ವಿದೇಶಿ ಹಕ್ಕುಗಳು ಮಾರಾಟ ಆಗಿದೆ. ಇನ್ನು ಬಿಡುಗಡೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಸಿನಿಮಾ ಟ್ರೈಲರ್ ಮೂಲಕ ಪ್ರಚಾರವನ್ನು 'ವಿಕ್ರಾಂತ್ ರೋಣ' ಆರಂಭಿಸಿದೆ.

More from Filmibeat

English summary
Salman Khan to Digitally Launch Sudeep's Vikrant Rona Movie Trailer in Hindi on June 23, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X