ಖದೀಮರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಲ್ಮಾನ್ ಖಾನ್

ತಮ್ಮ ಫಾರ್ಮ್ ಹೌಸ್‌ನಲ್ಲಿ ಗೆಳತಿ ಇಯುಲಿಯಾ ವಂಚುರ್ ಜತೆ ಕಾಲ ಕಳೆಯುತ್ತಿರುವ ಸಲ್ಮಾನ್ ಖಾನ್ ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡಿಸ್ ಜತೆ ಹಾಗೂ ಸಿಯೆನ್ನಾ ಜತೆಗೆ ಚಿತ್ರೀಕರಿಸಿದ 'ಪ್ಯಾರ್ ಕರೋನಾ' ಮತ್ತು 'ತೇರೇ ಬಿನ್' ಎಂಬ ಎರಡು ಮ್ಯೂಸಿಕ್ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದರು.

ಅದರ ಬೆನ್ನಲ್ಲೇ ಸಲ್ಮಾನ್ ಖಾನ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆಸಕ್ತರು ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಫಿಲಂ ಪ್ರೊಡಕ್ಷನ್ ಹೌಸ್ ಮೂಲಕ ಮುಂದಿನ ಸಿನಿಮಾಗಳಿಗಾಗಿ ಪಾತ್ರಧಾರಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಫೇಕ್ ಇಮೇಲ್ ಓಡಾಡುತ್ತಿದೆ. ಇದರ ವಿರುದ್ಧ ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕಿಡಿಕಾರಿದ್ದಾರೆ.

ಸುಳ್ಳು ಸಂದೇಶ ನಂಬಬೇಡಿ

ಸುಳ್ಳು ಸಂದೇಶ ನಂಬಬೇಡಿ

'ನಾನು ಅಥವಾ ಸಲ್ಮಾನ್ ಖಾನ್ ಫಿಲಂಸ್ ಪ್ರಸ್ತುತ ಯಾವುದೇ ಚಿತ್ರಕ್ಕೆ ಆಡಿಷನ್ ಮಾಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ನಮ್ಮ ಮುಂದಿನ ಚಿತ್ರಕ್ಕಾಗಿ ಯಾವುದೇ ಕ್ಯಾಸ್ಟಿಂಗ್ ಏಜೆಂಟ್‌ಅನ್ನು ನೇಮಿಸಿಕೊಂಡಿಲ್ಲ. ಈ ಉದ್ದೇಶವನ್ನು ಹೇಳಿಕೊಳ್ಳುವ ಯಾವುದೇ ಇಮೇಲ್ ಅಥವಾ ಮೆಸೇಜ್‌ಗಳನ್ನು ನಂಬಬೇಡಿ' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಕ್ರಮ ಕೈಗೊಳ್ಳುವ ಎಚ್ಚರಿಕೆ

ಕ್ರಮ ಕೈಗೊಳ್ಳುವ ಎಚ್ಚರಿಕೆ

'ಸಲ್ಮಾನ್ ಖಾನ್ ಫಿಲಂಸ್ ಅಥವಾ ನನ್ನ ಹೆಸರನ್ನು ಯಾವುದೇ ರೀತಿಯ ಅನಧಿಕೃತ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸಲ್ಮಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಲಾಕ್ ಡೌನ್‌ನಿಂದ ಫಾರ್ಮ್ ಹೌಸ್‌ನಲ್ಲಿ

ಲಾಕ್ ಡೌನ್‌ನಿಂದ ಫಾರ್ಮ್ ಹೌಸ್‌ನಲ್ಲಿ

ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾದ ಸಮಯದಲ್ಲಿ ಸಲ್ಮಾನ್ ಖಾನ್ ಪಾನ್ವೆಲ್ ಫಾರ್ಮ್ ಹೌಸ್‌ನಲ್ಲಿ ತಮ್ಮ ಕುಟುಂಬದ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರ ಜತೆಗೆ ಕಾಲ ಕಳೆಯುತ್ತಿದ್ದರು. ಅಂದಿನಿಂದಲೂ ಅವರೆಲ್ಲರೂ ಅಲ್ಲಿಯೇ ಇದ್ದಾರೆ.

ಮುಂಬೈಗೆ ಬಂದಿಲ್ಲ ಸಲ್ಲು

ಮುಂಬೈಗೆ ಬಂದಿಲ್ಲ ಸಲ್ಲು

ಸಲ್ಮಾನ್ ಖಾನ್ ಬುಧವಾರ ಫಾರ್ಮ್ ಹೌಸ್‌ನಿಂದ ಮುಂಬೈಗೆ ಮರಳಿದ್ದು, ತಮ್ಮ ಪೋಷಕರ ಜತೆಗೆ ಸಮಯ ಕಳೆಯಲು ಬಯಸಿದ್ದಾರೆ ಎನ್ನಲಾಗಿತ್ತು. ಆದರೆ ಅವರಿಗೆ ಆಪ್ತರಾಗಿರುವ ಮೂಲಗಳು ಈ ವರದಿಗಳನ್ನು ನಿರಾಕರಿಸಿವೆ. ಸಲ್ಮಾನ್ ಇನ್ನೂ ಫಾರ್ಮ್ ಹೌಸ್‌ನಲ್ಲಿಯೇ ಇದ್ದಾರೆ ಎಂದು ತಿಳಿಸಿವೆ.

More from Filmibeat

English summary
Bollywood actor Salman Khan slams fake news about his production house and cleared that he is not casting for his future films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X