ಆಲಿಯಾ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ನೋಡಿ ಸಮಂತಾ ಹೇಳಿದ್ದೇನು?
ಆಲಿಯಾ ಭಟ್ ನಟಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ನೋಡಿದವರೆಲ್ಲರೂ ಗಂಗೂಬಾಯಿ ಕಂಡು ಮೂಕವಿಸ್ಮಿತರಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ, ಆಲಿಯಾ ಭಟ್ ಅಭಿನಯ ಎಲ್ಲವೂ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹಿಡಿದಿಟ್ಟಿದೆ. ರಿಲೀಸ್ ಆದ ದಿನದಿಂದ ಬಿಡುಗಡೆವರೆಗೂ ಆಲಿಯಾ ಭಟ್ ಹೊಗಳದವರೇ ಇಲ್ಲವೇನೋ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿ, ನಿರ್ಮಿಸಿರುವ ಈ ಸಿನಿಮಾ ಆರಂಭದಿಂದಲೇ ವಿವಾದಕ್ಕೆ ಸಿಲುಕಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಸಿನಿಮಾ ಬಿಡುಗಡೆಗೂ ಮುನ್ನ ಕೋರ್ಟ್ ಕಟಕಟೆಯಲ್ಲಿತ್ತು. ಸುಪ್ರೀಂ ಕೋರ್ಟ್ ಚಿತ್ರದ ಟೈಟಲ್ ಅನ್ನು ಬದಲಾವಣೆ ಮಾಡಲು ಸಲಹೆ ನೀಡಿತ್ತು. ಒಂದು ಕಡೆ ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ, ಸಿನಿಮಾ ಬಿಡುಗಡೆಯಾಗುವುದು ಅನುಮಾನ ಎನ್ನುವಂತಾಗಿತ್ತು. ಕೊನೆಗೂ ಸಿನಿಮಾ ತೆರೆಕಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ನಟಿ ಸಮಂತಾ ಈ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಗಂಗೂಬಾಯಿ' ಮಾಸ್ಟರ್ ಪೀಸ್ ಎಂದ ಸಮಂತಾ
ಸಮಂತಾ ರುತ್ ಪ್ರಭು 'ಗಂಗೂಬಾಯಿ ಕಾಠಿಯಾವಾಡಿ' ಬಾಲಿವುಡ್ ಸಿನಿಮಾ ವೀಕ್ಷಿಸಿದ್ದಾರೆ. ಈ ಸಿನಿಮಾ ನೋಡಿದ ಬಳಿಕ ಸಮಂತಾಗೆ ಸುಮ್ಮನಿರುವುದಕ್ಕೆ ಸಾಧ್ಯವಾಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸಮಂತಾ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ನಟನೆ, ಸಂಜಯ್ ಲೀಲಾ ಬನ್ಸಾಲಿ ನಟನೆ ಎಲ್ಲವೂ ಸಮಂತಾರನ್ನು ಮತ್ತಷ್ಟು ಕಾಡಿದೆ. ಈ ಕಾರಣಕ್ಕೆ ಸಮಂತಾ ಗಂಗೂಬಾಯಿ ಸಿನಿಮಾವನ್ನು 'ಮಾಸ್ಟರ್ ಪೀಸ್' ಎಂದು ಕರೆದಿದ್ದಾರೆ.

ಡೈಲಾಗ್ ನೆನಪಿನಲ್ಲಿರುತ್ತೆ ಎಂದ ಸಮಂತಾ
ಒಂದೇ ಪದದಲ್ಲಿ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಬಗ್ಗೆ ಸಮಂತಾ ಹೇಳಿ ಮುಗಿಸಿಲ್ಲ. ಆಲಿಯಾ ಹಾಗೂ ಸಿನಿಮಾ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. "ಮಾಸ್ಟರ್ ಪೀಸ್ ನಿನ್ನ ಅಭಿನಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸಿನಿಮಾದಲ್ಲಿ ಆಲಿಯಾ ಭಟ್ ಹೇಳಿದ ಪ್ರತಿಯೊಂದು ಡೈಲಾಗ್ ಹಾಗೂ ಎಕ್ಸ್‌ಪ್ರೆಷನ್ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ," ಎಂದು ತನ್ನ ಇನ್‌ಸ್ಟಾಗ್ರಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಹಿಳಾ ಪ್ರಧಾನ ಸಿನಿಮಾ ಕಡೆ ಒತ್ತು
ವಿವಾಹದ ಬಳಿಕ ಸಮಂತಾ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ನಟಿಸಿದ್ದಾರೆ. 'ಯೂ ಟರ್ನ್' ನಿಂದ ಹಿಡಿದು ಈಗ ಬಿಡುಗಡೆ ಸಜ್ಜಾಗಿರುವ 'ಶಾಕುಂತಲಂ' ಸಿನಿಮಾವರೆಗೂ ಹಲವು ಸಿನಿಮಾಗಳು ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಈ ಕಾರಣಕ್ಕೆ ಆಲಿಯಾ ಭಟ್ ನಟಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಇಷ್ಟ ಆಗಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಸಮಂತಾ ಇಂತಹದ್ದೇ ಒಂದು ಪಾತ್ರದಲ್ಲಿ ನಟಿಸಿದರೂ ಅಚ್ಚರಿಯಿಲ್ಲ ಎನ್ನುತ್ತಿವೆ ಟಾಲಿವುಡ್.

ಗಲ್ಲಾಪೆಟ್ಟಿಗೆಯಲ್ಲಿ ಗಂಗೂಬಾಯಿ ಗಿಲಿಗಿಲಿ
'ಗಂಗೂಬಾಯಿ ಕಾಠಿಯಾವಾಡಿ' ಬಾಕ್ಸಾಫೀಸ್‌ನಲ್ಲೂ ಜಾದು ಮಾಡುತ್ತಿದೆ. ಮೊದಲ ದಿನ 'ಗಂಗೂಬಾಯಿ' 10.50 ಕೋಟಿ ಗಳಿಸಿದೆ. ಎರಡನೇ ದಿನ ಸಮಾರು 13 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಎರಡು ದಿನಕ್ಕೆ ಒಟ್ಟು 23 ಕೋಟಿ ಕಲೆಕ್ಷನ್ ಆಗಿದ್ದು, ಈ ವಾರ ಮುಗಿಯುವುದರೊಳಗೆ 40 ಕೋಟಿ ಕಲೆಹಾಕಬಹುದು ಎಂದು ಅಂದಾಜಿಸಲಾಗಿದೆ. 'ಗಂಗೂಬಾಯಿ' ಸಿನಿಮಾ ಗಳಿಕೆ 100 ಕೋಟಿ ದಾಟಿದರೆ, ಮಾರ್ಚ್ 25ಕ್ಕೆ ತೆರೆಕಾಣುತ್ತಿರುವ ಆಲಿಯಾ ನಟಿಸಿದ RRR ಸಿನಿಮಾಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಲಿದೆ.


Click it and Unblock the Notifications











