ದುಬೈನಲ್ಲಿ ಸ್ನೇಹಿತೆಯರೊಂದಿಗೆ ಸಮಂತಾ ನೈಟ್ ಔಟ್: ಫೋಟೊ ವೈರಲ್!

ಸಮಂತಾ ಬಿಡುವು ಸಿಕ್ಕಾಗಲೆಲ್ಲಾ ಸ್ನೇಹಿತೆಯರೊಂದಿಗೆ ಸುತ್ತಾಡುತ್ತಾರೆ. ಅದರಲ್ಲೂ ನಾಗಚೈತನ್ಯರಿಂದ ಬೇರೆಯಾದ ಮೇಲಂತೂ ಸಮಂತಾ ಸುತ್ತಾಟವನ್ನು ಹೆಚ್ಚು ಮಾಡಿದ್ದಾರೆ. ಇದಕ್ಕೆ ಸಮಂತಾ ಶೇರ್ ಮಾಡಿರುವ ಹಲವು ಫೋಟೊಗಳೇ ಸಾಕ್ಷಿ.

ಈಗ ಸಮಂತಾ ಗೆಳತಿಯರು ಕೆಲವು ಫೋಟೊವನ್ನು ಶೇರ್ ಮಾಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡು ಸ್ನೇಹಿತೆಯರೊಂದಿಗೂ ಸೇರುತ್ತಿದ್ದಾರೆ. ಸದ್ಯ ಸಮಂತಾ ಸ್ನೇಹಿತೆಯ ಕುಟುಂಬದೊಂದಿಗೆ ದುಬೈನಲ್ಲಿ ಕಾಲ ಕಳೆದಿದ್ದಾರೆ.

ಸ್ನೇಹಿತೆಯರೊಂದಿಗೆ ಸಮಂತಾ

ಸ್ನೇಹಿತೆಯರೊಂದಿಗೆ ಸಮಂತಾ

ಸಮಂತಾ ಈಗ ದುಬೈ ಪ್ರವಾಸದಲ್ಲಿದ್ದಾರೆ. ತನ್ನ ಸ್ನೇಹಿತರೊಂದಿಗೆ ದುಬೈನಲ್ಲಿರುವ ಫೋಟೊ ಈಗ ವೈರಲ್ ಆಗಿದೆ. ಫ್ಯಾಷನ್ ಡಿಸೈನರ್ ಹಾಗೂ ಉದ್ಯಮಿ ಶಿಲ್ಪ ರೆಡ್ಡಿ ಈ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶಿಲ್ಪ ರೆಡ್ಡಿ ಹಾಗೂ ಅವರ ಸಹೋದರಿ ಸಾಹಿತ್ಯಾ ರೆಡ್ಡಿ ಹಾಗೂ ಅವರ ಪುತ್ರ ನೊಂದಿಗೆ ಸಮಂತಾ ದುಬೈನಲ್ಲಿರುವ ಫೋಟೊವೇ ಈಗ ವೈರಲ್ ಆಗಿದೆ. ಶಿಲ್ಪ ರೆಡ್ಡಿ ಕೇವಲ ಫ್ಯಾಷನ್ ಡಿಸೈನರ್ ಅಷ್ಟೇ ಅಲ್ಲ, ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಕಾಲಂಗಳನ್ನ ಬರೆಯುತ್ತಾರೆ.

ಸ್ನೇಹ ರೆಡ್ಡಿ ಹೇಳಿದ್ದೇನು?

ಶಿಲ್ಪಾ ರೆಡ್ಡಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸ್ನೇಹಿತೆ ಸಮಂತಾರನ್ನು ಭೇಟಿಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. " ನನ್ನ ಸಹೋದರಿ ಕೊನೆಗೂ ಸಮಂತಾರನ್ನು ಭೇಟಿ ಮಾಡುವ ಅನಿರೀಕ್ಷಿತ ಅವಕಾಶ ಸಿಕ್ಕಿದೆ. ನನ್ನ ಸಹೋದರಿ ಸ್ಯಾಮ್ ಅನ್ನು ಮತ್ತು ಸ್ಯಾಮ್ ನನ್ನ ಸಹೋದರಿಯನ್ನು ಭೇಟಿ ಮಾಡಿದ್ದಾರೆ. ಇವರಿಬ್ಬರು ನನ್ನ ಫೇವರಿಟ್ ಮಹಿಳೆಯರು." ಎಂದು ಶಿಲ್ಪ ರೆಡ್ಡಿ ಬರೆದು ಸಮಂತಾ ಜೊತೆಗಿನ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.

ಬೋಲ್ಡ್ ಫೋಟೊಶೂಟ್‌ನಲ್ಲಿ ಮಿಂಚಿಂಗ್

ಬೋಲ್ಡ್ ಫೋಟೊಶೂಟ್‌ನಲ್ಲಿ ಮಿಂಚಿಂಗ್

ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿಯೇ ಇರುತ್ತಾರೆ. ಅದರಲ್ಲೂ ಇತ್ತೀಚೆಗೆ ಬೋಲ್ಡ್ ಫೋಟೊಶೂಟ್ ಮಾಡಿಸಿ ಫೋಸ್ಟ್ ಮಾಡುತ್ತಿದ್ದಾರೆ. ಕೆಲವರಿಗೆ ಸಮಂತಾ ಫೋಟೊಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮತ್ತೆ ಕೆಲವರು ಈ ಫೋಟೊಗಳ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

ಸಮಂತಾ ಸಿನಿಮಾಗಳಲ್ಲಿ ಬ್ಯುಸಿ

ಸಮಂತಾ ಸಿನಿಮಾಗಳಲ್ಲಿ ಬ್ಯುಸಿ

ಸಮಂತಾ ಬಿಗ್ ಬಜೆಟ್ ಸಿನಿಮಾಗಳಿವೆ. ಈಗಾಗಲೇ 'ಶಾಕುಂತಲಂ' ಸಿನಿಮಾ ಮುಗಿದಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಮಂತಾ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ಕಡೆ 'ಯಶೋಧ' ಕೂಡ ಮಹಿಳಾ ಪ್ರಧಾನ ಸಿನಿಮಾವಾಗಿದ್ದು , ಚಿತ್ರೀಕರಣದ ಹಂತದಲ್ಲಿದೆ. ಬಾಲಿವುಡ್‌ಗೂ ಕಾಲಿಟ್ಟಿದ್ದು, 'ಸಿಟಡೆಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಹಾಲಿವುಡ್ ಸಿನಿಮಾ 'ಅರೇಂಜ್ಮೆಂಟ್ ಆಫ್ ಲವ್'ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಜೊತೆ ವೆಬ್ ಸಿರೀಸ್‌ನಲ್ಲೂ ಬ್ಯುಸಿಯಾಗಿದ್ದಾರೆ.

More from Filmibeat

English summary
Samantha Night Out With Fashion Designer Shilpa Reddy in Dubai, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X