65 ಇಂಜೆಕ್ಷನ್.. 7 ಬಾರಿ IVF.. 4 ಬಾರಿ ಗರ್ಭಪಾತ.. ನೋವನ್ನು ಹಂಚಿಕೊಂಡ 45 ವರ್ಷ ನಟಿಯ ಇನ್‌ಸ್ಟಾ ಪೋಸ್ಟ್ ವೈರಲ್

ಪ್ರತಿಯೊಂದು ಹೆಣ್ಣಿಗೂ ತಾನು ತಾಯಿಯಾಗಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ, ಕೆಲವೊಮ್ಮೆ ಅವರ ಈ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೂ ಇದೆ. ಅದರಲ್ಲೂ ನಟಿಯರು ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿರುತ್ತಾರೆ. 40ರ ಆಸುಪಾಸಿನಲ್ಲಿ ಮದುವೆ ಆಗಿ ಮಕ್ಕಳನ್ನು ಪಡೆಯುವುದಕ್ಕೆ ಪ್ರಯತ್ನ ಪಡುತ್ತಾರೆ. ಆದರೆ, ಆ ವಯಸ್ಸಿನಲ್ಲಿ ಮಗು ಪಡೆಯುವುದು ಅಷ್ಟು ಸುಲಭವಲ್ಲ.

ಸ್ವಾಭಾವಿಕವಾಗಿ ಮಗುವನ್ನು ಪಡೆಯುವುದಕ್ಕೆ ಸಾಧ್ಯವಾಗದ ಇಂತಹ ನಟಿಯರು ಐವಿಎಫ್ ಮೊರೆ ಹೋಗುತ್ತಾರೆ. ಈ ಹಂತದಲ್ಲಿ ಅವರು ಅನುಭವಿಸುವ ನೋವುಗಳನ್ನು ಓಪನ್ ಆಗಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಾಯಿ ತಾಯಿಯನ್ನು ಪಡೆದ ಮಗು ಪಡೆಯುತ್ತಿರುವ ಬಾಲಿವುಡ್ ನಟಿ ಸಂಭಾವನಾ ಸೇಠ್ ತನ್ನ ನೋವಿನ ಜರ್ನಿಯನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Sambhavna Seth shared her 7 IVF attempts 65 injections 4 miscarriages and abortion pain

45 ವರ್ಷದ ಬಾಲಿವುಡ್ ನಟಿ ಸಂಭಾವನಾ ಸೇಠ್ ಇತ್ತೀಚೆಗೆ ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ 'ಸರೋಗಸಿ' (ಬಾಡಿಗೆ ತಾಯಿ) ಮೂಲಕ ತಾಯಿಯಾಗುತ್ತಿರುವ ಈ ಸಂತಸದ ಕ್ಷಣಗಳನ್ನು ಸಂಭಾವನಾ ಸೇಠ್ ಅನುಭವಿಸುತ್ತಿದ್ದಾರೆ. ಮಗು ಪಡೆಯುವುದಕ್ಕೆ ತಾನು ಮಾಡು ಪ್ರಯತ್ನಗಳು ಹಾಗೂ ಅದರಿಂದ ಆದ ನೋವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅಂದ್ಹಾಗೆ, ಬಾಲಿವುಡ್ ನಟಿ ಸಂಭಾವನಾ ಸೇಠ್, 2016ರಲ್ಲಿ ಅವಿನಾಶ್ ದ್ವಿವೇದಿ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರೂ ಐದು ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ನಂತರ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಕಳೆದ 10 ವರ್ಷಗಳಿಂದ ಮಗು ಪಡೆದುಕೊಳ್ಳುವುದಕ್ಕೆ ಅದೆಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ.

ಈ ಹಂತದಲ್ಲಿ ಸಂಭಾವನಾ ಸೇಠ್ ಮಗುವನ್ನು ಪಡೆಯುವುದಕ್ಕೆ ಐವಿಎಫ್ (IVF) ಮೊರೆ ಹೋಗಿದ್ದರು. ಮೂರು ತಿಂಗಳಲ್ಲಿ ಸಂಭಾವನಾ ಸೇಠ್ ಬರೋಬ್ಬರಿ 65 ಇಂಜೆಕ್ಷನ್‌ಗಳನ್ನು ಪಡೆದಿದ್ದರು. ಈ ಹಂತದಲ್ಲಿ ಬಾಲಿವುಡ್ ನಟಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡವನ್ನು ಅನುಭವಿಸಿದ್ದರು. ಆ ವೇಳೆ ತಾನೆಷ್ಟು ನೋವನ್ನು ಅನುಭವಿಸಿದೆ ಎಂಬುವುದನ್ನು ಇನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತಾಯಿ ಆಗಬೇಕು ಅನ್ನೋ ಆಸೆಯಿಂದ ಈ ನೋವುಗಳನ್ನು ಸಹಿಸಿಕೊಂಡಿದ್ದರು. ಐವಿಎಫ್ ಫೆಲ್ಯೂರ್, ನಾಲ್ಕು ಬಾರಿ ಗರ್ಭಪಾತ ಆದರೂ ಸಂಭಾವನಾ ಸೇಠ್ ನಿರಾಸೆಗೊಂಡಿರಲಿಲ್ಲ. ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು. ಕೊನೆಗೂ ಅವರ ಆಸೆ ಈಡೇರುತ್ತಿದೆ. ಕೊನೆಯದಾಗಿ ಮಾತೃತ್ವದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಾಯಿ ತಾಯಿ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ. ಈ ವಿಷಯವನ್ನು ತನ್ನ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಬಾಲಿವುಡ್ ತಾರೆಯರು, ನೆಟಿಜನ್‌ಗಳು ಅಭಿನಂದನೆ ಹಾಗೂ ಶುಭಾಶಗಳನ್ನು ಸುರಿಮಳೆಯನ್ನು ಹರಿಸುತ್ತಿದ್ದಾರೆ. ಇನ್ನು ಅವರ ಕೆಲಸದ ವಿಷಯಕ್ಕೆ ಬಂದರೆ, 45 ವರ್ಷದ ನಟಿ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಭಾವನಾ ಸೇಠ್ ಕೊನೆಯದಾಗಿ 2025ರಲ್ಲಿ ರಿಲೀಸ್ ಆಗಿದ್ದ 'ಮಂಡಲ ಮರ್ಡರ್ಸ್' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಅವರು ಕೆಲವು ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ.

English summary
Sambhavna Seth shared her 7 IVF attempts 65 injections, 4 miscarriages and abortion pain.
Read more about: actress ivf mother
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X