ಮುಸ್ಲಿಂ ಧರ್ಮಗುರು ಕೈ ಹಿಡಿದಿದ್ದ ಗಣೇಶ್ ನಾಯಕಿ ಆಸ್ತಿಯಲ್ಲಿ ಭಾರೀ ಏರಿಕೆ; ಸನಾ ಖಾನ್ ಹತ್ತಿರ ಎಷ್ಟು ಕೋಟಿ ಇದೆ?
ಮಾಜಿ ಬಾಲಿವುಡ್ ನಟಿ ಸನಾ ಖಾನ್ ಚಿತ್ರರಂಗದಿಂದ ದೂರವಿದ್ದಾರೆ. ಈ ನಟಿ ಕನ್ನಡದಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದರು. ಲವ್ ಬ್ರೇಕಪ್ ಆಗುತ್ತಿದ್ದಂತೆ ದಿಢೀರನೇ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದರು. ಬಳಿಕ ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ಸೈಯದ್ ಜೊತೆ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಕೆ ಈಗ ಎರಡನೇ ಮಗುವಿನ ತಾಯಿಯಾಗಿದ್ದಾರೆ.
ನಟನೆಯಿಂದ ದೂರ ಸರಿಯುವುದಕ್ಕಿಂತ ಮುನ್ನ ಚಿತ್ರರಂಗವನ್ನು ತೊರೆಯುತ್ತಿರುವುದಕ್ಕೆ ಕಾರಣವನ್ನು ತಿಳಿದಿದ್ದರು. ಚಿತ್ರೋದ್ಯಮದಿಂದ ಎಲ್ಲವೂ ಸಿಕ್ಕಿದೆ. ಹೆಸರು, ಹಣ, ಗೌರವ ಪಡೆದುಕೊಂಡಿದ್ದೇನೆ. ಆದರೆ, ಚಿತ್ರರಂಗದಿಂದ ದೇವರ ಮೇಲಿನ ನಂಬಿಕೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿ ನಟನೆಗೆ ಗುಡ್ ಬೈ ಹೇಳಿದ್ದರು. ಆ ವೇಳೆ ಸನಾ ಖಾನ್ ಚಿತ್ರರಂಗ ತೊರೆದ ವಿಷಯ ಸಂಚಲನ ಸೃಷ್ಟಿಸಿತ್ತು.

ಇದೇ ನಟಿಯೀಗ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿ ಇದ್ದಾರೆ. ವಿವಾಹದ ಬಳಿಕ 'ಕೂಲ್' ನಟಿ ಸನಾ ಖಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದೇ ವೇಳೆ ಸನಾ ಖಾನ್ ಬಳಿಕ ಇವರು ಆಸ್ತಿ ಮೌಲ್ಯದ ಬಗ್ಗೆನೂ ಚರ್ಚೆ ಶುರುವಾಗಿದೆ. ಅದೇನಂದರೆ, ವಿವಾಹದ ಬಳಿಕ ಈಕೆಯ ಆಸ್ತಿ ಶೇ. 354ರಷ್ಟು ಏರಿಕೆ ಕಂಡಿದೆ ಎಂದು ವರದಿಯಾಗಿದೆ.
ಸನಾ ಖಾನ್ ಚಿತ್ರರಂಗ ತೊರೆಯುವುದಕ್ಕೂ ಮುನ್ನ ಮಾನವೀಯತೆ ಆಧಾರದ ಮೇಲೆ ಕೆಲಸ ಮಾಡಿಕೊಂಡು, ದೇವರ ನಿಯಮಗಳನ್ನು ಪಾಲಿಸಿಕೊಂಡು ಇರುತ್ತೇನೆ. ನಾವು ಹಣ ಮಾಡಲು ಭೂಮಿಗೆ ಬಂದಿಲ್ಲ ಎಂಬು ಗೊತ್ತಾಗಿದ್ದು, ಹಣಕ್ಕಾಗಿಯೇ ಇಡೀ ಜೀವನವನ್ನು ಕಳೆಯುವುದಿಲ್ಲ ಎಂದು ಹೇಳಿದ್ದರು. ಇದೇ ಕಾರಣದಿಂದ ಚಿತ್ರರಂಗದಿಂದ ದೂರ ಉಳಿಯುತ್ತಿದ್ದೇನೆ ಎಂದು ಕಾರಣವನ್ನು ನೀಡಿದ್ದರು.

ಹೀಗೆ ಹೇಳಿ ನಟಿ ಸಾನಾ ಖಾನ್ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಇದೇ ನಟಿಯ ಆಸ್ತಿ ಮದುವೆ ಬಳಿಕ ಏರಿಕೆಯಾಗಿದೆ ಎಂದು ಕೋಯಿಮೋಯ್ ವರದಿ ಮಾಡಿದೆ. ವಿವಾಹಕ್ಕೂ ಮುನ್ನ ಸನಾ ಖಾನ್ ಸಿನಿಮಾ, ಕಿರುತೆರೆ ಹಾಗೂ ರಿಯಾಲಿಟಿ ಶೋ ಅಂತ ಬ್ಯುಸಿಯಾಗಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಾಲಿವುಡ್ ಹಾಗೂ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದರು. 2020ರಲ್ಲಿ ಈ ನಟಿಯ ಒಟ್ಟು ಆಸ್ತಿ 11 ಕೋಟಿ ರೂಪಾಯಿ ಇತ್ತು ಎಂದು ವರದಿ ಮಾಡಲಾಗಿದೆ.
ಅದೇ 2024ರ ವೇಳೆಗೆ ಸನಾ ಖಾನ್ ಆಸ್ತಿಯಲ್ಲಿ ಗಣನೀಯ ಏರಿಕೆಯಾಗಿದೆ. ಚಿತ್ರರಂಗ ತೊರೆದ ಬಳಿಕ ಸನಾ ಖಾನ್ ಕೇವಲ ಗೃಹಿಣಿಯಾಗಿ ಉಳಿದಿಲ್ಲ. ಅವರು ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು ಫೇಸ್ ಸ್ಪಾ ಬೈ ಸನಾ ಖಾನ್ ಹಾಗೂ ಹಯಾ ಬೈ ಸನಾ ಖಾನ್ ಅನ್ನೂ ಎರಡು ಸಂಸ್ಥೆಗಳ ಮಾಲೀಕರು. ಇದರೊಂದಿಗೆ ಪತಿ ಅನಾಸ್ ಸೈಯದ್ ಅವರೊಂದಿಗೆ ಹಯಾತ್ ವೆಲ್‌ಫೇರ್ ಫೌಂಡೇಷನ್ ಅನ್ನು ನಡೆಸುತ್ತಿದ್ದಾರೆ.
2000 ದಿಂದ 2024ರವೆಗೆ ನಾಲ್ಕು ವರ್ಷಗಳಲ್ಲಿ ಸನಾ ಖಾನ್ ಆಸ್ತಿ 50 ಕೋಟಿ ರೂಪಾಯಿ ಆಗಿದೆ ಎಂದು ವರದಿಯಾಗಿದೆ. ಈಕೆಯ ಬಳಿಕ ದುಬಾರಿ ಕಾರುಗಳಿವೆ. ಅವುಗಳಲ್ಲಿ ರೇಂಜ್ ರೋವರ್ ಕಾರು ಕೂಡ ಒಂದು. ಇತ್ತೀಚೆಗೆ ಇಟಲಿ ದೇಶದ ವೀನಸ್‌ಗೂ ಪ್ರವಾಸ ಮಾಡಿ ಬಂದಿದ್ದಾರೆ. ಮೂಲಗಳ ಪ್ರಕಾರ ಈಕೆ ಚಿತ್ರರಂಗ ಬಿಟ್ಟಿದ್ದರೂ ಉದ್ಯಮಿಯಾಗಿ ಯಶಸ್ಸನ್ನು ಕಂಡಿದ್ದಾರೆ.


Click it and Unblock the Notifications











