"ಸಂದೀಪ್ ರೆಡ್ಡಿ ವಂಗಾಗೆ ಉಗಿದಂಗೆ ಸಂಜಯ್ ಲೀಲಾ ಬನ್ಸಾಲಿಗೆ ಯಾಕೆ ಉಗೀತಿಲ್ಲ" ; ಹೀಗೊಂದು ಧ್ವನಿ ಎದ್ದಿರೋದೇಕೆ?
ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್‌ನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಈಗಾಗಲೇ ಇವರ ನಿರ್ದೇಶನದ ಸಿನಿಮಾಗಳಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. 'ಕಾಮೋಶಿ', 'ದೇವದಾಸ್', 'ಹಮ್ ದಿಲ್ ದೇ ಚುಕೆ ಸನಮ್', 'ಬಾಜಿರಾವ್ ಮಸ್ತಾನಿ' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿವೆ. ಜನರು ಕೂಡ ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿ 'ಹೀರಾಮಂಡಿ' ಅನ್ನುವ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ವೆಬ್ ಸೀರಿಸ್ ಸದ್ದು ಮಾಡುತ್ತಿದೆ. ಇದೊಂದು ಕಡೆಯಾದರೆ, ಈ ವೆಬ್ ಸೀರಿಸ್ ಬಗ್ಗೆ ಮಾತಾಡುವಾಗ ಸಂಜಯ್ ಲೀಲಾ ಬನ್ಸಾಲಿ ಮಹಿಳೆಯ ಬಗ್ಗೆ ವ್ಯಕ್ತಪಡಿಸಿದ ತಮ್ಮ ಅಭಿಪ್ರಾಯಗಳ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ಸಂದೀಪ್ ರೆಡ್ಡಿ ವಂಗಾ 'ಅನಿಮಲ್' ಸಿನಿಮಾ ತೆಗೆದಾಗ, ವಿರೋಧಿಸಿದವರು ಈಗೆಲ್ಲಿ? ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ದಕ್ಷಿಣ ಭಾರತದ ನಿರ್ದೇಶಕ ಬಾಲಿವುಡ್‌ನಲ್ಲಿ ಮೆಗಾ ಹಿಟ್ ಕೊಟ್ಟು ಗೆದ್ದಿದ್ದಾರೆ. ರಣ್‌ಬೀರ್ ಕಪೂರ್‌ಗಾಗಿ 'ಅನಿಮಲ್' ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಆದರೆ, ಮಹಿಳೆ ನಿರ್ದೇಶಕರ ದೃಷ್ಟಿಕೋನದ ಬಗ್ಗೆ ವಿರೋಧಗಳು ವ್ಯಕ್ತವಾಗಿದ್ದವು. ಸಿನಿಮಾ ವಲಯದಲ್ಲಿ, ರಾಜಕೀಯ ಮುಖಂಡರು, ಚಿಂತಕರೆಲ್ಲರೂ ಸಂದೀಪ್ ರೆಡ್ಡಿ ವಂಗಾ ಮೇಲೆ ಮುಗಿಬಿದ್ದಿದ್ದರು. ಆದ್ರೀಗ ಸಂಜಯ್ ಲೀಲಾ ಬನ್ಸಾಲಿ ಹೇಳಿಕೆಗಳನ್ನು ಯಾಕೆ ವಿರೋಧಿಸುತ್ತಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಂಜಯ್ ಲೀಲಾ ಬನ್ಸಾಲಿ ಅಂತಹದ್ದೇನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ..
ಸಂದೀಪ್ ರೆಡ್ಡಿ ವಂಗಾ ಬೆಂಬಲಿಗರು ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ತಿರುಗಿಬಿದ್ದಿದ್ದಾರೆ. ಸಂದೀಪ್ ರೆಡ್ಡಿ ವಂಗಾಯ 'ಅನಿಮಲ್' ನೋಡಿ ಮಹಿಳಾ ವಿರೋಧಿ ಸಿನಿಮಾ ಮಾಡಿದ್ದಾರೆಂದು ಮಹಿಳಾವಾದಿಗಳು ಹಾಗೂ ಸಮಾಜದ ಕೆಲವರು ಮುಖಂಡರು ಟೀಕಿಸಿದ್ದರು. ಈಗ ಸಂಜಯ್ ಲೀಲಾ ಬನ್ಸಾಲಿ ಕೂಡ ತನ್ನ 'ಹೀರಾಮಂಡಿ' ವೆಬ್ ಸೀರಿಸ್ ಬಗ್ಗೆ ಮಹಿಳಾ ವಿರೋಧಿ ಕಾಮೆಂಟ್‌ಗಳನ್ನು ಮಾಡಿದ್ದಾರೆಂಬುದು ಸಂದೀಪ್ ರೆಡ್ಡಿ ವಂಗಾ ಸಪೋರ್ಟ್‌ಗಳ ವಾದ.
ಅಸಲಿಗೆ ಸಂಜಯ್ ಲೀಲಾ ಬನ್ಸಾಲಿ ಏನು ಹೇಳಿದ್ದಾರೆಂದರೆ, "ನಾನು ವೇಶ್ಯೆಯರನ್ನು ನಿಗೂಢ ಹಾಗೂ ಶಕ್ತಿಯುತ ಮಹಿಳೆಯರಂತೆ ನೋಡುತ್ತೇನೆ. ಅವರು ಹಾಡುತ್ತಾರೆ, ನೃತ್ಯ ಮಾಡುತ್ತಾರೆ. ಕಲೆಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಜೀವನ, ವಾಸ್ತುಶಿಲ್ಪ, ಫ್ಯಾಷನ್ ಹಾಗೂ ಆಭರಣಗಳ ಅವರಿಗೆ ಅರಿವಿದೆ. ಅವರು ಕಲೆಯ ನಿಜವಾದ ಜ್ಞಾನ ಇರುವವರು. ಪಡಿತರ ಚೀಟಿ ಹಿಡಿದು ನಿಲ್ಲುವ ಮಧ್ಯಮ ವರ್ಗದ ಮಹಿಳೆಯರು ನನ್ನನ್ನು ಆಕರ್ಷಿಸುವುದಿಲ್ಲ." ಎಂದು ಹೇಳಿದ್ದರು.

ಸಂಜಯ್ ಲೀಲಾ ಬನ್ಸಾಲಿಯ ಮಧ್ಯಮ ವರ್ಗದ ಮಹಿಳೆಯ ಮೇಲಿನ ಹೇಳಿಕೆ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್‌ನಲ್ಲಿ ಭೇದ ಭಾವ ಮಾಡಲಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ಉಗೀದು ಉಪ್ಪಿನ ಕಾಯಿ ಹಾಕಿದವರು ಈಗ ಎಲ್ಲಿದ್ದಾರೆ? ಸಂಜಯ್ ಲೀಲಾ ಬನ್ಸಾಲಿ ಮಹಿಳೆಯ ಮೇಲೆ ಇಟ್ಟಿರುವ ಅಭಿಪ್ರಾಯದ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಕೆಲ ಬೆಂಬಲಿಗರು ಆರೋಪ ಮಾಡುತ್ತಿದ್ದಾರೆ.
ಏನೇ ಇದ್ದರೂ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಹೀರಾಮಂಡಿ' ವೆಬ್ ಸೀರಿಸ್ ಬಾಲಿವುಡ್‌ನಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಸಿನಿಮಾ ಮಾಡಿ ಗೆದ್ದ ಸಂಜಯ್ ಲೀಲಾ ಬನ್ಸಾಲಿ ವೆಬ್ ಸೀರಿಸ್‌ನಲ್ಲಿ ಸೋತಿದ್ದಾರೆ ಅಂತ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ. ಇನ್ನು ಈ ವಿವಾದದಿಂದ ವೆಬ್ ಸೀರಿಸ್‌ಗೆ ನೋಡುವವರ ಸಂಖ್ಯೆ ಹೆಚ್ಚಾದರೂ ಆಗಬಹುದು.


Click it and Unblock the Notifications











