3 ವರ್ಷದಿಂದ ಶೋಯೆಬ್‌ಗೆ ಅಫೇರ್ ಇತ್ತು, ಇದು ಸಾನಿಯಾ ಮಿರ್ಜಾಗೂ ಗೊತ್ತಿತ್ತು; ಪಾಕ್ ಪತ್ರಕರ್ತ ಬಾಂಬ್

ಕಳೆದ ಕೆಲವು ದಿನಗಳಿಂದ ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ವಿಚ್ಚೇದನದ ಬಗ್ಗೆ ಚರ್ಚೆ. ಇತ್ತೀಚೆಗೆ ಮಾಜಿ ಪತಿ ಶೋಯೆಬ್ ಮಲಿಕ್ ಮೂರನೇ ಮದುವೆ ಆಗಿದ್ದನ್ನು ಘೋಷಣೆ ಮಾಡಿದ ಬೆನ್ನಲ್ಲೇ ಸಾನಿಯಾ ಹಾಗೂ ಶೊಯೆಬ್ ಮಲಿಕ್ ದಾಂಪತ್ಯ ಮುರಿದುಬಿದ್ದಿದ್ದು ಕನ್ಫರ್ಮ್ ಆಗಿತ್ತು.

2010ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟರ್ ಶೋಯೆಬ್ ಮಲಿಕ್ ಜೊತೆ ಸಾನಿಯಾ ಮಿರ್ಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಶೋಯೆಬ್ ಮಲಿಕ್‌ಗೆ ಸಾನಿಯಾ ಜೊತೆ ಎರಡನೇ ಮದುವೆ ಆಗಿತ್ತು. 2018ರಲ್ಲಿ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ ಸಂಗತಿಯನ್ನು ಶೋಯೆಬ್ ಮಲಿಕ್ ಸೋಶಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದರು.

Sania Mirza knew that Shoaib Malik and Sana Javed were in an extramarital affair for 3 years

ಆದ್ರೀಗ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೆದ್ ಜೊತೆ ಮೂರನೇ ಮದುವೆ ಆಗಿದ್ದಾರೆ. ಈ ಬಗ್ಗೆ ಪಾಕಿಸ್ತಾನದಲ್ಲೇ ಪರ ವಿರೋಧ ಚರ್ಚೆಯಾಗುತ್ತಿದೆ. ಈ ಘಟನೆಯ ಬಳಿಕ ಪಾಕಿಸ್ತಾನದ ಸಮಾ ಟಿವಿಯ ಪತ್ರಕರ್ತ ನಯೀಮ್ ಹನೀಫ್ ಹೊಸ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನಿ ನಟಿ ಸನಾ ಜಾವೆದ್ ಜೊತೆ ಶೋಯೆಬ್ ಮಲಿಕ್ ಅಫೇರ್ ಇಟ್ಟುಕೊಂಡಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.

ಸನಾ ಜಾವೆದ್ ಹಾಗೂ ಶೋಯೆಬ್ ಮಲಿಕ್ ಇಬ್ಬರೂ 'ಜೀತೊ ಪಾಕಿಸ್ತಾನ್' ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರೂ ಆಗಾಗ ಭೇಟಿ ಮಾಡುತ್ತಲೇ ಇದ್ದಾರೆ. ಸುಮಾರು 3-4 ವರ್ಷಗಳಿಂದ ಶೋಯೆಬ್ ಮಲಿಕ್ ಹಾಗೂ ಸನಾ ಜಾವೆದ್ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದರು. ಆ ವೇಳೆ ಸನಾ ಜಾವೆದ್ ಪಾಕಿಸ್ತಾನದ ಗಾಯಕ ಉಮೈರ್ ಜಸ್ವಾಲ್‌ರನ್ನು ವಿವಾಹವಾಗಿದ್ದರೆಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಶೋಯೆಬ್ ಮಲಿಕ್ ಯಾವುದೇ ಕಾರ್ಯಕ್ರಮಕ್ಕೆ ಭೇಟಿ ನೀಡಬೇಕಿದ್ದರೂ, ಆಯೋಜಕರು ಸನಾ ಜಾವೆದ್‌ಗೂ ಆಹ್ವಾನ ನೀಡಬೇಕಿತ್ತು. ಶೋಯೆಬ್ ಮಲಿಕ್ ಇಂತಹದ್ದೊಂದು ಷರತ್ತು ಹಾಕುತ್ತಿದ್ದರು. ಆದರೆ, ಇದು ಯಾರಿಗೂ ಗಮನಕ್ಕೆ ಬಂದಿರಲಿಲ್ಲ. ಯಾಕಂದ್ರೆ, ಸನಾ ಜಾವೆದ್ ಅದಾಗಲೇ ಉಮೈರ್ ಜೆಸ್ವಾಲ್‌ರನ್ನು ವಿವಾಹವಾಗಿದ್ದರು ಎಂದು ಪಾಕಿಸ್ತಾನ ಪತ್ರಕರ್ತ ನಯೀಮ್ ಹನೀಫ್ ಹೇಳಿಕೊಂಡಿದ್ದಾರೆ.

Sania Mirza knew that Shoaib Malik and Sana Javed were in an extramarital affair for 3 years

ಶೋಯೆಬ್ ಮಲಿಕ್ ಅಫೇರ್ ಬಗ್ಗೆ ಸಾನಿಯಾ ಮಿರ್ಜಾಗೆ ಆರಂಭದಲ್ಲೇ ಗೊತ್ತಿತ್ತು. ಆಗಲೇ ತನ್ನ ಕುಟುಂಬಕ್ಕೆ ಶೋಯೆಬ್ ಮಲಿಕ್ ವಿವಾಹೇತರ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು. ಆ ಬಳಿಕ ದುಬೈನಲ್ಲಿರುವ ನಿವಾಸದಲ್ಲಿ ಮಾತುಕತೆ ಕೂಡ ನಡೆದಿತ್ತು. ಈ ವೇಳೆ ಶೋಯೆಬ್ ಮಲಿಕ್ ಕುಟುಂಬ ಕೂಡ ಸಾನಿಯಾ ಮಿರ್ಜಾ ಬೆಂಬಲಕ್ಕೆ ನಿಂತಿದ್ದರು. ಅವರಿಗೆ ಸನಾ ಜಾವೆದ್‌ರನ್ನು ವಿವಾಹವಾಗುವುದು ಇಷ್ಟವಿರಲಿಲ್ಲವೆಂದು ಪಾಕ್ ಪತ್ರಕರ್ತ ಹೇಳಿಕೊಂಡಿದ್ದಾರೆ.

ಸನಾ ಜಾವೆದ್ ಮೂರು ವರ್ಷಗಳಿಂದ ಅಫೇರ್ ಇಟ್ಟುಕೊಂಡಿದ್ದರೂ, ಕೇವಲ 2-3 ತಿಂಗಳ ಹಿಂದಷ್ಟೇ ಪತಿ ಉಮೈರ್ ಜೆಸ್ವಾಲ್‌ಗೆ ತಿಳಿಸಿದ್ದರು. ಪತಿಯಿಂದ ವಿಚ್ಛೇದನ ಕೇಳಿದಾಗ ಉಮೈರ್ ಜೆಸ್ವಾಲ್ ಶಾಕ್ ಆಗಿದ್ದರು. ಅಲ್ಲಿವರೆಗೂ ಅವರಿಗೆ ಈ ವಿಷಯವೇ ಗೊತ್ತಿರಲಿಲ್ಲ. ಇನ್ನೊಂದು ಕಡೆ ಶೋಯೆಬ್ ಮಲಿಕ್ ಕುಟುಂಬವೇ ಈ ವಿವಾಹ ಸಮಾರಂಭಕ್ಕೆ ಹಾಜರಿ ಹಾಕಿಲ್ಲ ಎಂದೂ ಹೇಳಿದ್ದಾರೆ.

ಕೆಲವು ತಿಂಗಳಿಂದ ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಓಡಾಡುತ್ತಲೇ ಇತ್ತು. ಶೋಯೆಬ್ ಮೂರನೇ ಮದುವೆ ಬಳಿಕ ಅದು ನಿಜ ಅಂತ ಸಾಬೀತಾಗಿದೆ. ಶೋಯೆಬ್‌ ಮಲಿಕ್‌ಗೆ ಸ್ವತ: ಸಾನಿಯಾ ಮಿರ್ಜಾ ವಿಚ್ಛೇದನ ನೀಡಿದ್ದಾರೆಂದು ಅವರ ಕುಟುಂಬವೇ ರಿವೀಲ್ ಮಾಡಿತ್ತು. ಸದ್ಯ ಸಾನಿಯಾ ಮಿರ್ಜಾ ಮುಂದಿನ ಹಾದಿ ಏನು? ಅನ್ನೋದನ್ನು ಅವರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

More from Filmibeat

English summary
Sania Mirza ex husband Shoaib Malik extramarital affair exposed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X