ಪತ್ನಿಯ ಮಾಜಿ ಬಾಯ್‌ಫ್ರೆಂಡ್ ಜೊತೆ ನಟಿಸಲು ಮುಂದಾದ ವಿಕ್ಕಿ ಕೌಶಲ್: ಒಗ್ಗೂಡಿಸಿದ್ದು ಬನ್ಸಾಲಿ!
ಬಾಲಿವುಡ್ ಮಂದಿನೇ ಹಾಗೇ.. ಇದಕ್ಕೆ ಮೆಚ್ಯೂರಿಟಿ ಅಂತ ಕರೀಬೇಕಾ? ಇಲ್ಲ ಅವಕಾಶ ಅಂತ ಹೇಳಬೇಕಾ? ಇಂತಹದ್ದೊಂದು ಪ್ರಶ್ನೆ ಮೂಡುತ್ತೆ. ಬ್ರೇಕಪ್ ಮಾಡಿಕೊಂಡ ಬಾಯ್‌ಫ್ರೆಂಡ್ ಜೊತೆನೇ ಸಿನಿಮಾ ಮಾಡ್ತಾರೆ. ಈ ಹಿಂದೆ ಏನೂ ನಡೆದೇ ಇಲ್ಲವೇನೋ ಅನ್ನುವಂತೆ ಇರುತ್ತಾರೆ. ಇದು ಕೇವಲ ಬಾಲಿವುಡ್‌ನಲ್ಲಿ ಮಾತ್ರ ನೋಡುವುದಕ್ಕೆ ಸಿಗುತ್ತೆ.
ಈಗ್ಯಾಕೆ ಈ ಮಾತು ಅಂದರೆ, ಮತ್ತೊಮ್ಮೆ ಇಂತಹದ್ದೇ ಒಂದು ಡೆಡ್ಲಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ. ಅದರ ಸೂತ್ರಧಾರಿ ಬಾಲಿವುಡ್‌ನ ದುಬಾರಿ ಸಿನಿಮಾಗಳ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಅಷ್ಟಕ್ಕೂ ಆ ಡೆಡ್ಲಿ ಕಾಂಬಿನೇಷನ್ ಯಾವುದು ಅಂತಿರಾ? ಅದ್ಯಾಕೆ ಅಷ್ಟೊಂದು ಗಮನ ಸೆಳೆಯುತ್ತಿದೆ? ಯಾಕೀ ಸಿನಿಮಾ ಕಣ್ಣು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಂಜಯ್ ಲೀಲಾ ಬನ್ಸಾಲಿ 'ಲವ್ ಅಂಡ್ ವಾರ್' ಅನ್ನೋ ಸಿನಿಮಾಗೆ ಕೈ ಹಾಕಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯ ಸಿನಿಮಾ. ಕಳೆದ ಕೆಲವು ದಿನಗಳಿಂದ ಇನ್ನೇನು ಶೂಟಿಂಗ್ ಶುರುವಾಗುತ್ತೆ ಅನ್ನೋ ಮಾತು ಕೇಳಿ ಬರುತ್ತಲೇ ಇದೆ. ಬಂದಾಗಲೆಲ್ಲ ಸದ್ದು ಮಾಡಿದ ಉದಾಹರಣೆಗಳು ಇವೆ.
'ಲವ್ ಅಂಡ್ ವಾರ್' ಆರಂಭಕ್ಕೂ ಮುನ್ನವೇ ಕ್ರೇಜ್ ಹುಟ್ಟಾಕುತ್ತಿರುವುದಕ್ಕೆ ಕಾರಣ ಸ್ಟಾರ್ ಕಾಸ್ಟ್. ರಣ್‌ಬೀರ್ ಕಪೂರ್, ವಿಕ್ಕಿ ಕೌಶಲ್ ಹಾಗೂ ಆಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಕಂಪೋಸ್ ಮಾಡಿರುವ ಇದೇ ಕಾಂಬಿನೇಷನ್ ಈಗ ಜನರಲ್ಲಿ ಕುತೂಹಲ ಹುಟ್ಟಿಸಿದೆ. ಅದ್ಯಾಕೆ ಅಂತ ನೋಡುವುದಾದರೇ.
ಕತ್ರಿನಾ ಕೈಫ್ ಮಾಜಿ ಗೆಳೆಯ ರಣ್‌ಬೀರ್ ಕಪೂರ್ ನಟಿಸುತ್ತಿರುವ ಸಿನಿಮಾದಲ್ಲಿ ಪತಿ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಇದೇ ಸಿನಿಮಾ ರಣ್‌ಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾ ಆಲಿಯಾ ಭಟ್ ಜೊತೆ ವಿಕ್ಕಿ ಕೌಶಲ್ ಕೂಡ ರೊಮ್ಯಾಂಟಿಕ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಇದೊಂದು ಡೆಡ್ಲಿ ಕಾಂಬಿನೇಷನ್ ಅಂತ ಬಾಲಿವುಡ್ ಮಂದಿ ಹೇಳುತ್ತಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ತಮ್ಮ ಕಥೆಯ ಪಾತ್ರಗಳಿಗೆ ಸ್ಟಾರ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೀಗೆನೇ. ಇವರ ಸಿನಿಮಾ ಮೊದಲ ಸ್ಟಾರ್ ಕಾಸ್ಟ್‌ನಿಂದಲೇ ಚರ್ಚೆಯಲ್ಲಿ ಇರುತ್ತೆ. ಈ ಬಾರಿ ಕೂಡ 'ಲವ್ ಅಂಡ್ ವಾರ್' ಹಾಗೇ ಸದ್ದು ಮಾಡುತ್ತಿದೆ. ಅಂದ್ಹಾಗೆ ಈ ಸಿನಿಮಾ ಇದೇ ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗುತ್ತೆ. 2025ಕ್ಕೆ ಸಿನಿಮಾ ರಿಲೀಸ್ ಆಗುತ್ತೆ.
ಸಂಜಯ್ ಲೀಲಾ ಬನ್ಸಾಲಿ 'ಲವ್ ಅಂಡ್ ವಾರ್' ಸಿನಿಮಾವನ್ನು ವಿಂಗಡನೆ ಮಾಡಿ ಶೂಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ ರಣ್‌ಬೀರ್ ಆಕ್ಷನ್ ಸೀನ್‌ಗಳು ಶೂಟ್ ಆಗುತ್ತೆ. ಆ ಬಳಿಕ ರಣ್‌ಬೀರ್ ಹಾಗೂ ವಿಕ್ಕಿ ಕೌಶಲ್ ಫ್ರೆಂಡ್‌ಶಿಪ್ ಸೀನ್‌ಗಳು ಚಿತ್ರೀಕರಣ ಆಗುತ್ತೆ. ಆ ಮೇಲೆ ವಿಕ್ಕಿ ಹಾಗೂ ಆಲಿಯಾ ರೊಮ್ಯಾಂಟಿಕ್ ಸೀನ್‌ಗಳು, ಬಳಿಕ ರಣ್‌ಬೀರ್ ಹಾಗೂ ಆಲಿಯಾ ರೊಮ್ಯಾಂಟಿಕ್ ಕಮ್ ಡ್ರಾಮ ಸೀನ್‌ಗಳು ಶೂಟ್ ಮಾಡುತ್ತಾರೆ ಅಂತ ಹಿಂದಿ ಮಾಧ್ಯಮಗಳು ವರದಿ ಮಾಡಿವೆ.


Click it and Unblock the Notifications











