ಸಿನಿಮಾದಿಂದ ಸುಶಾಂತ್ ಕೈಬಿಡಲು ಕಾರಣವೇನು?: ಪೊಲೀಸರ ಮುಂದೆ ಭನ್ಸಾಲಿ ನೀಡಿದ ವಿವರಣೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಸೋಮವಾರ ಮುಂಬೈನ ಬಾಂದ್ರಾ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದರು.
Recommended Video
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ನಾಲ್ಕು ಚಿತ್ರಗಳ ಆಫರ್ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮೊದಲು ನೀಡಲಾಗಿತ್ತು. ಆದರೆ ಯಾವ ಚಿತ್ರದಲ್ಲಿಯೂ ಸುಶಾಂತ್ ನಟಿಸಿರಲಿಲ್ಲ. ಪ್ರಮುಖ ಚಿತ್ರಗಳು ನಂತರ ರಣವೀರ್ ಸಿಂಗ್ ಪಾಲಾಗಿದ್ದವು.
ಬಾಲಿವುಡ್‌ನಲ್ಲಿ ತಮ್ಮ ಪ್ರತಿಭೆಯ ಮೂಲಕವೇ ಬೆಳೆಯುತ್ತಿದ್ದ ಸುಶಾಂತ್ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಅವರಿಗೆ ಸಿನಿಮಾ ಆಫರ್‌ಗಳನ್ನು ನೀಡಿ ನಂತರ ಕಾರಣ ನೀಡದೆ ಅವರನ್ನು ಕೈಬಿಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇದರಲ್ಲಿ ಭನ್ಸಾಲಿ ಅವರ ಪ್ರಮುಖ ಚಿತ್ರಗಳು ಇದ್ದಿದ್ದರಿಂದ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಪೊಲೀಸರು ಸಮನ್ಸ್ ಕಳುಹಿಸಿದ್ದರು. ಮುಂದೆ ಓದಿ...

ಹೇಳಿಕೆ ದಾಖಲಿಸಿದ ಭನ್ಸಾಲಿ
ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಬಾಂದ್ರಾ ಪೊಲೀಸ್ ಠಾಣೆಗೆ ಹಾಜರಾದ ಸಂಜಯ್ ಲೀಲಾ ಭನ್ಸಾಲಿ, 3.30ರ ಸುಮಾರಿಗೆ ಅಲ್ಲಿಂದ ತೆರಳಿದರು. ಎರಡೂವರೆ ಗಂಟೆಯಷ್ಟು ಸಮಯ ಅವರು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದರು.

ಒಪ್ಪಂದದ ಕಾರಣದಿಂದ ಸಿನಿಮಾ ಸಿಗಲಿಲ್ಲ
'ರಾಮ್ ಲೀಲಾ' ಚಿತ್ರಕ್ಕೆ ಮೊದಲು ಸುಶಾಂತ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸುಶಾಂತ್ ಬೇರೆ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಹೊಂದಿದ್ದರಿಂದ ಅವರನ್ನು ಪ್ರಾಜೆಕ್ಟ್‌ನಿಂದ ಕೈಬಿಡಬೇಕಾಯಿತು ಎಂದು ಭನ್ಸಾಲಿ ತಿಳಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications











