"ಅಪ್ಪನ ಸಿನಿಮಾ ರಿಮೇಕ್ ಮಾಡಿದೆ.. ಅದೇನು ದಬ್ಬಾಕ್ತು?": ತಂದೆ ಸಿನಿಮಾ ಬಗ್ಗೆ ಸಾರಾ ಹೇಳಿದ್ದೇನು?
ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಮಗಳು ಬಾಲಿವುಡ್‌ನಲ್ಲಿ ನೆಲೆಯೂರಿದ್ದು ಆಗಿದೆ. ಸಾರಾ ಅಲಿ ಖಾನ್ ಬಾಲಿವುಡ್‌ನ ಉದಯೋನ್ಮುಖ ನಟಿ ಅನ್ನೋ ಭರವಸೆಯನ್ನೂ ಮೂಡಿಸಿದ್ದಾರೆ. ತಂದೆ-ತಾಯಿಯ ಹಾದಿ ಹಿಡಿಯದೆ, ತನ್ನದೇ ಶೈಲಿಯ ಸಿನಿಮಾ ಮಾಡಿ ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ.
ಸದ್ಯಕ್ಕೀಗ ಸಾರಾ ಅಲಿ ಖಾನ್ ತಮ್ಮ ಹೊಚ್ಚ ಹೊಸ ಸಿನಿಮಾ 'ಗ್ಯಾಸ್‌ಲೈಟ್' ಪ್ರಚಾರ ಮಾಡುತ್ತಿದ್ದಾರೆ. ಮತ್ತೊಬ್ಬ ಬಾಲಿವುಡ್ ನಟಿ ಶೆಹನಾಜ್ ಗಿಲ್ ನಡೆಸಿಕೊಡುವ 'ದೇಸಿ ವೈಬ್ಸ್ ವಿತ್ ಶೆಹನಾಜ್ ಗಿಲ್' ಶೋದಲ್ಲಿ ಸಾರಾ ಅಲಿ ಖಾನ್ ಭಾಗಿಯಾಗಿದ್ದರು. ಈ ವೇಳೆ ತಂದೆಯ ಸಿನಿಮಾ ಬಗ್ಗೆ ಬೋಲ್ಡ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

ಶೆಹನಾಜ್ ಗಿಲ್ ಶೋನಲ್ಲಿ ಯಾಕೆ ರಿಮೇಕ್ ಸಿನಿಮಾ ಮಾಡುವುದಿಲ್ಲ ಅನ್ನೋದನ್ನು ತಂದೆಯ ಸಿನಿಮಾವನ್ನು ಉದಾಹರಣ ಕೊಟ್ಟು ವಿವರಣೆ ಕೊಟ್ಟಿದ್ದಾರೆ. ಸಾರಾ ಅಲಿ ಖಾನ್ ಕೊಟ್ಟ ಇದೇ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಂದೆ ಸೈಫ್ ಅಲಿ ಖಾನ್ ಸಿನಿಮಾ ಬಗ್ಗೆ ಫಿಲ್ಟರ್ ಇಲ್ಲದೆ ನೇರವಾಗಿ ಹೇಳಿಕೆ ಕೊಟ್ಟಿದ್ದಾರೆ.
"ತಂದೆ ಸಿನಿಮಾ ರಿಮೇಕ್ ಮಾಡಿದ್ಮೇಲೆ ಏನಾಯ್ತು?"
ನಟಿ ಶೆಹನಾಜ್ ಗಿಲ್ ತನ್ನ ಶೋನಲ್ಲಿ " ತಾಯಿಯ ಸಿನಿಮಾವನ್ನು ಯಾಕೆ ರಿಮೇಕ್ ಮಾಡುತ್ತಿಲ್ಲ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಾರಾ ಅಲಿ ಖಾನ್ ಹಿಂದೆ ಮುಂದೆ ನೋಡದೆ ತಂದೆ ಸಿನಿಮಾ 'ಲವ್ ಆಜ್ ಕಲ್' ಅನ್ನು ಎಳೆದು ತಂದಿದ್ದರು. " ತಂದೆಯ ಲವ್ ಆಜ್ ಕಲ್ ಸಿನಿಮಾವನ್ನು ರಿಮೇಕ್ ಮಾಡಿದೆ. ಆ ಸಿನಿಮಾ ಏನು ದಬಾಕ್ತು?" ಎಂದು ಪ್ರಶ್ನೆ ಮಾಡಿದ್ದಾರೆ.
ಸಾರಾ ಅಲಿ ಖಾನ್ ಹಾಗೂ ಬಾಲಿವುಡ್ ಯಂಗ್ ಹೀರೊ ಕಾರ್ತಿಕ್ ಆರ್ಯನ್ ಜೋಡಿಯಾಗಿ ನಟಿಸಿದ್ದ ಸಿನಿಮಾ 'ಲವ್ ಆಜ್ ಕಲ್'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಇದನ್ನೇ ಉದಾಹರಣೆಯಾಗಿಟ್ಟುಕೊಂಡು ರಿಮೇಕ್ ಸಿನಿಮಾ ಬಗ್ಗೆ ಬಾಲಿವುಡ್ ನಟಿ ಬೋಲ್ಡ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

"ಅಮ್ಮ ಸಿನಿಮಾ ರಿಮೇಕ್ ಮಾಡೋದಿಲ್ಲ"
ಸಾರಾ ಅಲಿ ಖಾನ್ ನೋಡುವುದಕ್ಕೆ ಅಮ್ಮ ಅಮೃತಾ ಸಿಂಗ್ ಹಾಗೇನೇ ಇದ್ದಾರೆ ಅನ್ನೋ ಕಮೆಂಟ್‌ಗಳು ಕೇಳಿ ಬರುತ್ತಲೇ ಇರುತ್ತವೆ. ಅಮೃತಾ ಸಿಂಗ್ ಕೂಡ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಟಾಪ್ ಹೀರೊಯಿನ್ ಆಗಿದ್ದರು. ಈಗ ಅವರ ಮಗಳು ಕೂಡ ಬಾಲಿವುಡ್‌ನಲ್ಲಿ ಸ್ಟಾರ್ ಹೀರೊಯಿನ್ ಪಟ್ಟಕ್ಕೇರುವುದಕ್ಕೆ ಶತಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ ತಾಯಿಯ ಸಿನಿಮಾವನ್ನು ಯಾಕೆ ರಿಮೇಕ್ ಮಾಡೋದಿಲ್ಲ ಅನ್ನೋದನ್ನು ಸ್ಪಷ್ಟ ಪಡಿಸಿದ್ದಾರೆ.
ಅಮ್ಮ ಅಮೃತಾ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ. ಅದಕ್ಕಿಂತ ಅದ್ಭುತವಾಗಿ ನಟಿಸುವ ಬಗ್ಗೆ ಸಾರಾ ಅಲಿ ಖಾನ್‌ಗೆ ನಂಬಿಕೆಯಿಲ್ಲ. ಹೀಗಾಗಿ ಅಮ್ಮ ಸಿನಿಮಾವನ್ನು ರಿಮೇಕ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆಗ ಶೆಹನಾಜ್ ಖಾನ್ ಹಿರಿಯ ನಟಿ ಅಮೃತಾ ಸಿಂಗ್ ಸಿನಿಮಾದ ವೈಬ್ಸ್, ಕಾಸ್ಟ್ಯೂಮ್ ಎಲ್ಲವೂ ಸಾರಾ ಜೊತೆ ಕನೆಕ್ಟ್ ಆಗಿವೆ. ಹೀಗಾಗಿ ಅಮ್ಮನ ಸಿನಿಮಾವನ್ನು ಮಾಡುವಂತೆ ಒತ್ತಾಯ ಮಾಡಿದ್ರು. ಆಗ ಸಾರಾ ಪ್ರಯತ್ನ ಪಡುವುದಾಗಿ ಹೇಳಿದ್ದಾರೆ.
'ಗ್ಯಾಸ್‌ಲೈಟ್' ಪ್ರಚಾರದಲ್ಲಿ ಬ್ಯುಸಿ
ಸಾರಾ ಅಲಿಖಾನ್ ನಟಿಸಿದ ಬಾಲಿವುಡ್ ಸಿನಿಮಾ 'ಗ್ಯಾಸ್‌ಲೈಟ್' ಈಗಾಗಲೇ ಓಟಿಟಿಯಲ್ಲಿ ರಿಲೀಸ್ ಆಗಿದೆ. ಸಾರಾ ಜೊತೆಗೆ ಚಿತ್ರಾಂಗದ ಸಿಂಗ್ ಹಾಗೂ ವಿಕ್ರಾಂತ್ ಮಾಸ್ಸೆ ನಟಿಸಿದ್ದಾರೆ. ಈ ಥ್ರಿಲ್ಲರ್ ಸಿನಿಮಾಗೆ ವೀಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಲ್ಲೂ ಸಾರಾ ಅಲಿ ಖಾನ್ ನಟನೆಯನ್ನು ಹಾಡಿ ಹೊಗಳುತ್ತಿದ್ದಾರೆ.
ಸಾರಾ ಅಲಿ ಖಾನ್ ನಟನೆಯ ಸಿನಿಮಾ 'ಗ್ಯಾಸ್‌ಲೈಟ್' ಓಟಿಟಿಯಲ್ಲಿ ರಿಲೀಸ್ ಆಗಿದ್ದು, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 31ರಂದೇ ರಿಲೀಸ್ ಆಗಿದೆ. ಇದೇ ಸಿನಿಮಾದ ಪ್ರಚಾರದಲ್ಲಿ ಸಾರಾ ಅಲಿಖಾನ್ ತಂದೆಯ ಸಿನಿಮಾ ರಿಮೇಕ್ ಬಗ್ಗೆ ಮಾತಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











