ಸೈಫ್‌ಗೂ ಮುನ್ನ ರವಿಶಾಸ್ತ್ರಿಯನ್ನು ಮದುವೆ ಆಗ್ಬೇಕಿತ್ತು ಅಮೃತಾ ಸಿಂಗ್: ಅದಕ್ಕೊಂದು ಷರತ್ತು ಇತ್ತು!

ಬಾಲಿವುಡ್‌ ನಟ ಸೈಫ್ ಅಲಿಖಾನ್ ಹಾಗೂ ಮಾಜಿ ಪತ್ನಿ ಅಮೃತಾ ಸಿಂಗ್ ಮದುವೆ ಮ್ಯಾಟರ್ ಗೊತ್ತಿರೋ ವಿಷಯವೇ. ಇಷ್ಟ ಪಟ್ಟು ಕುಟುಂಬದವರ ವಿರೋಧದ ನಡುವೆಯೂ ಮದುವೆಯಾಗಿದ್ದ ಜೋಡಿ 13 ವರ್ಷಗಳ ಬಳಿಕ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಿತ್ತು. ಸದ್ಯಕ್ಕೀಗ ಇವರ ಇಬ್ಬರು ಮಕ್ಕಳಲ್ಲಿ ಸಾರಾ ಅಲಿಖಾನ್ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

ತಂದೆಯ ನೆರಳಲ್ಲಿ ಬೆಳೆಯದ ಸಾರಾ ಅಲಿಖಾನ್ ಬಾಲಿವುಡ್‌ನಲ್ಲಿ ತನ್ನದೇ ನೆಲೆ ಕಂಡುಕೊಂಡಿದ್ದಾಳೆ. ಇತ್ತೀಚೆಗಷ್ಟೇ ಗ್ಯಾಸ್‌ಲೈಟ್ ಅನ್ನೋ ಸಿನಿಮಾ ರಿಲೀಸ್ ಆಗಿದೆ. ಅಮ್ಮನಂತೆ ಸಾರಾ ಕೂಡ ಉತ್ತಮ ನಟಿಯೇ. ಅಮೃತಾ ಸಿಂಗ್ ಬಾಲಿವುಡ್‌ನಲ್ಲಿ ಪೀಕ್‌ನಲ್ಲಿ ಇದ್ದರು. ಆಗಲೇ ತನಗಿಂತ 13 ವರ್ಷದ ಕಿರಿಯ ಸೈಫ್ ಅಲಿಖಾನ್ ಜೊತೆ ಮದುವೆ ಆಗಿ ಸುದ್ದಿಯಲ್ಲಿದ್ದರು.

ಸೈಫ್ ಅಲಿಖಾನ್ ಜೊತೆ ಮದುವೆ ಆಗುವುದಕ್ಕೂ ಮುನ್ನ ಅಮೃತಾ ಸಿಂಗ್ ಹೆಸರು ಮೂವರೊಂದಿಗೆ ತಳುಕು ಹಾಕಿಕೊಂಡಿತ್ತು. ಅದರಲ್ಲೊಬ್ಬರು ಮಾಜಿ ಕ್ರಿಕೆಟ್ ಆಟಗಾರ ಹಾಗೂ ಕೋಚ್ ರವಿಶಾಸ್ತ್ರಿ.

ಮದುವೆ ಆಗ್ಬೇಕಿತ್ತು ರವಿಶಾಸ್ತ್ರಿ - ಅಮೃತಾ ಸಿಂಗ್

ಅಮೃತಾ ಸಿಂಗ್ ಬಾಲಿವುಡ್‌ನಲ್ಲಿ ಉತ್ತುಂಗದಲ್ಲಿದ್ದ ಕಾಲವದು. ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇನ್ನೊಂದು ಕಡೆ ರವಿಶಾಸ್ತ್ರಿ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದರು. ಇವರಿಬ್ಬರೂ ಡೀಪ್ ಆಗಿ ಲವ್‌ನಲ್ಲಿ ಬಿದ್ದಿದ್ದರು. ಇನ್ನೇನು ಇಬ್ಬರು ಮದುವೆ ಆಗುತ್ತಾರೆ ಅನ್ನೋ ಮಟ್ಟಕ್ಕೆ ಇವರ ಸಂಬಂಧ ಬೆಳೆದಿತ್ತು.

ಬಾಲಿವುಡ್ ಹಾಗೂ ಕ್ರಿಕೆಟ್ ಎರಡೂ ಕ್ಷೇತ್ರದಲ್ಲಿ ಇಬ್ಬರ ಹೆಸರು ಓಡಾಡುತ್ತಲೇ ಇತ್ತು. ಆದರೂ, ರವಿಶಾಸ್ತ್ರ ಹಾಗೂ ಅಮೃತಾ ಸಿಂಗ್ ಮದುವೆ ಆಗಲೇ ಇಲ್ಲ. ಅದಕ್ಕೆ ಕಾರಣ ಒಂದು ಷರತ್ತು. ಅದೇನು ಅನ್ನೋದು ಇಲ್ಲಿದೆ.

Sara Ali Khan Mother Amrita Singh Fell In Love With Ravi Shastri, Vinod Khanna

ಮದುವೆಗೊಂದು ಷರತ್ತು ಇತ್ತು

ಈ ಹಿಂದೆ ಆಗಿರೋ ವರದಿಗಳ ಪ್ರಕಾರ, ಅಮೃತಾ ಸಿಂಗ್ ಮತ್ತು ರವಿಶಾಸ್ತ್ರಿ ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದರು. ಅಲ್ಲದೆ ಒಬ್ಬರನ್ನೊಬ್ಬರು ಮದುವೆ ಆಗಲು ಬಯಸಿದ್ದರು. ಆದರೆ, ಮದುವೆಗೂ ಮುನ್ನವೇ ರವಿಶಾಸ್ತ್ರ ನಟಿ ಅಮೃತಾ ಸಿಂಗ್‌ಗೆ ಮುಂದೆ ಒಂದು ಷರತ್ತು ಇಟ್ಟಿದ್ದರು.

ರವಿಶಾಸ್ತ್ರಿಯ ಹಾಕಿದ ಷರತ್ತು ಅಮೃತಾ ಸಿಂಗ್‌ಗೆ ಇಷ್ಟ ಆಗಲಿಲ್ಲ. ಈ ಕಾರಣಕ್ಕೇ ಮದುವೆಗೂ ಮುನ್ನವೇ ಇವರ ದಾಂಪತ್ಯ ಮುರಿದು ಬಿದ್ದಿತ್ತು ಅನ್ನೋ ಮಾತಿದೆ. ಅಷ್ಟಕ್ಕೂ ಆ ಷರತ್ತು ಏನಾಗಿತ್ತು? ರವಿಶಾಸ್ತ್ರಿ ಮದುವೆ ಬಳಿಕ ಸಿನಿಮಾಗಳಲ್ ನಟಿಸಬಾರದು. ಕ್ರಿಕೆಟಿಗರು ನಟಿಯನ್ನು ಮದುವೆಯಾಗಬೇಕಾದರೆ ನಟನೆಯನ್ನು ಬಿಡಬೇಕು ಎಂದು ಷರತ್ತು ಹಾಕಿದ್ದರು. ಅದು ಅಮೃತಾಗೆ ಒಪ್ಪಿಗೆಯಾಗಲಿಲ್ಲ.

Sara Ali Khan Mother Amrita Singh Fell In Love With Ravi Shastri, Vinod Khanna

ವಿನೋದ್ ಖನ್ನಾ-ಸನ್ನಿ ಡಿಯೋಲ್ ಜೊತೆ ಲವ್

ಅಮೃತಾ ಸಿಂಗ್ ಮಾಜಿ ಪತಿ ಸೈಫ್ ಅಲಿಖಾನ್ ಅನ್ನು ಮದುವೆ ಆಗುವುದಕ್ಕೂ ಮುನ್ನ ಮೂರು ಬಾರಿ ಲವ್ ಬ್ರೇಕಪ್ ಆಗಿತ್ತು. ಮೊದಲು ಸನ್ನಿ ಡಿಯೋಲ್‌ರನ್ನು ಪ್ರೀತಿ ಮಾಡುತ್ತಿದ್ದರು. ಆದರೆ, ಅದಾಗಲೇ ಅವರಿಗೆ ಮದುವೆ ಆಗಿರೋ ವಿಷಯ ತಿಳಿದು ದೂರ ಸರಿದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಮೃತಾ ಸಿಂಗ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದರು. ರವಿಶಾಸ್ತ್ರಿ ಬಳಿಕ ಮತ್ತೊಮ್ಮೆ ಲವ್ ಆಗಿತ್ತು. ವಿನೋದ್ ಖನ್ನಾ ಜೊತೆ ಅಮೃತಾಗೆ ಪ್ರೀತಿ ಹುಟ್ಟಿತ್ತು. ಆದರೆ, ವಿನೋದ್ ಖನ್ನಾ ಕೂಡ ಅದಾಗಲೇ ಮದುವೆ ಆಗಿದ್ದರು. ಅಲ್ಲದೆ ವಯಸ್ಸಿನಲ್ಲಿಯೂ ಕಿರಿಯರಾಗಿದ್ದರು. ಅಲ್ಲದೆ ಅಮೃತಾ ತಾಯಿ ಕೂಡ ಒಪ್ಪಲಿಲ್ಲ. ಈ ಕಾರಣಕ್ಕೆ ವಿನೋದ್ ಖನ್ನಾ ಜೊತೆನೂ ಬ್ರೇಕಪ್ ಆಗಿತ್ತು.

More from Filmibeat

English summary
Sara Ali Khan mother Amrita Singh fell in love with Ravi Shastri, Vinod Khanna. Her first love is Sunny Deol, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X