ಮತ್ತೆ ಗೆದ್ದ ಕಾರ್ತಿಕ್-ಕಿಯಾರಾ ಜೋಡಿ: ಬಾಕ್ಸಾಫೀಸ್‌ನಲ್ಲಿ 4 ದಿನಕ್ಕೆ 'ಸತ್ಯಪ್ರೇಮ್ ಕಿ ಕಥಾ' ಕಲೆಕ್ಷನ್ ಎಷ್ಟು?
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಈ ಸಿನಿಮಾದ ಬಳಿಕ ಹಿಂದಿ ಪ್ರೇಕ್ಷಕರನ್ನು ಸೆಳೆದ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ'. ಕಳೆದ ವಾರವಷ್ಟೇ ಈ ಸಿನಿಮಾ ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಟ್ಟಿತ್ತು.
'ಆದಿಪುರುಷ್' ಸೋಲಿನ ಲಾಭವನ್ನು ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾನಿ ಸಿನಿಮಾ ಪಡೆದುಕೊಂಡಿದೆ. ಸಿನಿಮಾ ರಿಲೀಸ್ ಆದಲ್ಲಿಂದ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಆಗಿದೆ. ಕಳೆದ ನಾಲ್ಕು ದಿನಗಳ ಕಲೆಕ್ಷನ್ 50 ಕೋಟಿ ರೂ. ಸಮೀಪದಲ್ಲಿದೆ.

'ಸತ್ಯಪ್ರೇಮ್ ಕಿ ಕಥಾ' ಸಿನಿಮಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ಬಾಲಿವುಡ್‌ನಲ್ಲಿ ಪೈಪೋಟಿಗೆ ಬಿಗ್ ಬಜೆಟ್ ಸಿನಿಮಾಗಳಿಲ್ಲದ ಕಾರಣ ಚಿತ್ರಕ್ಕೆ ಮೊದಲ ನಾಲ್ಕು ದಿನ ಒಳ್ಳೆ ಕಲೆಕ್ಷನ್ ಸಿಕ್ಕಿದೆ. ಇಂದಿನಿಂದ (ಜುಲೈ 3) ಈ ಸಿನಿಮಾ ಅಗ್ನಿಪರೀಕ್ಷೆಯನ್ನು ಎದುರಿಸಲಿದೆ. ಹಾಗಿದ್ದರೆ, ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾ ಗಳಿಸಿದ ಗಳಿಕೆ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
4ನೇ ದಿನ ಸತ್ಯ 'ಪ್ರೇಮ್ ಕಿ ಕಥಾ ಕಲೆಕ್ಷನ್' ಎಷ್ಟು?
ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾನಿ ಇಬ್ಬರದ್ದೂ ಹಿಟ್ ಕಾಂಬಿನೇಷನ್. ಈ ಹಿಂದೆ ಇದೇ ಜೋಡಿ ನಟಿಸಿದ್ದ 'ಭೂಲ್ ಭುಲಯ್ಯ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿತ್ತು. ಈಗ 'ಸತ್ಯಪ್ರೇಮ್ ಕಿ ಕಥಾ' ಕಲೆಕ್ಷನ್ ಕೂಡ ನಿರ್ಮಾಪಕರ ಜೇಬು ತುಂಬಿಸುತ್ತಿದೆ.
'ಸತ್ಯಪ್ರೇಮ್ ಕಿ ಕಥಾ' ವೀಕೆಂಡ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದೆ. ಶನಿವಾರ (ಜುಲೈ 1) ಹಾಗೂ ಭಾನುವಾರ (ಜುಲೈ 2) ಈ ಎರಡು ದಿನದ ಗಳಿಕೆ ಅದ್ಭುತವಾಗಿದೆ. ಅದರಲ್ಲೂ ನಾಲ್ಕನೇ ದಿನವಾದ ನಿನ್ನೆ (ಜುಲೈ 2) ಭಾರತದಲ್ಲಿ 12.50 ಕೋಟಿ ರೂ. ಕಲೆಕ್ಷನ್ ಮಾಡಿದೆ.
ನಾಲ್ಕು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಸತ್ಯಪ್ರೇಮ್ ಕಿ ಕಥಾ' ಕಲೆಕ್ಷನ್ ಮೊದಲ ನಾಲ್ಕು ದಿನ ಉತ್ತಮವಾಗಿದೆ. ಎರಡನೇ ವಾರದ ಕಲೆಕ್ಷನ್ ಮೇಲೆ ಸಿನಿಮಾದ ಸಕ್ಸಸ್ ನಿರ್ಧಾರ ಆಗುತ್ತೆ. ಆದರೆ, ಮೊದಲ ನಾಲ್ಕು ದಿನ ಗಳಿಕೆ ನೋಡಿದರೆ, ಈ ವಾರದೊಳಗೆ 50 ಕೋಟಿ ರೂ. ಗಡಿಯನ್ನು ಆಯಾಸವಿಲ್ಲದೆ ದಾಟಲಿದೆ.
ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಸಿನಿಮಾದ ಮೊದಲ ನಾಲ್ಕು ದಿನಗಳ ಗಳಿಕೆ ಹೀಗಿದೆ. ಮೊದಲ ದಿನ 9.25 ಕೋಟಿ ರೂ. ಎರಡನೇ ದಿನ 7 ಕೋಟಿ ರೂ. ಮೂರನೇ ದಿನ 10.10 ಕೋಟಿ ರೂ. ಹಾಗೂ ನಾಲ್ಕನೇ ದಿನ 12.15 ಕೋಟಿ ರೂ. ಕಲೆಕ್ಷನ್ ಮಾಡಿದೆ. ಒಟ್ಟು ನಾಲ್ಕು ದಿನಗಳಲ್ಲಿ 38.50 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಈ ಸಿನಿಮಾದ ಭವಿಷ್ಯವೇನು?
'ಸತ್ಯಪ್ರೇಮ್ ಕಿ ಕಥಾ' ಮೊದಲ ವಾರ ಸ್ಟಡಿಯಾಗಿದೆ. ಆದರೆ, ಪ್ರತಿ ಸಿನಿಮಾಗೂ ಸವಾಲು ಅಂತ ಎದುರಾಗೋದು ಎರಡನೇ ವಾರದ ಆರಂಭದಿಂದಲೇ. ಇಂದು ಈ ಸಿನಿಮಾದ ಕಲೆಕ್ಷನ್ ಎಷ್ಟಿರುತ್ತೆ? ಅನ್ನೋದರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.
ನಿನ್ನೆ (ಜುಲೈ 2) ಬಾಕ್ಸಾಫೀಸ್‌ನಲ್ಲಿ 12 ಕೋಟಿ ರೂ. ಕಲೆಕ್ಷನ್ ಆಗಿದ್ದು, ಇಂದು (ಜುಲೈ 3) ಕಮ್ಮಿ ಅಂದರೂ 7 ರಿಂದ 8 ಕೋಟಿ ರೂ. ದಾಟಬೇಕು. ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿಯದ್ದು ಹಿಟ್ ಕಾಂಬಿನೇಷನ್ ಆಗಿರುವುದರಿಂದ ಸಿನಿಮಾ ವರ್ಕ್‌ಔಟ್ ಆಗುವ ಸಾಧ್ಯತೆಯಿದೆ.


Click it and Unblock the Notifications











