For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಅಪಾಯ: ನಮಸ್ಕಾರ ಅನ್ನಿ, ಕೈ ಕುಲುಕಬೇಡಿ ಎಂದ ಗಣೇಶ್, ಸಲ್ಮಾನ್

  |

  ಈಗ ದೇಶದಾದ್ಯಂತ ಕೊರೊನಾ ವೈರಸ್‌ನದ್ದೇ ಮಾತು. ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗಗಳಲ್ಲಿಯೂ ಇದರ ಕುರಿತು ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಹೇಗಿರಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸ್ಟಾರ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಸಲಹೆ ನೀಡುತ್ತಿದ್ದಾರೆ.

  ಮನೆಯಿಂದ ಹೊರಗೆ ಹಾಗೂ ಒಳಗೆ ಹೆಚ್ಚು ಜಾಗರೂಕತೆ ಹಾಗೂ ಸುರಕ್ಷಿತರಾಗಿರಿ ಎಂದು ಸೆಲೆಬ್ರಿಟಿಗಳು ಕೋರುತ್ತಿದ್ದಾರೆ. ಪರಸ್ಪರ ಭೇಟಿಯಾದಾಗ ಅಪ್ಪಿಕೊಳ್ಳುವ ಹಾಗೂ ಕೈಕುಲುಕುವ ಬದಲು 'ನಮಸ್ತೆ' ಹೇಳಿ ಎಂದು ನಟ ಅನುಪಮ್ ಖೇರ್ ಹೇಳಿದ್ದರು. ಅದೇ ರೀತಿ ನಟ ಸಲ್ಮಾನ್ ಖಾನ್ ಕೂಡ ನಮಸ್ತೆ ಅಥವಾ ಸಲಾಮ್ ಹೇಳುವಂತೆ ಮನವಿ ಮಾಡಿದ್ದಾರೆ.

  ಕೊರೊನಾಗೆ ಬೆದರಿದ ಬಾಲಿವುಡ್ ಮಂದಿ: ಪ್ಯಾರಿಸ್‌ಗೆ ಹೋಗೊಲ್ಲ ಎಂದ ದೀಪಿಕಾಕೊರೊನಾಗೆ ಬೆದರಿದ ಬಾಲಿವುಡ್ ಮಂದಿ: ಪ್ಯಾರಿಸ್‌ಗೆ ಹೋಗೊಲ್ಲ ಎಂದ ದೀಪಿಕಾ

  ಈ ಆತಂಕದ ಸಂದರ್ಭದಲ್ಲಿ ನಿಮ್ಮ ನಿಮ್ಮ ಸಂಸ್ಕೃತಿಗೆ ಬದ್ಧರಾಗಿರಿ ಎಂದು ಸಲ್ಮಾನ್ ತಮ್ಮ ಅಭಿಮಾನಿಗಳು ಹಾಗೂ ಅನುಯಾಯಿಗಳಿಗೆ ಹೇಳಿದ್ದಾರೆ. 'ನಮಸ್ಕಾರ... ನಮ್ಮ ಸಂಸ್ಕೃತಿಯಲ್ಲಿ ನಮಸ್ತೆ ಅಥವಾ ಸಲಾಮ್ ಇದೆ. ಕೊರೊನಾ ವೈರಸ್ ಭೀತಿ ನಿವಾರಣೆಯಾಗುವವರೆಗೂ ಕೈ ಕುಲುಕಿಸುವುದು ಅಥವಾ ಅಪ್ಪುಗೆ ನೀಡುವುದನ್ನು ಬಿಡಿ' ಎಂದು ಸಲ್ಮಾನ್ ಖಾನ್ 'ನಮಸ್ತೆ' ಪೋಸ್‌ನ ಫೋಟೊದೊಂದಿಗೆ ಸಲಹೆ ನೀಡಿದ್ದಾರೆ.

  ಎಂದಿನಂತೆ ಸಲ್ಮಾನ್ ಈ ಸಲಹೆ ನೀಡುವಾಗಲೂ ತಮ್ಮ ದೇಹ ಪ್ರದರ್ಶಿಸುವುದನ್ನು ಮರೆತಿಲ್ಲ. ಜಿಮ್‌ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ತಮ್ಮ ಕಟ್ಟು ಮಸ್ತಾದ ದೇಹವನ್ನು ಪ್ರದರ್ಶಿಸುತ್ತಲೇ ಸಲ್ಮಾನ್ ಕಾಳಜಿಯುಕ್ತ ಸಲಹೆ ನೀಡಿದ್ದಾರೆ.

  ಕೊರೊನಾ ಭೀತಿಯ ನಡುವೆಯೂ ಯೂರೋಪ್ ಗೆ ಹಾರಿದ ನಟ ಪ್ರಭಾಸ್ಕೊರೊನಾ ಭೀತಿಯ ನಡುವೆಯೂ ಯೂರೋಪ್ ಗೆ ಹಾರಿದ ನಟ ಪ್ರಭಾಸ್

  ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಪ್ರಸ್ತುತದ ಸನ್ನಿವೇಶದಲ್ಲಿ ಹಸ್ತಲಾಘವದಿಂದ ದೂರ ಉಳಿಯುವುದು ಒಳ್ಳೆಯದು ಎಂಬುದನ್ನು ವಿವರಿಸುವ ವಿಡಿಯೋವನ್ನು 'ನಮಸ್ಕಾರ'ದೊಂದಿಗೆ ಹಂಚಿಕೊಂಡಿದ್ದಾರೆ. ಜನರು ತಮ್ಮ ಜೀವಮಾನದಲ್ಲಿ ಸರಾಸರಿ 15 ಸಾವಿರ ಬಾರಿ ಹಸ್ತಲಾಘವ ಮಾಡುತ್ತಾರೆ. ಆದರೆ ಹೆಚ್ಚಿನವರು ಅದರ ಬಳಿಕ ತಮ್ಮ ಕೈಗಳನ್ನು ತೊಳೆಯುವುದಿಲ್ಲ. ಹಸ್ತಲಾಘವದಿಂದ ಯಾವ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.

  English summary
  Celebrities including Golden Star Ganesh, Salman Khan, Anupam Kher urged fans to say namaste when you meet people and do not shake hands due to Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X