"ನಾನಿನ್ನು ಬದುಕಿದ್ದೇನೆ, ನನಗೆ ಸಿನಿಮಾದಲ್ಲಿ ಅವಕಾಶ ಕೊಡಿ"; 'ಎಕೆ 47' ಖಳನಟನ ಭಾವುಕ ನುಡಿ!

ಇವರು ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಅತ್ಯುತ್ತಮ ವಿಲನ್ ಪಾತ್ರ ಮಾಡುವವರಲ್ಲಿ ಒಬ್ಬರು. ಬಹುತೇಕ ಸೂಪರ್‌ಸ್ಟಾರ್‌ಗಳಿಗೆ ಆಶಿಶ್ ವಿದ್ಯಾರ್ಥಿ ತಮ್ಮ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲೇ ಬೇಕಿತ್ತು. ಈ ನಟ ಇದ್ದರೆ ಹೀರೊಗಳಿಗೂ ಅಷ್ಟೇ ಪವರ್ ಬಂದು ಬಿಡುತ್ತಿತ್ತು. ಥಿಯೇಟರ್‌ಗಳಲ್ಲಿ ಶಿಳ್ಳೆಗಳ ಸದ್ದು ಜೋರಾಗುತ್ತಿತ್ತು.

ಆಶಿಶ್ ವಿದ್ಯಾರ್ಥಿ ಕಳೆದ ಹಲವು ವರ್ಷಗಳಿಂದ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದ ಸಿನಿಮಾ ನಟಿಸಿದ್ದೇ ಹೆಚ್ಚು. ಒಂದು ಕಾಲದ ಈ ಬಹುಬೇಡಿಕೆಯ ನಟನೀಗ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆಫರ್ ಕೊಡಿ ಎಂದು ಕೇಳುವಂತಹ ಸ್ಥಿತಿ ನಿರ್ಮಾಣ ಆಗಿದೆ. ಅಸಲಿಗೆ ಆಶಿಶ್ ವಿದ್ಯಾರ್ಥಿಗೆ ಆಫರ್‌ಗಳೇ ಸಿಗುತ್ತಿಲ್ಲವೇ..?

Senior actor Ashish Vidyarthi said he is still alive need good offers

ಈ ಹಿರಿಯ ನಟ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. 'ಎಕೆ 47', 'ಕೋಟಿಗೊಬ್ಬ' ಅಂತಹ ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೋಟಿ ನಿರ್ಮಾಪಕ ರಾಮು ನಿರ್ಮಿಸುತ್ತಿದ್ದ ಸಿನಿಮಾಗಳಲ್ಲಿ ಆಶಿಶ್ ವಿದ್ಯಾರ್ಥಿ ಇದ್ದೇ ಇರುತ್ತಿದ್ದರು. ಇವರೊಂದಿಗೆ ಪಾತ್ರ ಫಿಕ್ಸ್ ಆಗಿರುತ್ತಿತ್ತು. ಇಂತಹ ನಟ ಇವತ್ತು ನಾನಿನ್ನು ಬದುಕಿದ್ದೇನೆ ಅವಕಾಶ ಎಂದು ಕೇಳಿಕೊಂಡಿದ್ದಾರೆ.

ಆಶಿಶ್ ವಿದ್ಯಾರ್ಥಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಬಹುತೇಕ ಪ್ರಮುಖ ಭಾಷೆಯ ಸಿನಿಮಾಗಳಲ್ಲೂ ಆಶಿಶ್ ವಿದ್ಯಾರ್ಥಿ ಹೆಚ್ಚು ಕಡಿಮೆ ಖಳನಾಯಕ ನಟಿಸಿದ್ದಾರೆ. ಇತ್ತೀಚೆಗೆ ನೆಟ್‌ಫಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ರಾಣಾ ನಾಯ್ಡು' ವೆಬ್‌ ಸೀರಿಸ್‌ನಲ್ಲೂ ಉತ್ತಮ ಪಾತ್ರವನ್ನು ನಿಭಾಯಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಒಡಿಯಾ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಆಶಿಶ್ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗುತ್ತಿಲ್ಲ. ಈ ಹಿಂದೆ ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಚಿತ್ರರಂಗ ಆಶಿಶ್ ವಿದ್ಯಾರ್ಥಿಯನ್ನು ಮರೆತಿದೆ. ಅದಕ್ಕೆ ಈ ಹಿಂದೆನೇ "ನಾನಿನ್ನು ಬದುಕಿದ್ದೀನಿ.. ನನಗೆ ಸಿನಿಮಾಗಳಲ್ಲಿ ಅವಕಾಶ ಕೊಡಿ. ನನ್ನನ್ನು ಗುರುತಿಸಿ ಅವಕಾಶ ನೀಡುತ್ತಿಲ್ಲ. ಕೇವಲ ವಿಲನ್ ಪಾತ್ರಗಳನ್ನೇ ನೀಡುತ್ತಾರೆ." ಎಂದು ಆಶಿಶ್ ವಿದ್ಯಾರ್ಥಿ ಭಾವುಕರಾಗಿ ಮಾತಾಡಿದ್ದರು.

ಅದೇ ಸಂದರ್ಶನದಲ್ಲಿ ಇತ್ತೀಚೆಗೆ ಬಂದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನನಗೆ ಯಾವುದು ಇಷ್ಟ ಆಗುತ್ತೋ. ಹಿಂದೆಂದೂ ನಿರ್ವಹಿಸಿದ ಪಾತ್ರ ಬರುತ್ತೋ ಅಂತಹ ಪಾತ್ರದಲ್ಲಿ ಮಾತ್ರ ನಟಿಸಲು ಇಷ್ಟ ಪಡುತ್ತೇನೆ ಎಂದು ಆಶಿಶ್ ವಿದ್ಯಾರ್ಥಿ ಹೇಳಿದ್ದರು. ಈಗ ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಒಳ್ಳೊಳ್ಳೆ ಅವಕಾಶಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ.

ಇತ್ತೀಚೆಗೆ ವಿಡಿಯೋ ಮತ್ತೊಮ್ಮೆ ಹಿರಿಯ ನಟ ಆಶಿಶ್ ವಿದ್ಯಾರ್ಥಿ ಮತ್ತದೇ ಮಾತನ್ನು ರಿಪೀಟ್ ಮಾಡಿದ್ದಾರೆ. "ನಾನು ಹಲವು ಭಾಷೆಗಳಲ್ಲಿ ಸಿನಿಮಾ ಮಾಡಿದ್ದೇನೆ. ನಾನು ಕೇವಲ ಖಳನಾಯಕನ ಪಾತ್ರವನ್ನಷ್ಟೇ ಮಾಡಿಲ್ಲ. ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ನಾನು ಬೇರೆ ಬೇರೆ ಪಾತ್ರಗಳನ್ನು ಮಾಡಬಲ್ಲೆ." ಎಂದು ಮತ್ತೆ ಆಶಿಶ್ ವಿದ್ಯಾರ್ಥಿ ಸಿನಿಮಾ ಮಂದಿ ಬಳಿ ಮನವಿ ಮಾಡಿಕೊಂಡಿದ್ದಾರೆ.

More from Filmibeat

English summary
Ashish Vidyarthi about not getting offers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X