ಐಸಿಯುದಲ್ಲಿ ಸಾವು ಬದುಕಿನ ನಡುವೆ ನಟನ ಹೋರಾಟ: ಹಣದ ಸಹಾಯಕ್ಕಾಗಿ ಮನವಿ

ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ನಟ ಆಶೀಶ್ ರಾಯ್ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿರುವ ಅವರು ಹಣಕಾಸಿನ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಇದಕ್ಕಾಗಿ ಫೇಸ್ ಬುಕ್ ಮೂಲಕ ಅವರು ತಮ್ಮ ಸಂಕಷ್ಟದ ಸ್ಥಿತಿಯನ್ನು ಬಹಿರಂಗಪಡಿಸಿದ್ದು, ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ತಮ್ಮ ಚಿಕಿತ್ಸೆಗಾಗಿ ತುರ್ತು ಹಣಕಾಸಿನ ಅಗತ್ಯವಿದೆ. ಈ ಬಗ್ಗೆ ಮಾಹಿತಿ ಹಂಚುವ ಮೂಲಕ ಅಗತ್ಯ ಆರ್ಥಿಕ ಸಹಾಯ ಒದಗಿಸುವಂತೆ ಅವರು ಅಭಿಮಾನಿಗಳನ್ನು ಕೋರಿದ್ದಾರೆ. ಪ್ರತಿದಿನವೂ ಡಯಾಲಿಸಿಸ್‌ಗೆ ಒಳಗಾಗುತ್ತಿರುವುದರಿಂದ ಭಾರಿ ಮೊತ್ತದ ಚಿಕಿತ್ಸಾ ವೆಚ್ಚ ತೆರಬೇಕಾಗಿದೆ. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಅವರು ಹೇಳಿದ್ದಾರೆ. ಮುಂದೆ ಓದಿ...

ಐಸಿಯುದಲ್ಲಿದ್ದೇನೆ

ಐಸಿಯುದಲ್ಲಿದ್ದೇನೆ

ಸಾಸುರಾಲ್ ಸಿಮರ್ ಕಾ ಮತ್ತು ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಧಾರಾವಾಹಿಗಳಿಂದ ಜನಪ್ರಿಯತೆ ಗಳಿಸಿರುವ 55 ವರ್ಷದ ನಟ ಆಶೀಶ್ ರಾಯ್, 'ನಾನು ಐಸಿಯುದಲ್ಲಿ ಇದ್ದೇನೆ. ಬಹಳ ಅನಾರೋಗ್ಯ. ಡಯಾಲಿಸಿಸ್ ' ಎಂದು ಚುಟುಕಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದರು.

ತುರ್ತಾಗಿ ಹಣ ಬೇಕು

ತುರ್ತಾಗಿ ಹಣ ಬೇಕು

ಮತ್ತೊಂದು ಪೋಸ್ಟ್‌ನಲ್ಲಿ ಅವರು 'ಡಯಾಲಿಸಿಸ್‌ಗೆ ತುರ್ತಾಗಿ ಹಣಕಾಸಿನ ಅಗತ್ಯವಿದೆ' ಎಂದು ಹಾಕಿದ್ದಾರೆ. 'ಯಾರೂ ಇಲ್ಲ' ಎಂಬ ಮತ್ತೊಂದು ಪೋಸ್ಟ್, ಅವರು ಆಸ್ಪತ್ರೆಯಲ್ಲಿ ಒಬ್ಬಂಟಿಯಾಗಿದ್ದು, ಜತೆಯಲ್ಲಿ ಯಾರೂ ಇಲ್ಲ ಸುಳಿವು ನೀಡಿದೆ.

ಆದಾಯವಿಲ್ಲ, ಖರ್ಚು ಮಾತ್ರ

ಆದಾಯವಿಲ್ಲ, ಖರ್ಚು ಮಾತ್ರ

ಪ್ರಸ್ತುತ ಆಶೀಶ್ ಅವರು ಜುಹುದಲ್ಲಿರುವ ಆಸ್ಪತ್ರೆಯಲ್ಲಿದ್ದು, ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ಕೆಲಸ ಮತ್ತು ಆದಾಯ ಇರಲಿಲ್ಲ. ಇದ್ದ ಹಣದಲ್ಲಿಯೇ ಇದುವರೆಗೆ ಹೇಗೋ ಆಸ್ಪತ್ರೆ ಖರ್ಚು ಹೊಂದಿಸಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ತಿಳಿಸಿದೆ.

ಹುಟ್ಟುಹಬ್ಬದಂದೂ ಒಬ್ಬಂಟಿ

ಹುಟ್ಟುಹಬ್ಬದಂದೂ ಒಬ್ಬಂಟಿ

ಆಶೀಶ್ ರಾಯ್ ಅವರ ಪ್ರತಿದಿನದ ಡಯಾಲಿಸಿಸ್ ಖರ್ಚು 90,000 ರೂ.ಗಳಿಗೂ ಅಧಿಕವಿದ್ದು, ಇಷ್ಟ ಹಣವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಜನ್ಮದಿನದ ಸಂದರ್ಭದಲ್ಲಿಯೂ ಅವರು ಒಂಟಿಯಾಗಿದ್ದರು. ಒಬ್ಬರೇ ಒಬ್ಬ ವ್ಯಕ್ತಿ ಅವರನ್ನು ನೋಡಲು ಆಸ್ಪತ್ರೆಗೆ ಬಂದಿಲ್ಲ. ಮೆಡಿಕಲ್ ಬಿಲ್ ಕಟ್ಟದೆ ಇದ್ದರೆ ಚಿಕಿತ್ಸೆ ಮುಂದುವರಿಸಲಾಗುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಎಚ್ಚರಿಸಿದ್ದಾರೆ ಎಂಬುದಾಗಿ ಪತ್ರಿಕೆ ವರದಿ ಮಾಡಿದೆ.

More from Filmibeat

English summary
Hindi television and film actor Ashiesh Roy is in ICU from few days undergoing dialysis treatment seeks financial aid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X