ಅಪ್ಪನಿಗೆ 58.. ಮಗಳಿಗೆ 23.. ಅಪ್ಪ-ಮಗಳ ಮೊದಲ ಸಿನಿಮಾ ಕ್ರೇಜ್ ಹೇಗಿದೆ? ಟೈಟಲ್ ಏನು?

ಶಾರುಖ್ ಖಾನ್ ಮತ್ತೆ ಬಾಲಿವುಡ್‌ನ ಬಾಕ್ಸಾಫೀಸ್ ಕಿಂಗ್ ಎನಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಎರಡು ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಕಿಂಗ್ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಆ ಸಿನಿಮಾವೇ 'ಡಂಕಿ'. ಈ ಸಿನಿಮಾ ಕೂಡ ಇದೇ ಡಿಸೆಂಬರ್ 22ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ.

ಒಂದ್ಕಡೆ 'ಡಂಕಿ' ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಹೊಸ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಶಾರುಖ್ ಖಾನ್ ಹೊಸ ಸಿನಿಮಾ ಬಗ್ಗೆ ಯಾಕಿಷ್ಟು ಚರ್ಚೆ ಅಂದರೆ, ಇದೇ ಮೊದಲ ಬಾರಿಗೆ ಪುತ್ರಿ ಸುಹಾನಾ ಜೊತೆ ಕಿಂಗ್ ಖಾನ್ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.

Shah Rukh Khan and Suhana Khan maiden collaboration has been titled King

ಬಾಲಿವುಡ್‌ನ ಟಾಲೆಂಡ್ ನಿರ್ದೇಶಕ ಸುಜಯ್ ಘೋಷ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುಜಯ್ ಘೋಷ್ ಆಕ್ಷನ್-ಥ್ರಿಲ್ಲರ್ ಸಿನಿಮಾಗಳನ್ನು ಹೆಚ್ಚಾಗಿ ನಿರ್ದೇಶನ ಮಾಡಿದ್ದು, ಶಾರುಖ್ ಹಾಗೂ ಪುತ್ರಿ ಸುಹಾನಾ ಮೊದಲ ಬಾರಿಗೆ ನಟಿಸುತ್ತಿರುವ ಸಿನಿಮಾ ಕೂಡ ಆಕ್ಷನ್ ಥ್ರಿಲ್ಲರ್ ಆಗಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ ಈ ಸಿನಿಮಾದ ಟೈಟಲ್ ಏನು ಅನ್ನೋದನ್ನು ಹಿಂದಿ ಮಾಧ್ಯಮಗಳು ರಿವೀಲ್ ಮಾಡಿವೆ.

ಅಪ್ಪ-ಮಗಳ ಮೊದಲ ಸಿನಿಮಾದ ಟೈಟಲ್ ಏನು?

ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಜೋಡಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಇಡೀ ಬಾಲಿವುಡ್‌ ಥ್ರಿಲ್ ಆಗಿದೆ. ಶಾರುಖ್ ಖಾನ್ ಫ್ಯಾನ್ಸ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಲ್ಲಿ ವರದಿ ಆಗಿರೋ ಪ್ರಕಾರ, ಶಾರುಖ್ ಖಾನ್ ಹಾಗೂ ಸುಹಾನ ಖಾನ್ ಮೊದಲ ಸಿನಿಮಾದ ಟೈಟಲ್ 'ಕಿಂಗ್' ಎಂದು ವರದಿಯಾಗಿದೆ. ಈ ಸಿನಿಮಾ 2024ರ ಜನವರಿ ತಿಂಗಳಿಂದ ಶೂಟಿಂಗ್ ಆರಂಭ ಆಗಲಿದೆ.

ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ

ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಮೊದಲ ಸಿನಿಮಾ ಸಾಫ್ಟ್ ಸ್ಟೋರಿ ಇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ತಂದೆ-ಮಗಳು ನಿರೀಕ್ಷೆಯನ್ನೂ ಮೀರಿ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾವನ್ನೇ ಆಕ್ಷನ್ ಥ್ರಿಲ್ಲರ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಹಲವರಿಗೆ ಅಚ್ಚರಿ ಮೂಡಿಸಿದೆ. 'ಕಿಂಗ್' ಟೈಟಲ್‌ಗೆ ತಕ್ಕಂತೆ ಸಿನಿಮಾ ಕೂಡ ಥ್ರಿಲ್ಲಿಂಗ್ ಆಗಿರುತ್ತೆ ಎಂದು ಚರ್ಚೆ ಮಾಡಲಾಗುತ್ತಿದೆ.

Shah Rukh Khan and Suhana Khan maiden collaboration has been titled King

ಪ್ರೀ ಪ್ರೊಡಕ್ಷನ್‌ನಲ್ಲಿದೆ ಸಿನಿಮಾ

ಸಿನಿಮಾಗಳಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಕೊಡುವುದರಲ್ಲಿ ನಿರ್ದೇಶಕ ಸುಜಯ್ ಘೋಷ್ ಎಕ್ಸ್‌ಪರ್ಟ್. ಬಾಲಿವುಡ್‌ನಲ್ಲಿ ಅಂತಹ ಸಿನಿಮಾಗಳಿಂದಲೇ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. 2012ರಲ್ಲಿ ತೆರೆಕಂಡ 'ಕಹಾನಿ','ಬ್ಯಾಂಗ್ ಬ್ಯಾಂಗ್', 'ಬದ್ಲಾ', 'ಬಾಬ್ ಬಿಸ್ವಾಸ್' ಅಂತಹ ಸಿನಿಮಾಗಳೇ ಸಾಕ್ಷಿ. ಈಗ ಶಾರುಖ್ ಖಾನ್ ಅಭಿಮಾನಿಗಳು ಕೂಡ ಅದೇ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕೀಗ ಸಿನಿಮಾ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ.

ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಶಾರುಖ್

ಶಾರುಖ್ ಖಾನ್ ಈಗಾಗಲೇ ಎರಡು ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ 'ಪಠಾಣ್', ಅಟ್ಲೀ ಆಕ್ಷನ್ ಕಟ್ ಹೇಳಿದ್ದ 'ಜವಾನ್' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಹಣ ಬಾಚಿಕೊಂಡಿದೆ. ಈ ಮೂರನೇ ಸಿನಿಮಾ ಮಗಳೊಂದಿಗೆ ನಟಿಸಲು ಸಜ್ಜಾಗಿದ್ದು, ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಆದರೆ, ಸಿನಿಮಾ ಅನೌನ್ಸ್ ಆದಲ್ಲಿಂದ ಈ ಚಾನ್ಸ್ ಮಿಸ್ ಮಾಡಿಕೊಳ್ಳಬಹುದು ಎಂಬ ಅಪಸ್ವರ ಕೂಡ ಕೇಳಿ ಬರುತ್ತಿದೆ.

More from Filmibeat

English summary
Shah Rukh Khan and Suhan Khan movie directed by Sujoy Ghosh:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X