ದಾಖಲೆಗಳ ಮೇಲೆ ದಾಖಲೆ ಬರೆದ ಶಾರುಖ್ ಖಾನ್ ಸಿನಿಮಾ 'ಪಠಾಣ್': 3 ಮೂರು ದಿನಗಳ ಕಲೆಕ್ಷನ್ ಎಷ್ಟು?

ಶಾರುಖ್ ಖಾನ್ ಸಿನಿಮಾ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಮೂರೇ ದಿನಗಳಲ್ಲಿ ಸಿನಿಮಾ ಹಳೇ ರೆಕಾರ್ಡ್‌ಗಳನ್ನು ಉಡೀಸ್ ಮಾಡುತ್ತಿದೆ. 'ಪಠಾಣ್' ಬಾಕ್ಸಾಫೀಸ್‌ನಲ್ಲಿ ವೇಗವಾಗಿ ದಾಖಲೆ ಬರೆದ ಸಿನಿಮಾ ಎನಿಸಿಕೊಂಡಿದೆ.

ಈಗಾಗಲೇ 'ಕೆಜಿಎಫ್ 2' ಮೊದಲ ದಿನದ ಬಾಕ್ಸಾಫೀಸ್‌ ದಾಖಲೆಯನ್ನು ಈಗಾಗಲೇ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಏರಿಕೆ ಕಾಣುತ್ತಲೇ ಇದೆ. ಹೀಗೆ ಮುಂದುವರೆದರೆ, 'ಬಾಹುಬಲಿ 2', 'ಕೆಜಿಎಫ್ 2' ಬಾಲಿವುಡ್‌ ಕಲೆಕ್ಷನ್ ಅನ್ನು ಮುರಿಯುವ ಎಲ್ಲಾ ಸಾಧ್ಯತೆಗಳೂ ಇವೆ.

ಕಳೆದ ಕೆಲವು ವರ್ಷಗಳಿಂದ ದಕ್ಷಿಣದ ಸೂಪರ್‌ಸ್ಟಾರ್‌ಗಳು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದರು. ಈ ದಾಖಲೆಗಳನ್ನು ಮುರಿಯುವ ಎಲ್ಲಾ ಸಾಧ್ಯತೆಗಳು ಇವೆ. ಸದ್ಯ ಮೂರು ದಿನಗಳಲ್ಲಿಯೇ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

3 ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು?

ಶಾರುಖ್ ಖಾನ್ ಸಿನಿಮಾ 'ಪಠಾಣ್' ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಕಲೆಕ್ಷನ್ ಮಾಡುತ್ತಿದೆ. ಚಿತ್ರರಂಗಕ್ಕೆ ಕಿಂಗ್ ಖಾನ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದು, ಕಳೆದ ಮೂರು ದಿನಗಳಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ ಸುಮಾರು 313 ಕೋಟಿ ರೂ. ಕಲೆ ಹಾಕಿದೆ. ಭಾರತದಲ್ಲಿ 201 ಕೋಟಿ ರೂ. ಗಳಿಕೆ ಕಂಡಿದೆ. ಮೂರನೇ ದಿನ ಕೇವಲ ಹಿಂದಿ ಅವತರಣಿಕೆಯಲ್ಲೇ 38 ಕೋಟಿ ರೂ. ಕಲೆಕ್ಷನ್ ಮಾಡಿದೆ.

'ಪಠಾಣ್' ವೀಕೆಂಡ್ ಕಲೆಕ್ಷನ್ ಏನು?

'ಪಠಾಣ್' ವೀಕೆಂಡ್ ಕಲೆಕ್ಷನ್ ಏನು?

'ಪಠಾಣ್' ಸಿನಿಮಾ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲಿಯೂ ಸಿನಿಮಾದ ಕಲೆಕ್ಷನ್ ಜೋರಾಗಿದೆ. ಓವರ್‌ಸೀಸ್‌ನಲ್ಲಿ ಸುಮಾರು 112 ಕೋಟಿ ರೂ. ಗಳಿಕೆ ಕಂಡಿದೆ. ಇನ್ನು ಕೆಲವು ದಿನಗಳಲ್ಲೂ ಸುಮಾರು 500 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕಾಚಾರ ಹಾಕಲಾಗಿದೆ. ಅಲ್ಲದೆ ಶನಿವಾರ, ಭಾನುವಾರ 40 ರಿಂದ 45 ಕೋಟಿ ರೂ. ಕಲೆಕ್ಷನ್ ಮಾಡಬಹುದು ಲೆಕ್ಕಾಚಾರ ಹಾಕಲಾಗಿದೆ. ಈ ಮೂಲಕ 'ಬಾಹುಬಲಿ 2' ಹಿಂದಿ ವರ್ಷನ್ 512 ಕೋಟಿ ರೂ. ಕಲೆ ಹಾಕಿತ್ತು. ಈ ದಾಖಲೆಯನ್ನು ಮುರಿಯ ಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ತೆಲುಗು–ತಮಿಳಿನಲ್ಲಿ ಕಲೆಕ್ಷನ್ ಎಷ್ಟು?

ತೆಲುಗು–ತಮಿಳಿನಲ್ಲಿ ಕಲೆಕ್ಷನ್ ಎಷ್ಟು?

'ಪಠಾಣ್' ಮೂರನೇ ದಿನ ಸುಮಾರು 38 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಸಿನಿಮಾವನ್ನು ತೆಲುಗು ಹಾಗೂ ತಮಿಳು ಭಾಷೆಗಳಿ ಡಬ್ ಮಾಡಿ ರಿಲೀಸ್ ಆಗಿತ್ತು. ಈ ಎರಡೂ ಭಾಷೆಗಳಿಂದ ಮೂರು ದಿನಗಳಲ್ಲಿ ಸುಮಾರು 5.75 ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಕೇವಲ ಹಿಂದಿ ವರ್ಷನ್‌ನಲ್ಲೇ ಸುಮಾರು 161 ಕೋಟಿ ದಾಖಲೆ ಗಳಿಸಿದೆ. ಈ ಸಕ್ಸಸ್ ನೋಡುವುದಕ್ಕೆ ಬಾಲಿವುಡ್ ಹಲವು ವರ್ಷಗಳಿಂದ ಎದುರು ನೋಡುತ್ತಿತ್ತು.

'ಪಠಾಣ್' ಬರೆದ ದಾಖಲೆಗಳೇನು?

'ಪಠಾಣ್' ಬರೆದ ದಾಖಲೆಗಳೇನು?

'ಪಠಾಣ್' ಸಿನಿಮಾ ಎರಡು ದಿನಗಳಲ್ಲಿ 100 ಕೋಟಿ ರೂ. ಕಲೆ ಹಾಕಿದೆ. ಇದರ ಜೊತೆಗೆ ಮೊದಲ ದಿನವೇ ಒಡಿಶಾದಲ್ಲಿ ಒಂದು ಕೋಟಿ ರೂ. ಕಲೆ ಹಾಕಿತ್ತು. ಅಸ್ಸಾಂ, ಕೇರಳಾದಲ್ಲೂ ಒಂದು ಕೋಟಿ ರೂ. ಲೂಟಿ ಮಾಡಿದೆ. ಹಾಗೇ ಪಶ್ಚಿಮ ಬಂಗಾಳದಲ್ಲಿ ಸುಮಾರು 4 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು ಬಾಲಿವುಡ್‌ ಮಂದಿಗೆ ನಿರಾಳತೆ ಮೂಡಿದೆ.

More from Filmibeat

English summary
Shah Rukh Khan Comeback Movie Pathaan Box Office Day 3 Collection Is Over ₹ 300 Crore Worldwide, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X