ಶಾರುಖ್ ಖಾನ್ ಕೈಯಲ್ಲಿ ಬಾಲಿವುಡ್ ಭವಿಷ್ಯ: ಜರ್ಮಿನಿಯಲ್ಲಿ 'ಪಠಾಣ್' ಸಖತ್ ರೆಸ್ಪಾನ್ಸ್!
ಕಳೆದೆರಡು ವರ್ಷಗಳಿಂದ ಬಾಲಿವುಡ್ ಮಂದಿಗೆ ಮುಜುಗರ ಎದುರಾಗುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗಳು ಕಮಾಯಿ ಮಾಡುತ್ತಿಲ್ಲ. ದೊಡ್ಡ ದೊಡ್ಡ ಸಿನಿಮಾಗಳು ಸೋತು ಮತ್ತಷ್ಟು ನಿರಾಶೆಯನ್ನು ಮೂಡಿಸಿದೆ. ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಎದ್ದು ನಿಲ್ಲುವುದಕ್ಕೆ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ.
2022 ಕೂಡ ಬಾಲಿವುಡ್ ನಷ್ಟದಲ್ಲಿಯೇ ಮುಗಿತ್ತು. ಕೆಲವೇ ಕೆಲವು ಸಿನಿಮಾಗಳನ್ನು ಹೊರತು ಪಡಿಸಿದರೆ, ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿವೆ. ಹೀಗಾಗಿ 2023ಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.
ಹೊಸ ವರ್ಷದ ಮೊದಲ ತಿಂಗಳಿನಲ್ಲಿಯೇ ಬಾಲಿವುಡ್ ಬಿಗ್ ಬಜೆಟ್ ಸಿನಿಮಾವನ್ನು ರಿಲೀಸ್ ಮಾಡುತ್ತಿದೆ. ಅದುವೇ ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್'. ಈ ಸಿನಿಮಾ ಸದ್ಯ ವಿವಾದದಲ್ಲಿ ಸಿಕ್ಕಿಕೊಂಡಿದ್ದರೂ, ವಿದೇಶದಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಈಗಾಗಲೇ ಜರ್ಮನಿಯಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ದಾಖಲೆ ಬರೆಯೋಕೆ ಸಜ್ಜಾಗಿದೆ.

'ಪಠಾಣ್'ಗೆ ಜರ್ಮಿನಿಯಲ್ಲಿ ಸಖತ್ ರೆಸ್ಪಾನ್ಸ್
ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. ಆದರೆ, ಆರಂಭದ ದಿನಗಳಲ್ಲೇ ಭಾರತದಲ್ಲಿ 'ಪಠಾಣ್' ಸಿನಿಮಾ ಸುತ್ತ ವಿವಾದ ಸೃಷ್ಟಿಯಾಗಿದೆ. ಹೀಗಾಗಿ ಸಿನಿಮಾ ಬಗ್ಗೆ ಸಹಜವಾಗಿಯೇ ಬಾಲಿವುಡ್ ಮಂದಿಗೆ ಆತಂಕ ಶುರುವಾಗಿತ್ತು. ಆದರೆ, ವಿದೇಶಗಳಲ್ಲಿ 'ಪಠಾಣ್' ಚಿತ್ರಕ್ಕೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜರ್ಮನಿಯಲ್ಲಿ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದ್ದು, ಬಹುತೇಕ ಕಡೆಗಳಲ್ಲಿ ಟಿಕೆಟ್ ಬುಕಿಂಗ್ ಜೋರಾಗಿ ನಡೆಯುತ್ತಿದೆ.

ಕಿಂಗ್ ಖಾನ್ ಸಿನಿಮಾದ ಟಿಕೆಟ್‌ಗೆ ಬೇಡಿಕೆ
ಜರ್ಮಿನಿಯಲ್ಲಿ ಕಿಂಗ್ ಖಾನ್ ಸಿನಿಮಾ ಪಠಾಣ್‌ಗೆ ರೆಸ್ಪಾನ್ಸ್ ಜೋರಾಗಿದೆ. ಸಿನಿಮಾ ಬಿಡುಗಡೆಗೆ 27 ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಜರ್ಮನಿಯಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಜರ್ಮಿನಿಯಲ್ಲಿ ಶಾರುಖ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲಿ ಮಲ್ಟಿಪ್ಲೆಕ್ಸ್ ಚೈನ್ ಸಿನಿಮ್ಯಾಕ್ಸ್ ಇರುವ ಬಹುತೇಕ ನಗರಗಳಲ್ಲಿ ಅಡ್ವಾನ್ಸ್ ಬುಕಿಂಗ್ ಆಗಿದೆ. ಬರ್ಲಿನ್,ಎಸ್ಸೆನ್,ಡ್ಯಾಮ್ಟರ್, ಹ್ಯಾನೋವರ್, ಹಾರ್ಬರ್ಗ್, ಮ್ಯೂನಿಚ್, ಆಫೆನ್‌ಬಾಕ್ ಕಡೆಗಳಲ್ಲಿ ಸಿನಿಮಾದ ಬಹುತೇಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

ಶಾರುಖ್ ಖಾನ್ ಕಿಂಗ್ ಆಫ್ ಓವರ್‌ಸೀಸ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಸಿನಿಮಾಗಳು ಭಾರತದಲ್ಲಿ ಫ್ಲಾಪ್ ಆದರೂ ವಿದೇಶದಲ್ಲಿ ಕೈ ಹಿಡಿದಿದೆ. ಈ ಹಿಂದೆ ತೆರೆಕಂಡ 'ದಿಲ್ವಾಲೆ' ಸಿನಿಮಾ ಕೂಡ ಭಾರತದ ಬಾಕ್ಸಾಫೀಸ್ ಸೋತಿತ್ತು. ಆದರೆ, ವಿದೇಶಗಳಲ್ಲಿ ಈ ಸಿನಿಮಾ ಸೂಪರ್ ಕಲೆಕ್ಷನ್ ಮಾಡಿತ್ತು. ಹಲವು ಸಂದರ್ಭಗಳಲ್ಲಿ ಶಾರುಖ್ ಖಾನ್ ಅನ್ನು ಕಿಂಗ್ ಆಫ್ ಓವರ್‌ಸೀಸ್ ಅನ್ನೋ ಸಾಬೀತು ಮಾಡಿದ್ದಾರೆ.

ಭಾರತದಲ್ಲಿ 'ಪಠಾಣ್' ವಿರುದ್ಧ ಕಿಡಿ
'ಪಠಾಣ್' ಸಿನಿಮಾದ "ಬೇಷರಂ ರಂಗ್.." ಸಾಂಗ್ ವಿವಾದಕ್ಕೆ ಸಿಲುಕಿತ್ತು. ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ವಿವಾದ ದೇಶದೆಲ್ಲೆಡೆ ಕಿಚ್ಚು ಹಚ್ಚಿತ್ತು. ಹಿಂದೂಪರ ಸಂಘಟನೆಗಳು ಅಷ್ಟೇ ಅಲ್ಲ. ಮುಸ್ಲಿಂ ಸಂಘಟನೆಗಳೂ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಸೆನ್ಸಾರ್ ಬೋರ್ಡ್ ಕೂಡ ಹಾಡಿನ ಜೊತೆ ಕೆಲವು ದೃಶ್ಯಗಳನ್ನು ಬದಲಾವಣೆ ಮಾಡುವಂತೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.


Click it and Unblock the Notifications











