ಕೆಂಪು ಸೀರೆಯುಟ್ಟ ಶಾರುಖ್ ಪುತ್ರಿ ಕಂಡು ದೀಪಿಕಾ ನೆನೆದ ಫ್ಯಾನ್ಸ್ : ವೈರಲ್ ಆದ ಫೋಟೊ ಕಥೆಯೇನು?

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್‌ನಲ್ಲಿದ್ದಾಳೆ. ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಶೇರ್ ಮಾಡಿದ ಫೋಟೊ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಕೆಲವರಂತೂ ದೀಪಿಕಾ ಪಡುಕೋಣೆಯನ್ನು ನೋಡಿದಂತೆ ಆಗುತ್ತೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಶಾರುಖ್ ಪುತ್ರಿ ಸುಹಾನಾ ಖಾನ್ ಬಾಲಿವುಡ್‌ಗೆ ಬಂದೇ ಬಿಟ್ಟಳು ಎನ್ನುವಷ್ಟು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಸುಹಾನಾ ಖಾನ್ ಬಾಲಿವುಡ್ ಎಂಟ್ರಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿದೇಶದಲ್ಲಿ ಓದುತ್ತಿರುವಾಗಲೇ ಸುಹಾನಾ ಖಾನ್ ಸಿನಿಮಾ ಬಗ್ಗೆನೇ ಹೆಚ್ಚು ಆಸಕ್ತಿ ಹೊಂದಿದ್ದಳು. ಶಾರ್ಟ್ ಫಿಲ್ಮ್ ನಿಂದ ಹಿಡಿದು ಸಿನಿಮಾ ಬಗ್ಗೆ ಬೇಕಾಗಿರುವ ವಿದ್ಯೆಗಳನ್ನು ಅಭ್ಯಾಸ ಮಾಡಿದ್ದಾಳೆ. ಹೀಗಾಗಿ ಶಾರುಖ್ ಪುತ್ರಿ ಬಾಲಿವುಡ್‌ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನುವಂತಾಗಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೊಗಳು ಈ ಸಂಗತಿಯನ್ನು ನಿಜ ಮಾಡಲು ಹೊರಟಿವೆ.

 ಕೆಂಪು ಸೀರೆಯಲ್ಲಿ ಸುಹಾನಾ ಖಾನ್ ಪೋಸ್

ಕೆಂಪು ಸೀರೆಯಲ್ಲಿ ಸುಹಾನಾ ಖಾನ್ ಪೋಸ್

ಶಾರುಖ್ ಪುತ್ರಿ ಸುಹಾನಾ ಖಾನ್ ಕೆಂಪು ಸೀರೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾಳೆ. ಬಾಲಿವುಡ್ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಸೀರೆಯುಟ್ಟು ಪೋಸ್ ಕೊಟ್ಟ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆ ಶಾರುಖ್ ಖಾನ್ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿದೆ. ಶಾರುಖ್ ಪುತ್ರಿ ಸುಹಾನಾ ಖಾನ್‌ ಬಾಲಿವುಡ್ ಎಂಟ್ರಿಗಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

 ಸೀರೆಯುಟ್ಟ ಸುಹಾನಾ ಕಂಡು ದೀಪಿಕಾ ನೆನೆದ ಫ್ಯಾನ್ಸ್

ಸೀರೆಯುಟ್ಟ ಸುಹಾನಾ ಕಂಡು ದೀಪಿಕಾ ನೆನೆದ ಫ್ಯಾನ್ಸ್

ಕೆಂಪು ಸೀರೆಯುಟ್ಟು ಗೋಡೆಗೆ ಒರಗಿ ನಿಂತ ಶಾರುಖ್ ಪುತ್ರಿಯನ್ನು ಕಂಡ ಅಭಿಮಾನಿಗಳು ಸುಮ್ಮನಾಗಿಲ್ಲ. ಸೀರೆಯಲ್ಲಿ ಸುಹಾನಾಳನ್ನು ಕಂಡು ದೀಪಿಕಾ ಪಡುಕೋಣೆ ನೋಡಿದಂತೆ ಆಗುತ್ತೆ ಎಂದು ಹೇಳುತ್ತಿದ್ದಾರೆ. " ಮೊದಲು ನನಗೆ ಕಂಗನಾ ನೋಡಿದಂತೆ ಆಯಿತು." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. " ದೀಪಿಕಾಗೆ ತೀರಾ ಹತ್ತಿರವಾಗಿದ್ದಾಳೆ ಅನಿಸುತ್ತಿದೆ." ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಖಾನ್ ಫೋಟೊಗಳು ವೈರಲ್ ಆಗುತ್ತಿದ್ದಂತೆ ಶಾರುಖ್ ಪುತ್ರಿ ದಿಲ್ ಖುಷ್ ಆಗಿದ್ದಾಳೆ.

ಮಗಳನ್ನು ಮೆಚ್ಚಿದ ಗೌರಿ ಖಾನ್

22 ವರ್ಷದ ಶಾರುಖ್ ಖಾನ್ ಪುತ್ರಿ ಸುಹಾನಾ ಫೋಟೊಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಮಗಳನ್ನು ಕಂಡು ಗೌರಿ ಖಾನ್ ಖುಷಿ ವ್ಯಕ್ತಪಡಿಸಿದ್ದಾರೆ. " ಇದು ಕೆಂಪು.. ಈ ವೈಬ್ ಅನ್ನು ಇಷ್ಟ ಪಡುತ್ತೇನೆ ಮನೀಶ್" ಎಂದು ಗೌರಿ ಖಾನ್ ಕಮೆಂಟ್ ಮಾಡಿದ್ದಾರೆ. ಸುಹಾನಾ ಖಾನ್ ಬೆಸ್ಟ್ ಫ್ರೆಂಡ್ ಅನನ್ಯಾ ಪಾಂಡೆ ಅಮ್ಮ ಭಾವನಾ ಪಾಂಡೆ ಕೂಡ ಮನೀಶ್ ಪೋಸ್ಟ್ ಮಾಡಿದ ಫೋಟೊಗಳಿಗೆ " ಬೆರಗುಗೊಳಿಸುವಂತಿದೆ" ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಸುಹಾನಾ ಖಾನ್ ಬಾಲಿವುಡ್ ಎಂಟ್ರಿ ಕೊಡಲು ವೇದಿಕೆ ಸಜ್ಜಾಗುತ್ತಿದೆ.

 ಜೋಯಾ ಅಖ್ತರ್‌ ಸಿನಿಮಾದಲ್ಲಿ ಶಾರುಖ್ ಪುತ್ರಿ

ಜೋಯಾ ಅಖ್ತರ್‌ ಸಿನಿಮಾದಲ್ಲಿ ಶಾರುಖ್ ಪುತ್ರಿ

ಸುಹಾನಾ ಖಾನ್ ಬಾಲಿವುಡ್ ಎಂಟ್ರಿ ಬಗ್ಗೆ ಇನ್ನೂ ಶಾರುಖ್ ಖಾನ್ ಎಲ್ಲೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿಲ್ಲ. ಆದರೆ, ಶಾರುಖ್ ಖಾನ್ ತಮ್ಮ ಪುತ್ರಿಗೆ ಸಿನಿಮಾದಲ್ಲಿ ಆಸಕ್ತಿಯಿದೆ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಗಾಳಿ ಸುದ್ದಿಯೊಂದು ಹರಿದಾಡುತ್ತಿದ್ದು, ನಿರ್ದೇಶಕಿ ಜೋಹಾ ಅಖ್ತರ್ ಸಿನಿಮಾ ಮೂಲಕ ಸುಹಾನಾ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶಾರುಖ್ ಕುಟುಂಬ ಆಗಲಿ, ಜೋಯಾ ಅಖ್ತರ್ ಆಗಿಲಿ ಎಲ್ಲೂ ಹೇಳಿಕೆಗಳನ್ನು ನೀಡಿಲ್ಲ.

More from Filmibeat

English summary
Shah Rukh Khan, daughter Suhana Khan red saree photo resembles Deepika Padukone. Fashion designer Manish Malhotra took to Instagram and shared pictures of the 22-year-old draped in a red saree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X