ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 'ಡಂಕಿ' ಲೀಕ್: ಪೈರಸಿಗೆ ಮತ್ತೊಂದು ಸಿನಿಮಾ ಬಲಿಯಾಯ್ತಾ?

ಸಿನಿಮಾ ಮಂದಿಗೆ ಪೈರಸಿ ಅನ್ನೋದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದು ಇಂದಿನ ಸಮಸ್ಯೆಯಲ್ಲ. ಹಲವು ವರ್ಷಗಳಿಂದ ಪೈರಸಿಯನ್ನು ತಡೆಗಟ್ಟುವುದಕ್ಕೆ ಸಿನಿಮಾ ಮಂದಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ, ಇದೂವರೆಗೂ ಇದೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.

ಸೂಪರ್‌ಸ್ಟಾರ್‌ಗಳ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿದ್ದಂತೆ ಒಂದೆರಡು ದಿನಗಳಲ್ಲಿ ಇಡೀ ಸಿನಿಮಾವನ್ನು ಕಿಡಿಗೇಡಿಗಳು ಲೀಕ್ ಮಾಡುತ್ತಿದ್ದರು. ಮೊದಲ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗುತ್ತಿದ್ದವರು, ಈಗ ಉತ್ತಮ ಕ್ವಾಲಿಟಿ ಕಾಪಿಯನ್ನೇ ಅನ್‌ಲೈನ್‌ನಲ್ಲಿ ಲೀಕ್ ಮಾಡುತ್ತಿದ್ದಾರೆ. ಹೊಚ್ಚ ಹೊಸ ಸಿನಿಮಾಗಳು ಎಲ್ಲಿಂದ ಸೋರಿಕೆಯಾಗುತ್ತಿವೆ ಅನ್ನೋದನ್ನೇ ಇನ್ನು ಕಂಡು ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ.

Shah Rukh Khan Dunki movie leaked on tamilrockers and telegram channels

ಈಗ ಪೈರಸಿ ಬಿಸಿ ಶಾರುಖ್ ಖಾನ್ ಸಿನಿಮಾ 'ಡಂಕಿ'ಗೂ ತಟ್ಟಿದೆ. ಕಿಂಗ್ ಖಾನ್ ನಟಿಸಿದ 'ಡಂಕಿ' ಸಿನಿಮಾ ಇಂದು (ಡಿಸೆಂಬರ್ 21) ವಿಶ್ವದಾದ್ಯಂತ ತೆರೆಕಂಡಿದೆ. ರಾಜ್‌ಕುಮಾರ್ ಹಿರಾನಿ ಹಾಗೂ ಶಾರುಖ್ ಖಾನ್ ಕಾಂಬಿನೇಷನ್ ಸಿನಿಮಾ ಆಗಿದ್ದರಿಂದ ನಿರೀಕ್ಷೆ ಹೆಚ್ಚಿದೆ. ಆದರೆ, ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇಡೀ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಬಾಲಿವುಡ್‌ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳು ವರದಿ ಮಾಡಿವೆ.

ಲೆಹರೆ ವೆಬ್‌ಸೈಟ್ ಮಾಡಿರುವ ವರದಿ ಪ್ರಕಾರ, ಶಾರುಖ್ ಖಾನ್ ಸಿನಿಮಾ 'ಡಂಕಿ' ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲೀಕ್ ಆಗಿದೆ. ಟೊರೆಂಟೊ ಸೈಟ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಫಿಲ್ಮಿಜಿಲ್ಲಾ, ತಮಿಳುರಾಕರ್ಸ್, ಎಂಪಿ4ಮೂವೀಸ್, ಕುಟ್ಟಿ ಮೂವೀಸ್ ಅಂತಹ ಸೈಟ್‌ಗಳಲ್ಲಿ ಲೀಕ್ ಆಗಿದೆ ಎಂದು ವರದಿ ಮಾಡಿದೆ.

Shah Rukh Khan Dunki movie leaked on tamilrockers and telegram channels

ಅದೇ ಇನ್ನು ಕೆಲವು ನ್ಯೂಸ್ ಸೈಟ್‌ಗಳು ತಮಿಳುರಾಕರ್ಸ್‌ 'ಡಂಕಿ' ಸಿನಿಮಾವನ್ನು ಲೀಕ್ ಮಾಡಿದ್ದು, ಟೆಲಿಗ್ರಾಂನ ಕೆಲವು ಚಾನೆಲ್‌ಗಳಲ್ಲಿ ಸಿನಿಮಾ ಸೋರಿಕೆಯಾಗಿದೆ ಎಂದೂ ವರದಿ ಮಾಡಿವೆ. ಆದರೆ, ಈ ಬಗ್ಗೆ ಶಾರುಖ್ ಖಾನ್ ಹಾಗೂ 'ಡಂಕಿ' ಚಿತ್ರತಂಡ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

'ಮುನ್ನಾಬಾಯ್ ಎಂಬಿಬಿಎಸ್', 'ಲಗೇ ರಹೋ ಮುನ್ನಭಾಯ್', '3 ಈಡಿಯಟ್ಸ್', 'ಪಿಕೆ', 'ಸಂಜು' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ರಾಜ್‌ಕುಮಾರ್ ಹಿರಾನಿ 'ಡಂಕಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಶಾರುಖ್ ಖಾನ್‌ ಸಿನಿಮಾ ನಿರ್ದೇಶನ ಮಾಡಿದ್ದು ಈ ಸಿನಿಮಾದ ಮತ್ತೊಂದು ವಿಶೇಷ.

ಪಂಜಾಬ್ ಭಾಗದ ಜನರು ವಿದೇಶಕ್ಕೆ ತೆರಳಲು ಕಳ್ಳ ಮಾರ್ಗವನ್ನು ಹುಡುಕಿಕೊಳ್ಳುವ ಕಥೆಯನ್ನು 'ಡಂಕಿ'ಯಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ ಸೇರಿದಂತೆ ಹಲವು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್, ಸಾಂಗ್ಸ್ ಸಿನಿಪ್ರಿಯರ ಮನಗೆದ್ದಿದೆ. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಬಹುದು ಅನ್ನೋ ನಿರೀಕ್ಷೆಗೆ ಪೈರಸಿ ದೊಡ್ಡ ಪೆಟ್ಟುಕೊಡುವ ಸಾಧ್ಯತೆಯಿದೆ.

More from Filmibeat

English summary
Shah Rukh Khan Dunki movie leaked online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X