'ಬಾಹುಬಲಿ 2' ದಾಖಲೆಯನ್ನೂ ಹಿಂದಿಕ್ಕುತ್ತಾ 'ಪಠಾಣ್'? ₹1000 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಾಹಂ ಸಿನಿಮಾ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮೂರನೇ ಭಾನುವಾರವೂ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಲೇ ಇದೆ.

ಶಾರುಖ್ ಖಾನ್ ಸಿನಿಮಾ 'ಪಠಾಣ್' ರಿಲೀಸ್ ಆಗಿ ಇಂದಿಗೆ (ಫೆಬ್ರವರಿ 13) 20 ದಿನಗಳಲ್ಲಿ ಪೂರೈಸಿದೆ. ಕಳೆದ 19 ದಿನಗಳಲ್ಲಿ 'ಪಠಾಣ್' ಬಾಕ್ಸಾಫೀಸ್ ಕಲೆಕ್ಷನ್‌ ಅದ್ಭುತವಾಗಿದೆ. ಈಗಾಗಲೇ 'ಕೆಜಿಎಫ್ 2' ಹಿಂದಿ ಅವತರಣಿಯ ಲೈಫ್ ಟೈಮ್ ಕಲೆಕ್ಷನ್‌ ಅನ್ನು ಹಿಂದಿಕ್ಕಿದೆ. ಈಗ 'ಬಾಹುಬಲಿ 2' ದಾಖಲೆಯ ಮೇಲೆ ಕಣ್ಣಿಟ್ಟಿದೆ.

ಕಳೆದ 19 ದಿನಗಳಲ್ಲಿ 'ಪಠಾಣ್' ಬಾಕ್ಸಾಫೀಸ್ ಕಲೆಕ್ಷನ್ ನೋಡಿ ಸಿನಿಮಾ ಮಂದಿ ಬೆರಗಾಗಿದ್ದಾರೆ. ದಕ್ಷಿಣ ಭಾರತದ ಫಿಲ್ಮ್‌ ಮೇಕರ್ಸ್‌ ಎದೆಯಲ್ಲಿ ಡವಡವ ಶುರುವಾಗಿದೆ. ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2' ಸಿನಿಮಾದ ಹಿಂದಿ ಕಲೆಕ್ಷನ್ ರೆಕಾರ್ಡ್‌ ಬ್ರೇಕ್ ಮಾಡುವ ತರಾತುರಿಯಲ್ಲಿದೆ. ಹಾಗಿದ್ರೆ, 'ಬಾಹುಬಲಿ 2' ಹಿಂದಿ ಕಲೆಕ್ಷನ್ ಎಷ್ಟು? 19 ದಿನಗಳಲ್ಲಿ 'ಪಠಾಣ್' ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

19ನೇ ದಿನ ಕಲೆಕ್ಷನ್ ಎಷ್ಟು?

19ನೇ ದಿನ ಕಲೆಕ್ಷನ್ ಎಷ್ಟು?

ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ ಸಖತ್ತಾಗಿಯೇ ಕೈ ಹಿಡಿದಿದೆ. 3ನೇ ಭಾನುವಾರವೂ ಕಲೆಕ್ಷನ್ ಅದ್ಭುತವಾಗಿಯೇ ಇದೆ. 19ನೇ ದಿನ 'ಪಠಾಣ್' ಕಲೆಕ್ಷನ್ ನಿರ್ಮಾಪಕರ ಜೇಬು ತುಂಬಿಸಿದೆ ಎನ್ನುತ್ತಿದ್ದಾರೆ. ಈ ಮೂಲಕ ಇಲ್ಲಿವರೆಗೂ 'ಪಠಾಣ್' ಹಿಂದಿ ಬೆಲ್ಟ್‌ನಲ್ಲಿ ಸುಮಾರು 469 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಎಲ್ಲಾ ಭಾಷೆಯಿಂದಲೂ ಭಾರತದಲ್ಲಿ ಗಳಿಸಿದ್ದು, 486.25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

'ಬಾಹುಬಲಿ 2' Vs 'ಪಠಾಣ್' ಗೆಲ್ಲೋದ್ಯಾರು?

'ಬಾಹುಬಲಿ 2' Vs 'ಪಠಾಣ್' ಗೆಲ್ಲೋದ್ಯಾರು?

ದಕ್ಷಿಣ ಭಾರತದ ಡಬ್ ಸಿನಿಮಾ 'ಬಾಹುಬಲಿ 2' ಹಿಂದಿ ಬೆಲ್ಟ್‌ನಲ್ಲಿ ದಾಖಲೆ ಕಲೆಕ್ಷನ್ ಬರೆದಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 511 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈಗ 'ಪಠಾಣ್' ಹಿಂದಿ ಬೆಲ್ಟ್‌ನಲ್ಲಿ 469 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ 'ಬಾಹುಬಲಿ 2' ಹಿಂದಿ ದಾಖಲೆಯನ್ನು ಮುರಿಯಬಹುದೇ ಎಂದು ಲೆಕ್ಕ ಹಾಕಲಾಗುತ್ತಿದೆ.

ವರ್ಲ್ಡ್‌ವೈಡ್ 'ಪಠಾಣ್' ಕಲೆಕ್ಷನ್ ಎಷ್ಟು?

ವರ್ಲ್ಡ್‌ವೈಡ್ 'ಪಠಾಣ್' ಕಲೆಕ್ಷನ್ ಎಷ್ಟು?

'ಪಠಾಣ್' ಕೇವಲ ಹಿಂದಿ ಬೆಲ್ಟ್‌ಗಳಲ್ಲಷ್ಟೇ ಅಲ್ಲ. ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ ಕೂಡ ಜೋರಾಗಿದೆ. 19ನೇ ದಿನ ವಿಶ್ವದಾದ್ಯಂತ ಸುಮಾರು 12.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಸುಮಾರು 950 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ. ಇನ್ನು 50 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ, 1000 ಕೋಟಿ ರೂ. ಕ್ಲಬ್ ಸೇರಿದಂತಾಗುತ್ತೆ.

'ಕೆಜಿಎಫ್ 2' ವರ್ಲ್ಡ್‌ವೈಡ್ ಕಲೆಕ್ಷನ್ ಹಿಂದಿಕ್ಕಬಹುದೇ?

'ಕೆಜಿಎಫ್ 2' ವರ್ಲ್ಡ್‌ವೈಡ್ ಕಲೆಕ್ಷನ್ ಹಿಂದಿಕ್ಕಬಹುದೇ?

ವಿಶ್ವದಾದ್ಯಂತ 'ಪಠಾಣ್' ಸಿನಿಮಾದ ಕಲೆಕ್ಷನ್ 1000 ಕೋಟಿ ರೂ. ಸಮೀಪಿಸುತ್ತಿದೆ. ಈ ಬೆನ್ನಲ್ಲೇ 'RRR', 'KGF 2' ಸಿನಿಮಾ ವರ್ಲ್ಡ್‌ವೈಡ್ ಕಲೆಕ್ಷನ್ ಅನ್ನು ಹಿಂದಿಕ್ಕಬಹುದೇ? ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ,'ಪಠಾಣ್' ಕ್ರೇಜ್ ಹೀಗೆ ಮುಂದುವರೆದರೆ, 'RRR' ಹಾಗೂ 'KGF 2' ಲೈಫ್ ಟೈಮ್ ಕಲೆಕ್ಷನ್‌ ಅನ್ನು ಹಿಂದಿಕ್ಕಬಹುದು ಎಂದು ಅಂದಾಜಿಸಿದ್ದಾರೆ.

More from Filmibeat

English summary
Shah Rukh Khan Film Pathaan 19th day box office collection 950 Cr. Will it beat 'Baahubali 2'?, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X