'ಪಠಾಣ್‌' ನಿರ್ಮಿಸಿದ್ದ ಯಶ್‌ ರಾಜ್‌ ಫಿಲ್ಮ್ಸ್‌ಗೆ ₹333 ಕೋಟಿ ಲಾಭ: ಶಾರುಖ್ ಖಾನ್‌ ಸಂಭಾವನೆ ಎಷ್ಟು?

ಬಾಲಿವುಡ್ ಕಿಂಗ್ ಖಾನ್ ಕಮ್ ಬ್ಯಾಕ್ ಮಾಡಿದ ಸಿನಿಮಾ 'ಪಠಾಣ್'. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಾಹಂ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದು ಗೊತ್ತೇ ಇದೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ರಿಲೀಸ್ ಆಗಿದ್ದ 'ಪಠಾಣ್' ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿಕೊಂಡು ಮುನ್ನುಗಿತ್ತು.

ಶಾರುಖ್ ಖಾನ್ ಅಭಿಮಾನಿಗಳು ನಿರೀಕ್ಷೆ ಮಾಡಿದಂತೆ ಥಿಯೇಟರ್ ತುಂಬಿ ತುಳುಕಿತ್ತು. ಮೊದಲ ದಿನವೇ ಸುಮಾರು 57 ಕೋಟಿ ರೂ. ಕಲೆ ಹಾಕಿತ್ತು. ಇದು ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಗಳಿಕೆ ಕಂಡಿತ್ತು.

Shah Rukh Khan Got Rs.200 Crore as his remuneration for acting in Pathaan Movie

ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ಸದ್ಯ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್ ಸಿನಿಮಾ ಎನಿಸಿಕೊಂಡಿದೆ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಏರಿಕೆಯಾಗುತ್ತಲೇ ಇತ್ತು. ಇನ್ನು 'ಪಠಾಣ್' ಸಿನಿಮಾ ಲೈಫ್ ಟೈಮ್ ಕಲೆಕ್ಷನ್ ಹೊಸ ದಾಖಲೆಯನ್ನೇ ಬರೆದಿತ್ತು. ಈ ಮೂಲಕ ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲ್ಮ್ಸ್‌ಗೆ ಬಂದ ಲಾಭ ಎಷ್ಟು? ಶಾರುಖ್ ಸಂಭಾವನೆ ರೂಪದಲ್ಲಿ ಪಡೆದಿದ್ದೆಷ್ಟು? ಅನ್ನೋದನ್ನು ಬಾಲಿವುಡ್ ಹಂಗಾಮ ವರದಿ ಮಾಡಿದೆ.

'ಪಠಾಣ್' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?

ಬಾಲಿವುಡ್ ಸಿನಿಮಾ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ವಿಚಾರದಲ್ಲಿ ರೆಕಾರ್ಡ್ ಬ್ರೇಕ್ ಮಾಡಿದೆ. ಶಾರುಖ್ ಖಾನ್ ಸ್ಪೈ ಅವತಾರದಲ್ಲಿ ಕಂಡಿದ್ದ ಈ ಸಿನಿಮಾ 545 ಕೋಟಿ ರೂ. ಭಾರತದಲ್ಲಿ ಕಲೆ ಹಾಕಿತ್ತು. ಅದೇ ವಿದೇಶದಲ್ಲಿ 396.032 ಕೋಟಿ ಗಳಿಕೆ ಕಂಡಿತ್ತು. 941.02 ಕೋಟಿ ರೂ. ಈ ಎರಡು ಕಡೆಯಿಂದಲೇ ಬಂದಿತ್ತು.

Shah Rukh Khan Got Rs.200 Crore as his remuneration for acting in Pathaan Movie

'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಗಳಿಸಬಹುದು ಅನ್ನೋದು ನಿರೀಕ್ಷೆಯಿರಲಿಲ್ಲ. ಆದರೆ, ಶಾರುಖ್ ಖಾನ್ ಕಮ್ ಬ್ಯಾಕ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಾಹಂ ಇಬ್ಬರಿಗೂ ಬೂಸ್ಟ್ ಸಿಕ್ಕಂತಾಗಿತ್ತು. ಇಷ್ಟೊಂದು ಗಳಿಕೆ ಕಂಡ ಸಿನಿಮಾದಿಂದ ನಿರ್ಮಾಣ ಸಂಸ್ಥೆಗೆ ಸಿಕ್ಕಿದ್ದೆಷ್ಟು? ಶಾರುಖ್ ಖಾನ್ ಜೇಬು ಸೇರಿದ್ದೆಷ್ಟು? ಅಂತ ಬಾಲಿವುಡ್ ಹಂಗಾವ ವರದಿ ಮಾಡಿದೆ.

'ಪಠಾಣ್'ನಿಂದ ಬಂದ ಲಾಭವೇನು?

ಯಶ್ ರಾಜ್ ಫಿಲ್ಮ್ಸ್ 'ಪಠಾಣ್' ಸಿನಿಮಾವನ್ನು 270 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಥಿಯೇಟರ್‌ನಿಂದ ಗಳಿಸಿದ ಹಣವೇ 941 ಕೋಟಿ ರೂ. ಈ ಮೊತ್ತದಲ್ಲಿ ವಿತರಕರಿಗೆ ಕೈ ಸೇರಿದ್ದು 423 ಕೋಟಿ ರೂ. ಲಾಭ ಗಳಿಸಿತ್ತು. ಹೀಗಾಗಿ 'ಪಠಾಣ್' ಬಾಲಿವುಡ್‌ನ ಪ್ರಾಫಿಟಬಲ್ ಸಿನಿಮಾ ಎಂದು ಸಾಬೀತಾಗಿದೆ.

ಥಿಯೇಟ್ರಿಕಲ್ ಕಲೆಕ್ಷನ್ ಜೊತೆ ಸ್ಯಾಟಲೈಟ್ ಕಲೆಕ್ಷನ್ ಕೂಡ ಸೇರಿದೆ. ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳಿಂದ 150 ಕೋಟಿ ರೂ. ವ್ಯವಹಾರ ಮಾಡಿತ್ತು. ಇನ್ನೊಂದು ಕಡೆ ಮ್ಯೂಸಿಕ್ ರೈಟ್ಸ್‌ನಿಂದ 30 ಕೋಟಿ ರೂ. ಗಳಿಸಿತ್ತು. ಈ ಮೂಲಕ ಸುಮಾರು 603 ಕೋಟಿ ರೂ. ಲಾಭ ಗಳಿಸಿದಂತೆ ಆಗಿದೆ.

ಯಶ್ ರಾಜ್‌ ಫಿಲ್ಮ್ಸ್‌ಗೆ ಸಿಕ್ಕಿದ್ದೆಷ್ಟು? ಶಾರುಖ್ ಸಂಭಾವನೆ ಎಷ್ಟು?

'ಪಠಾಣ್' ಸಿನಿಮಾದಿಂದ ಬಂದ ಲಾಭ 603 ಕೋಟಿ ರೂ. ಇದರಲ್ಲಿ ಯಶ್ ರಾಜ್‌ ಫಿಲ್ಮ್ಸ್ ಸಿನಿಮಾ ಬಜೆಟ್ ಅಂತ ಖರ್ಚು ಮಾಡಿದ್ದು, 270 ಕೋಟಿ ರೂ. ಇದರೊಂದಿಗೆ ಲಾಭ ಅಂತ ನಿರ್ಮಾಣ ಸಂಸ್ಥೆಯ ಅಕೌಂಟ್‌ಗೆ ಸೇರಿದ್ದು 333 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಇತ್ತ ಶಾರುಖ್ ಖಾನ್ 'ಪಠಾಣ್' ಸಿನಿಮಾಗೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಸಿನಿಮಾ ಆರಂಭಕ್ಕೂ ಮುನ್ನ ಬಂದ ಲಾಭದಲ್ಲಿ ಶೇ. 60ರಷ್ಟನ್ನು ಸಂಭಾವನೆ ರೂಪದಲ್ಲಿ ನೀಡಬೇಕು ಎಂದು ಒಡಬಂಡಿಕೆಯಾಗಿತ್ತು. ಅದರಂತೆ ಶಾರುಖ್ ಖಾನ್‌ಗೆ ಸುಮಾರು 200 ಕೋಟಿ ರೂ. ಸಂಭಾವನೆ ರೂಪದಲ್ಲಿ ಬಂದಿದೆ ಎಂದು ವರದಿಯಾಗಿದೆ.

More from Filmibeat

English summary
Shah Rukh Khan Got Rs.200 Crore as his remuneration for acting in Pathaan Movie. Yash Raj Films Got 333 Crore as profit,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X