ಕೆಕೆಆರ್ ಐಪಿಎಲ್ ಫೈನಲ್ ತಲುಪುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದ ಶಾರುಖ್; ಕಾರಣವೇನು?

ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್‌ 2024ರ ಫೈನಲ್ ಪ್ರವೇಶ ಮಾಡಿದೆ. ನಿನ್ನೆ ( ಮೇ 21) ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಹೈದರಾಬಾದ್ ತಂಡದ ಎರಡು ರೋಚಕವಾಗಿ ಗೆದ್ದಿತ್ತು. ಇದೇ ಖುಷಿಯಲ್ಲಿ ಶಾರುಖ್ ಖಾನ್ ಮೈದಾನದ ತುಂಬೆಲ್ಲಾ ಓಡಾಡಿದ್ದರು.

ತಮ್ಮ ತಂಡದ ಆಟಗಾರರಿಗೆ ವಿಶ್ ಮಾಡಿದ್ದರು. ಮಾಜಿ ಆಟಗಾರರೊಂದಿಗೆ ಮಾತುಕಥೆ ನಡೆಸಿದ್ದರು. ತಮ್ಮ ತಂಡ ಐಪಿಎಲ್‌ನಲ್ಲಿ ಪ್ರವೇಶಿಸಿದ ಖುಷಿಯಲ್ಲಿ ಇರುವಾಗಲೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಶಾರುಖ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

Shah Rukh Khan hospitalized due to dehydration at ahmedabad after his team KKR entered IPL final

ಕೆಕೆಆರ್ ಹಾಗೂ ಹೈದರಾಬಾದ್ ಪಂದ್ಯ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿತ್ತು. ಅಲ್ಲಿ ವಿಪರೀತ ಬಿಸಿಲು ಇತ್ತು ಎನ್ನಲಾಗಿದೆ. ಈ ಸಂಬಂಧ ಶಾರುಖ್ ಖಾನ್ ಡಿಹೈಡ್ರೆಟ್ ಆಗಿ ಸುಸ್ತಾಗಿದ್ದರು. ಹೀಗಾಗಿ ಅವರನ್ನು ಕೂಡಲೇ ಅಹ್ಮಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನ ಅವರ ಮೇಲೆ ವೈದ್ಯ ನಿಗಾವಹಿಸಿದ್ದರು. ಬಳಿಕ ಡಿಸ್ಚಾರ್ಜ್ ಮಾಡಿ ಮುಂಬೈಗೆ ಕಳುಹಿಸಲಾಗಿದೆ.

ಶಾರುಖ್ ಖಾನ್ ಯಾವುದೇ ಗಂಭೀರ ಸಮಸ್ಯೆಯಿಂದ ಬಳಲುತ್ತಿಲ್ಲ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ವಾತಾವರಣ ಬಿಸಿ ಹೆಚ್ಚಿದ್ದರಿಂದ ಶಾರುಖ್ ಖಾನ್‌ಗೆ ಹೀಟ್ ಸ್ಟ್ರೋಕ್ ಆಗಿತ್ತು. ಹಾಗೇ ಡಿಹೈಡ್ರೇಟ್ ಆಗಿದ್ದರು. ಈ ಸಂಬಂಧ ಮಧ್ಯರಾತ್ರಿ 2 ಗಂಟೆಗೆ ಅವರನ್ನು ಅಹ್ಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎನ್ನಲಾಗಿದೆ.

ಶಾರುಖ್ ಖಾನ್ ಜೊತೆ ಪುತ್ರಿ ಸುಹಾನ ಖಾನ್, ಅಬ್‌ರಾಮ್ ಹಾಗೂ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆಯಲ್ಲಿದ್ದರು ಎನ್ನಲಾಗಿದೆ. ಹಾಗೇ ಸುಹಾನ ಖಾನ್ ಸ್ನೇಹಿತರಾದ ಅನನ್ಯ ಪಾಂಡೆ, ಶನಯಾ ಕಪೂರ್, ನವ್ಯ ನಂದಾ, ಅಗಸ್ತ್ಯ ನಂದ, ಕೂಡ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Shah Rukh Khan hospitalized due to dehydration and discharged:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X