Suhana Khan:ಮಗಳಿಗಾಗಿ 200 ಕೋಟಿ ಎತ್ತಿದ್ದ ಶಾರುಖ್ ಖಾನ್; ಸುಹಾನಾ ಖಾನ್‌ಗಾಗಿ 'ಕಿಂಗ್' ಕಸರತ್ತು

ಬಾಲಿವುಡ್‌ ಸೂಪರ್‌ಸ್ಟಾರ್ ಶಾರುಖ್ ಖಾನ್ ಕಮ್‌ ಬ್ಯಾಕ್ ಮಾಡಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ತಾನಿನ್ನೂ ಬಾಲಿವುಡ್‌ನ ಕಿಂಗ್ ಅನ್ನೋದನ್ನು ಸಾಬೀತು ಮಾಡಿದ್ದರು. 'ಪಠಾಣ್', 'ಜವಾನ್', 'ಡಂಕಿ' ಈ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿದ್ದವು. ಕಮ್ ಬ್ಯಾಕ್ ಸಕ್ಸಸ್ ಆದ ಬೆನ್ನಲ್ಲೇ ಮಗಳನ್ನು ಸಿನಿಮಾಗಾಗಿ ಕಸರತ್ತು ಮಾಡುತ್ತಿದ್ದಾರೆ.

ಶಾರುಖ್ ಖಾನ್‌ ಈಗ ತನ್ನ ಸಿನಿಮಾಗಳಿಗಿಂತ ಹೆಚ್ಚಾಗಿ ಪುತ್ರಿ ಸುಹಾನಾ ಖಾನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಶಾರುಖ್ ಮಕ್ಕಳಲ್ಲಿ ಪುತ್ರಿ ಸುಹಾನಾಗೆ ನಟನೆ ಮೇಲೆ ಹೆಚ್ಚು ಆಸಕ್ತಿಯಿದೆ. ಪುತ್ರ ಆರ್ಯನ್ ಖಾನ್‌ಗೆ ಸದ್ಯ ನಿರ್ದೇಶನದ ಕಡೆಗೆ ಒಲವು ತೋರಿದ್ದರಿಂದ, ಪುತ್ರಿ ಸುಹಾನಾ ಖಾನ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

Shah Rukh Khan is investing Rs 200 crore in his daughter Suhana Khan movie

ಬಾಲಿವುಡ್‌ನಲ್ಲಿ 'ಕಹಾನಿ' ಅಂತಹ ಫಿಮೇಲ್ ಓರಿಯೆಂಟೆಡ್ ಥ್ರಿಲ್ಲರ್ ಸಿನಿಮಾ ಕೊಟ್ಟಿರುವ ಸುಜಯ್ ಘೋಶ್ ಕಥೆ ಶಾರುಖ್ ಖಾನ್ ಹಿಡಿದೆ. ಆ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸ ಈಗಾಗಲೇ ಶುರುವಾಗಿದೆ. ಈ ಸಿನಿಮಾ 'ಕಿಂಗ್' ಅಂತ ಟೈಟಲ್ ಕೂಡ ಫಿಕ್ಸ್ ಆಗಿದೆ. ಇದೊಂದು ಆಕ್ಷನ್ ಸಿನಿಮಾ ಆಗಿದ್ದರಿಂದ ಶಾರುಖ್ ಖಾನ್ 200 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದಾರೆ ಅನ್ನೋದು ಬಾಲಿವುಡ್‌ನಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

'ಕಿಂಗ್' ಸಿನಿಮಾ ಮೂಲಕ ತಮ್ಮ ಪುತ್ರಿ ಸುಹಾನಾ ಖಾನ್‌ರನ್ನು ಬಾಲಿವುಡ್‌ಗೆ ಗ್ರ್ಯಾಂಡ್ ಆಗಿ ಪರಿಚಯ ಮಾಡಲು ಪ್ಲ್ಯಾನ್ ಇಟ್ಟುಕೊಂಡಿದ್ದಾರೆ. ಈಗಾಗಲೇ ಸುಹಾನಾ 'ದಿ ಆರ್ಚೀಸ್' ಸಿನಿಮಾದಲ್ಲಿ ನಟಿಸಿದ್ದರೂ, ಅದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ, ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳನ್ನು ಮಗಳು ಈ ಸಿನಿಮಾದಲ್ಲಿ ನಟಿಸಿದ್ದರು. ಹೀಗಾಗಿ ಶಾರುಖ್ ಖಾನ್ ತಮ್ಮ ಮಗಳಿಗಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಹೊರಟಿದ್ದಾರೆ.

Shah Rukh Khan is investing Rs 200 crore in his daughter Suhana Khan movie

'ಕಿಂಗ್' ಇದೊಂದು ಪಕ್ಕಾ ಆಕ್ಷನ್ ಓರಿಯೆಂಟೆಡ್ ಸಿನಿಮಾ. ಈ ಸಿನಿಮಾದ ಪ್ರತಿಯೊಂದು ದೃಶ್ಯವೂ ಸಿನಿಪ್ರಿಯರ ಕಲ್ಪನೆ ಮೀರಿದ್ದಾಗಿರುತ್ತೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ಆನಂದ್ ಈ ಸಿನಿಮಾಗಾಗಿ ಆಕ್ಷನ್ ಸೀನ್‌ಗಳನ್ನು ಕಂಪೋಸ್ ಮಾಡುತ್ತಿದ್ದಾರೆ ಅನ್ನೋ ಸುದ್ದಿನೂ ಇದೆ. ಆಕ್ಷನ್ ಸಿನಿಮಾಗಳನ್ನು ಮಾಡಿ ಗೆದ್ದಿರೋ ಸಿದ್ಧಾರ್ಥ್ ಆನಂದ್ ಈಗಾಗಲೇ ವಿದೇಶಿ ಸ್ಟಂಟ್ ಡೈರೆಕ್ಟರ್‌ಗಳ ಜೊತೆ ಮಾತುಕತೆ ಆರಂಭಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

'ದಿ ಆರ್ಚಿತ್' ಸಿನಿಮಾ ಮೂಲಕ ಸುಹಾನಾ ಖಾನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರೂ, 'ಕಿಂಗ್' ಸಿನಿಮಾ ಮೂಲಕ ಥಿಯೇಟರ್‌ಗೆ ಅದ್ಧೂರಿ ಎಂಟ್ರಿ ಕೊಡಿಸುವ ಬಗ್ಗೆ ಶಾರುಖ್ ಖಾನ್ ಸ್ಕೆಚ್ ಹಾಕಿದ್ದಾರೆ. ಅಲ್ಲದೆ ಇದೇ ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ಅಪ್ಪ ಮಗಳು ಒಟ್ಟಿಗೆ ನಟಿಸುತ್ತಿರುವ ಮೊದಲ ಸಿನಿಮಾ ಆಗಿದ್ದರಿಂದ 200 ಕೋಟಿ ಬಜೆಟ್ ಅನ್ನು ಈ ಸಿನಿಮಾಗಾಗಿ ಎತ್ತಿಟ್ಟಿದ್ದಾರೆ ಎನ್ನಲಾಗಿದೆ.

'ಡಂಕಿ' ಬಳಿಕ ಶಾರುಖ್ ಖಾನ್ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ. 'ಪಠಾಣ್ Vs ಟೈಗರ್' ಸಿನಿಮಾ ಬಗ್ಗೆನೂ ಸುಳಿವು ಇಲ್ಲ. ಈ ಕಾರಣಕ್ಕೆ 'ಕಿಂಗ್' ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2023ರಲ್ಲಿ ಮೂರು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಶಾರುಖ್ ಖಾನ್ 2024ರಲ್ಲಿ ಒಂದೂ ಸಿನಿಮಾ ರಿಲೀಸ್ ಆಗೋದಿಲ್ವಾ? ಅನ್ನೋ ಪ್ರಶ್ನೆ ಅಭಿಮಾನಿಗಳದ್ದು. ಯಾಕಂದ್ರೆ 'ಕಿಂಗ್' 2025ಕ್ಕೆ ರಿಲೀಸ್ ಆಗುತ್ತಿದೆ. ಸದ್ಯ 2024ರಲ್ಲಿ ರಿಲೀಸ್ ಆಗುತ್ತಿರೋ ಶಾರುಖ್ ಖಾನ್ ಹೊಸ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇಲ್ಲ.

More from Filmibeat

English summary
Shah Rukh Khan is investing Rs 200 crore in his daughter Suhana Khan movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X