Valentine’s Day: ಪ್ರೇಮಿಗಳ ದಿನಕ್ಕೆ DDLJ ರೀ– ರಿಲೀಸ್.. 3 ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್!

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ'(DDLJ). 90ರ ದಶಕದಲ್ಲಿ ತೆರೆಕಂಡ ಶಾರುಖ್ ಖಾನ್ ಹಾಗೂ ಕಾಜೋಲ್ ಜೋಡಿಯ ಸಿನಿಮಾ ಪ್ರೇಮಿಗಳನ್ನು ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡಿತ್ತು. ಅತೀ ಹೆಚ್ಚು ವರ್ಷ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಸಿನಿಮಾ ಕೂಡ ಇದೇನೆ.

ಇದೇ ಕಾರಣಕ್ಕೆ ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲ್ಮ್ಸ್ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ'(DDLJ) ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದರು. DDLJ ಸಿನಿಮಾ ಜೊತೆ ಪ್ರೇಮಿಗಳೊಂದಿಗೆ ಪ್ರೇಮಿಗಳ ದಿನಗಳ ದಿನವನ್ನು ಸೆಲೆಬ್ರೆಟ್ ಮಾಡುವುದಕ್ಕೆ ಮುಂದಾಗಿದ್ದರು.

ಇನ್ನೊಂದು ಕಡೆ ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಇನ್ನೂ ಗುಡುಗುತ್ತಲೇ ಇದೆ. ಇದೇ ವೇಳೆ ಶಾರುಖ್ ಖಾನ್ ಹಾಗೂ ಕಾಜೋಲ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಿದೆ. ಅಶ್ಚರ್ಯ ಅಂದ್ರೆ,DDLJ ಲಿಮಿಟೆಡ್ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.

ಬಾಕ್ಸಾಫೀಸ್‌ನಲ್ಲಿ 'DDLJ' ಮಸ್ತ್ ಕಲೆಕ್ಷನ್

ಬಾಕ್ಸಾಫೀಸ್‌ನಲ್ಲಿ 'DDLJ' ಮಸ್ತ್ ಕಲೆಕ್ಷನ್

'DDLJ' 1995 ಅಕ್ಟೋಬರ್ 20ರಂದು ತೆರೆಕಂಡಿತ್ತು. ಸುಮಾರು 28 ವರ್ಷಗಳ ಬಳಿಕವೂ ಈ ಸಿನಿಮಾಗೆ ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಪ್ರೇಮಿಗಳ ದಿನಕ್ಕಾಗಿ ಕೆಲವೇ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಹೀಗಿದ್ದರೂ, ಕಳೆದ ಮೂರು ದಿನಗಳಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಡಬಲ್ ಡಿಜಿಟ್ ಕಲೆಕ್ಷನ್ ಮಾಡಿ ಯಶಸ್ಸು ಕಂಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಸುಮಾರು 22.50 ಲಕ್ಷ ಗಳಿಕೆ ಕಂಡು ಬಾಲಿವುಡ್‌ ಮಂದಿಗೆ ಅಚ್ಚರಿ ಮೂಡಿಸಿದೆ.

'DDLJ' ಕಲೆಕ್ಷನ್ ಎಷ್ಟು?

'DDLJ' ಕಲೆಕ್ಷನ್ ಎಷ್ಟು?

'DDLJ' ಮೊದಲ ಬಾರಿಗೆ ರಿಲೀಸ್ ಆದ 9977 ದಿನಗಳ ಬಳಿಕ ರೀ-ರಿಲೀಸ್ ಆಗಿದೆ. ಫೆಬ್ರವರಿ 10ರಂದು ಪಿವಿಆರ್, ಐನಾಕ್ಸ್ ಹಾಗೂ ಸಿನಿಪೊಲಿಸ್ ಅಂತಹ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲಾಗಿದೆ. ಮೊದಲ ಕೇವಲ 2.50 ಲಕ್ಷ ರೂ. ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಶೇ.300ರಷ್ಟು ಜಂಪ್ ಕಂಡಿದೆ ಎನ್ನಲಾಗಿದೆ. ಫೆಬ್ರವರಿ 11ರಂದು 10 ಲಕ್ಷ ರೂ. ಹಾಗೇ ಮೂರನೇ ದಿನ 10 ಲಕ್ಷ ರೂ. ಕಲೆಕ್ಷನ್ ಕಂಡಿದೆ. ಒಟ್ಟು ಮೂರು ದಿನಗಳಲ್ಲಿ ಸುಮಾರು 22.50 ಲಕ್ಷ ರೂ. ಗಳಿಕೆ ಕಂಡಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.

'DDLJ' ಸಿನಿಮಾದ ಟಾರ್ಗೆಟ್ ಎಷ್ಟು?

'DDLJ' ಸಿನಿಮಾದ ಟಾರ್ಗೆಟ್ ಎಷ್ಟು?

ವೀಕೆಂಡ್‌ನಲ್ಲಿ 'DDLJ' ಬಾಕ್ಸಾಫೀಸ್‌ ಕಲೆಕ್ಷನ್ ನೋಡಿ ಈಗಾಗಲೇ ಲೆಕ್ಕಾಚಾರಗಳು ಶುರುವಾಗಿವೆ. ಫೆಬ್ರವರಿ 14ರವರೆಗೂ ಈ ಸಿನಿಮಾದ ಕಲೆಕ್ಷನ್ ಅದ್ಭುತವಾಗಿರುತ್ತೆ ಎಂದು ಅಂದಾಜಿಸಲಾಗಿದೆ. ಒಂದು ಅಂದಾಜಿನ ಪ್ರಕಾರ, ಒಂದು ವಾರದಲ್ಲಿ 'DDLJ' ಸುಮಾರು 60 ಲಕ್ಷ ರೂ.ಗೂ ಹೆಚ್ಚು ಬ್ಯುಸಿನೆಸ್ ಮಾಡಬಹುದು ಎಂದು ಅಂದಾಜಿಸಲಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ 'DDLJ' ಡಾಕ್ಯೂಮೆಂಟರಿ

ನೆಟ್‌ಫ್ಲಿಕ್ಸ್‌ನಲ್ಲಿ 'DDLJ' ಡಾಕ್ಯೂಮೆಂಟರಿ

ಪ್ರೇಮಿಗಳ ದಿನ ವಿಶೇಷವಾಗಿ ನೆಟ್‌ಫ್ಲಿಕ್ಸ್ 'ದಿ ರೊಮ್ಯಾಂಟಿಕ್ಸ್' ಅನ್ನೋ ಸಿರೀಸ್ ಅನ್ನು ಶುರು ಮಾಡಿದೆ. ಇದರಲ್ಲಿ 'DDLJ' ಸಿನಿಮಾ ಪ್ರಮುಖವಾಗಿದ್ದು, ಫೆಬ್ರವರಿ 14ರಂದು ಬಿಡುಗಡೆ ಮಾಡುತ್ತಿದೆ. ಈ ಸಿನಿಮಾ ತನ್ನ ಲೈಫ್‌ ಸ್ಟೈಲ್‌ ಮೇಲೆ ಹೇಗೆ ಪರಿಣಾಮ ಬೀರಿತ್ತು ಅನ್ನೋದನ್ನು ರಣ್‌ಬೀರ್ ಕಪೂರ್ ಹೇಳಿಕೊಂಡಿದ್ದಾರೆ."'DDLJ' ಸಿನಿಮಾ ನಾನು ಧರಿಸುವ ವಸ್ತ್ರದ ಮೇಲೆ ಪ್ರಭಾವ ಬೀರಿತ್ತು. ನಾನು ಹುಡುಗಿಯರೊಂದಿಗೆ ಮಾತನಾಡುವುದರ ಮೇಲೆ ಪರಿಣಾಮ ಬೀರಿತ್ತು. ನನ್ನ ಪೋಷಕರೊಂದಿಗೆ ಹೇಗೆ ಮಾತಾಡಬೇಕು ಅನ್ನೋದರ ಮೇಲೆ ಪರಿಣಾಮ ಬೀರಿತ್ತು." ಎಂದು ರಣ್‌ಬೀರ್ ಕಪೂರ್ ಹೇಳಿದ್ದಾರೆ.

More from Filmibeat

English summary
Shah Rukh Khan Kajol Movie DDLJ re-release box office Collection In 3 days is 22.50 lakhs, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X