'ಡಂಕಿ' ರಿಲೀಸ್ ಹತ್ತಿರದಲ್ಲಿರುವಾಗ್ಲೇ ಅಬುಧಾಬಿಯಲ್ಲಿ ಶಾರುಖ್ ಸಾಂಗ್ ಶೂಟ್: ಪ್ಲ್ಯಾನ್ ಏನು?
ಈ ವರ್ಷ ಮುಗಿಯುವುದರೊಳಗೆ ಶಾರುಖ್ ಖಾನ್ ನಟನೆಯ ಮೂರನೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. 'ಪಠಾಣ್', 'ಜವಾನ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ಬಳಿಕ 'ಡಂಕಿ' ಕೂಡ ಅದೇ ಸಾಲಿಗೆ ಸೇರುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ. ಅದಕ್ಕೆ ಕಾರಣ 'ಡಂಕಿ' ಸಿನಿಮಾದ ತುಣುಕುಗಳು.
ಕೆಲವು ದಿನಗಳ ಹಿಂದಷ್ಟೇ 'ಡಂಕಿ' ಸಿನಿಮಾ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿತ್ತು. ಆ ಟ್ರೈಲರ್‌ಗೆ ಸಿನಿ ಪ್ರೇಮಿಗಳಿಂದ ಹಾಗೂ ಶಾರುಖ್ ಖಾನ್ ಅಭಿಮಾನಿಗಳಿಂದ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ವೇಳೆ ಸಿನಿಮಾದ ಹಾಡುಗಳ ಝಲಕ್ ಕೂಡ ತೋರಿಸುವುದಕ್ಕೆ ಹೊರಟಿದ್ದಾರೆ. ಇಂದು (ಡಿಸೆಂಬರ್ 11) ಡಂಕಿ ಸಿನಿಮಾ "ಓ ಮಾಹಿ.. ಓ ಮಾಹಿ.." (Dunki Drop 5) ಹಾಡಿನ ಝಲಕ್ ತೋರಿಸಿದ್ದಾರೆ.

ಸ್ವತ: ಶಾರುಖ್ ಖಾನ್ " ಓ ಮಾಹಿ ಓ ಮಾಹಿ.." ಹಾಡನ್ನು ಪ್ರೋಮೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಹಾಡಿನ ತುಣುಕನ್ನು ನೋಡಿದಾಗ, ಶಾರುಖ್ ಖಾನ್ ರೊಮ್ಯಾಂಟಿಕ್ ಟ್ರೇಡ್ ಮಾರ್ಕ್ ಮತ್ತೆ ತೋರಿಸಿದ್ದಾರೆ ಅನ್ನೋದು ಫ್ಯಾನ್ಸ್‌ಗೆ ಖುಷಿಕೊಟ್ಟಿದೆ.
'ಡಂಕಿ' ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಬಹುದು ಅನ್ನೋ ನಿರೀಕ್ಷೆಯಿದೆ. ಅದಕ್ಕೆ ಕಾರಣ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಬಾಲಿವುಡ್‌ನಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರೋ ಹಿರಾನಿ ಮೇಲೆ ಸಿನಿಪ್ರಿಯರಿಗೆ ನಂಬಿಕೆ ಜಾಸ್ತಿ. ಗಂಭೀರ ಕಥೆಯನ್ನು ಹಾಸ್ಯ ಹಾಗೂ ಭಾವನಾತ್ಮಕ ಸನ್ನಿವೇಶಗಳ ಮೂಲಕ ಹೇಳುವುದೇ ಇವರ ಸ್ಟ್ರೆಂಥ್.

ಇನ್ನೊಂದು ಕಡೆ 'ಡಂಕಿ' ಡ್ರಾಪ್ 4 ಬಳಿಕ ಡ್ರಾಪ್ 5 ರಿಲೀಸ್‌ಗೆ ಚಿತ್ರತಂಡ ಸಜ್ಜಾಗಿದ್ದರೂ, ಇನ್ನೂ ಈ ಹಾಡಿನ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ. ಇನ್ನು ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಮಯದಲ್ಲಿ ಹಾಡಿನ ಚಿತ್ರೀಕರಣ ಮಾಡುತ್ತಿದ್ದಾರಾ ಅಂತ ಹುಬ್ಬೇರಿಸಬೇಡಿ. 'ಡಂಕಿ' ಸಿನಿಮಾದ ಸ್ಪೆಷಲ್ ನಂಬರ್ ಇತ್ತೀಚಿಗಷ್ಟೇ ಅಬುದಬಿಯಲ್ಲಿ ಶೂಟ್ ಮಾಡಲಾಗಿದೆ.
ಡಂಕಿ ಡ್ರಾಪ್ 5ಗೆ ಅಬುದಾಬಿಯಲ್ಲಿ ಮೂರು ದಿನಗಳ ಕಾಲ ಶೂಟಿಂಗ್ ನಡೆದಿದೆ. ತಮ್ಮ ಮಗಳು ಸುಹಾನಾ ನಟಿಸಿದ 'ಆರ್ಚೀಸ್' ಇವೆಂಟ್ ಮುಗಿಸಿ, ದುಬೈಗೆ ಹಾರಿದ್ದ ಶಾರುಖ್ ಖಾನ್ ಶೂಟಿಂಗ್ ಮುಗಿಸಿದ್ದಾರೆ. ಸದ್ಯ 'ಡಂಕಿ' ಡ್ರಾಪ್ 5 ಝಲಕ್ ರಿಲೀಸ್ ಆಗಿದ್ದು, ಸಿನಿಮಾ ರಿಲೀಸ್‌ಗೂ ಮೊದಲೇ ಬಿಡುಗಡೆಯಾಗಲಿದೆ.
ಶಾರುಖ್ ಖಾನ್ ಜೊತೆ ನಟಿ ತಾಪ್ಪಿ ಪನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ವಿಶೇಷ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ನಟಿಸಿದ್ದಾರೆ. 'ಸಂಜು' ಸಿನಿಮಾ ಸೂಪರ್ ಸಕ್ಸಸ್ ಬಳಿಕ ನಿರ್ದೇಶಕ ರಾಜ್‌ಕುಮಾರ್ ಹಿರಾನಿ 'ಡಂಕಿ'ಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದೇ ಡಿಸೆಂಬರ್ 21ರಂದು ಸಿನಿಮಾ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. 'ಡಂಕಿ' ಸಿನಿಮಾವನ್ನು ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್, ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಜೊತೆಗೆ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ.


Click it and Unblock the Notifications










