27ನೇ ದಿನಕ್ಕೆ Rs.1000 ಕೋಟಿ ಕ್ಲಬ್ ಸೇರಿದ 'ಪಠಾಣ್': ಈ ಸಾಧನೆ ಮಾಡಿದ 5 ಸಿನಿಮಾಗಳು ಇವೇನೆ!
ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡೋದನ್ನು ಇನ್ನೂ ನಿಲ್ಲಿಸಿಲ್ಲ. ಸಿನಿಮಾ ಬಿಡುಗಡೆಯಾದ 27 ದಿನಗಳಲ್ಲಿಯೇ ಈ ಸಿನಿಮಾ 1000 ಕೋಟಿ ಕ್ಲಬ್ ಸೇರುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಅಂತಹ ಸ್ಟಾರ್‌ಕಾಸ್ಟ್ ಇರುವ ಸೈ ಥ್ರಿಲ್ಲರ್ ಸಿನಿಮಾ ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳ ಗಳಿಕೆಯನ್ನೂ ಈ ಸಿನಿಮಾ ಹಿಂದಿಕ್ಕಿ ಮುನ್ನುಗ್ಗುತ್ತಿದೆ.
'ಪಠಾಣ್' ರಿಲೀಸ್ ಆಗಿ ಒಂದು ತಿಂಗಳಾಗುತ್ತಿದೆ. ಆದರೂ ಸಿನಿಮಾ ಗಳಿಕೆಯಲ್ಲಿ ಹಿಂದೆ ಬೀಳುತ್ತಿಲ್ಲ. ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ. ಪಠಾಣ್ ಸಿನಿಮಾ ಮೇಲೆ ಕಾರ್ತಿಕ್ ಆರ್ಯನ್ ಸಿನಿಮಾ 'ಶೆಹಜಾದ', ಹಾಲಿವುಡ್ ಸಿನಿಮಾ 'ಆಂಟ್ ಮ್ಯಾನ್ ಅಂಡ್ ದಿ ವಾಸ್ಪ್: ಕ್ವಾಂಟುಮೇನಿಯಾ' ಸಿನಿಮಾಗಳು ಹಿಂದೆ ಬಿದ್ದಿವೆ. ಹಾಗಿದ್ದರೆ,'ಪಠಾಣ್' ಸಿನಿಮಾ ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ ಕಂಡಿದೆ? ಅನ್ನೋದನ್ನು ನೋಡಲು ಮುಂದೆ ಓದಿ.

27ನೇ ದಿನ 'ಶೆಹಜಾದ' ಟಕ್ಕರ್ ಕೊಟ್ಟ 'ಪಠಾಣ್'
'ಪಠಾಣ್' ರಿಲೀಸ್ ಆಗಿ ನಿನ್ನೆಗೆ(ಫೆಬ್ರವರಿ 20) 27ನೇ ದಿನ. ನಿನ್ನೆ ಕೂಡ 'ಪಠಾಣ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಹೊಸದಾಗಿ ತೆರೆಕಂಡಿರೋ 'ಶೆಹಜಾದ' ಸಿನಿಮಾ ಗಳಿಕೆಯ ಆಸುಪಾಸಿನಲ್ಲಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಪಠಾಣ್' 27ನೇ ದಿನ ಸುಮಾರು Rs.1.5 ಕೋಟಿ ಯಿಂದ Rs.2 ಕೋಟಿ ಕಲೆ ಹಾಕಿದೆ ಎನ್ನಲಾಗಿದೆ. ಅದೇ 'ಶೆಹಜಾದ' Rs.2 ರಿಂದ Rs.3 ಕೋಟಿ ಕಲೆಕ್ಷನ್ ಮಾಡಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ 'ಪಠಾಣ್' ಕಲೆಕ್ಷನ್ ಮುಂದಿನ ದಿನಗಳಲ್ಲೂ ಹೀಗೆ ಇದ್ದರೆ, 'ಕೆಜಿಎಫ್ 2', 'RRR' ದಾಖಲೆಯನ್ನು ಮುರಿಯಬಹುದು.

'ಪಠಾಣ್' Rs.1000 ಕೋಟಿ ಕಲೆಕ್ಷನ್
'ಪಠಾಣ್' ಬಾಕ್ಸಾಫೀಸ್ ಕಲೆಕ್ಷನ್ ನೋಡಿ ಈ ಹಿಂದೆನೇ ಟ್ರೇಡ್ ಎಕ್ಸ್‌ಪರ್ಟ್ಸ್ ಭವಿಷ್ಯ ನುಡಿದಿದ್ದರು. ಈ ಸಿನಿಮಾ Rs.1000 ಕೋಟಿ ಕ್ಲಬ್ ಸೇರುತ್ತೆ ಎಂದಿದ್ದರು. ಅದರಂತೆ 'ಪಠಾಣ್' ವಿಶ್ವದಾದ್ಯಂತ 27ನೇ ದಿನ Rs.1000 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಅತೀ ಹೆಚ್ಚು ಗಳಿಕೆ ಕಂಡ ಹಿಂದಿ ಸಿನಿಮಾ ಎಂಬ ಸಾಧನೆ ಮಾಡಿದೆ. ಬಾಲಿವುಡ್ ಹಾಗೂ ನಿರ್ಮಾಣ ಸಂಸ್ಥೆ ಯಶ್ ರಾಜ್ ಬ್ಯಾನರ್‌ಗೂ ಅತಿ ಗಳಿಕೆ ತಂದುಕೊಟ್ಟ ಸಿನಿಮಾವಿದು. ಸ್ವತ: ಯಶ್ ರಾಜ್ ಸಂಸ್ಥೆ 26ನೇ ದಿನ ಕಲೆಕ್ಷನ್ Rs.996 ಕೋಟಿ ಎಂದು ಅನೌನ್ಸ್ ಮಾಡಿತ್ತು.

'ಬಾಹುಬಲಿ 2' ರೆಕಾರ್ಡ್ ಬ್ರೇಕ್ ಮಾಡುತ್ತಾ?
ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಡಬ್ ಸಿನಿಮಾ ಆಗಿದ್ದರೂ, ಹಿಂದಿ ಬೆಲ್ಟ್‌ನಲ್ಲಿ Rs.510.99 ಕೋಟಿ ಕಲೆಕ್ಷನ್ ಮಾಡಿತ್ತು. ಸದ್ಯ ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಪಠಾಣ್ ಇದೂವರೆಗೂ Rs.499 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಕ್ರೇಜ್ ಮುಂದುವರೆದರೆ, ಹಿಂದಿ ಬೆಲ್ಟ್‌ನಲ್ಲಿ 'ಬಾಹುಬಲಿ 2' ಗಳಿಸಿದ ದಾಖಲೆಯನ್ನು ಇನ್ನೊಂದು ವಾರದಲ್ಲಿ 'ಪಠಾಣ್' ಮುರಿದು ಹಾಕಲಿದೆ.

1000 ಕೋಟಿ ಕ್ಲಬ್ 5 ಐದನೇ ಸಿನಿಮಾ
ಭಾರತದ ಸಿನಿಮಾ ಬಾಕ್ಸಾಫೀಸ್ ರೇಂಜ್ ಬದಲಾಗಿದೆ. ಬಾಹುಬಲಿ ಸಿನಿಮಾ ಬಳಿಕ ಭಾರತದ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ಕಲೆಕ್ಷನ್ ಬಗ್ಗೆನೇ ಹೆಚ್ಚು ಮಾತುಕತೆ ನಡೆಯುತ್ತಿದೆ. ಇದೂವರೆಗೂ ಪಠಾಣ್ ಸೇರಿ 5 ಸಿನಿಮಾಗಳು 1000 ಕೋಟಿ ಕ್ಲಬ್ ಸೇರಿದೆ. 'ದಂಗಲ್' Rs.1968.03 ಕೋಟಿ, 'ಬಾಹುಬಲಿ 2' Rs.1747 ಕೋಟಿ, 'ಕೆಜಿಎಫ್ 2' Rs.1250 ಕೋಟಿ, 'RRR' Rs.1188 ಕೋಟಿ,


Click it and Unblock the Notifications











