'ಜೀರೊ' ಸೇಡು.. 'ಕೆಜಿಎಫ್ 2' ದಾಖಲೆ.. 'ಪಠಾಣ್' ಗೆದ್ದರೆ ಈ ಎಲ್ಲಾ ಸಿನಿಮಾಗಳ ದಾಖಲೆ ಉಡೀಸ್?

ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್' ಮೇಲೆ ಎಲ್ಲರ ಕಣ್ಣಿದೆ. ನಾಳೆ (ಜನವರಿ 25) ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ಕಿಂಗ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಶಾರುಖ್ ಖಾನ್ ಅಭಿಮಾನಿಗಳ ಸಿನಿಮಾ ನೋಡಲು ಕ್ಯೂನಲ್ಲಿ ನಿಂತಿದ್ದಾರೆ.

ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿರೋ ಲೆಕ್ಕಾಚಾರದ ಪ್ರಕಾರ, ಮೊದಲ ದಿನವೇ ಅತೀ ಹೆಚ್ಚು ಓಪನಿಂಗ್ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ನಾಲ್ಕು ವರ್ಷಗಳ ಬಳಿಕ ಶಾರುಖ್ ಸಿನಿಮಾ ರಿಲೀಸ್ ಆಗುತ್ತಿದ್ದು, ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಶಾರುಖ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಆಕ್ಷನ್ ಅವತಾರ ನೋಡಿ ಫ್ಯಾನ್ಸ್ ಸಿನಿಮಾ ನೋಡುವುದಕ್ಕೆ ಕಾತುರರಾಗಿದ್ದಾರೆ.

'ಪಠಾಣ್' ಸಿನಿಮಾ ಕ್ರೇಜ್ ನೋಡಿದ ಬಳಿಕ ಬಾಲಿವುಡ್‌ನಲ್ಲಿ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. 2018ರಲ್ಲಿ ತೆರೆಕಂಡಿದ್ದ 'ಜೀರೊ' ರಾಕಿಂಗ್ ಸ್ಟಾರ್ ಯಶ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಎದುರು ಸೋಲುಂಡಿತ್ತು. ಈ ಸೇಡು ತೀರಿಸಿಕೊಳ್ಳಲು 'ಕೆಜಿಎಫ್ 2' ಚಿತ್ರದ ಮೊದಲ ದಿನದ ದಾಖಲೆಯನ್ನು ಶಾರುಖ್ ಮುರಿಯಬಹುದು ಎಂದು ಅಂದಾಜಿಸಲಾಗಿದೆ. ಅಸಲಿಗೆ 'ಕೆಜಿಎಫ್ 2' Vs 'ಪಠಾಣ್' ಫೈಟ್ ಏನು? ದಾಖಲೆಗಳು ಉಡೀಸ್ ಆಗುತ್ತಾ? ಬಾಲಿವುಡ್ ಲೆಕ್ಕಾಚಾರ ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಮೊದಲ ದಿನ 'ಕೆಜಿಎಫ್ 2' ದೋಚಿದ್ದೆಷ್ಟು?

ಮೊದಲ ದಿನ 'ಕೆಜಿಎಫ್ 2' ದೋಚಿದ್ದೆಷ್ಟು?

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಿನಿಮಾವನ್ನು 'ಕೆಜಿಎಫ್' ಸೈಡಿಗಟ್ಟಿದ ರಾಕಿ ಭಾಯ್ ಖದರೇ ಬದಲಾಯ್ತು. ಯಶ್ ಬಾಲಿವುಡ್ ಸಿನಿಪ್ರಿಯರ ಗಮನ ಸೆಳೆಯೋಕೆ ಶುರು ಮಾಡಿದ್ದರು. 'ಕೆಜಿಎಫ್ 2' ರಿಲೀಸ್ ವೇಳೆ ಇದೇ ಯಶ್ ಸಕ್ಸಸ್‌ಗೆ ಕಾರಣವಾಗಿತ್ತು. ಸಿಕ್ಕಾಪಟ್ಟೆ ನಿರೀಕ್ಷೆಗಳನ್ನಿಟ್ಟುಕೊಂಡು ಬಿಡುಗಡೆಯಾದ ಸಿನಿಮಾ ಮೊದಲ ದಿನವೇ 53.95 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದೂವರೆಗೂ ಇದ್ದ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡಿತ್ತು.ಈಗ ಇದೇ ದಾಖಲೆಯನ್ನು ನಾಳೆ(ಜನವರಿ25) 'ಪಠಾಣ್' ಮುರಿಯುತ್ತೆ ಅಂತ ಲೆಕ್ಕ ಹಾಕಲಾಗುತ್ತಿದೆ.

'ಪಠಾಣ್' ಫಸ್ಟ್ ಡೇ ಕಲೆಕ್ಷನ್ ಲೆಕ್ಕಚಾರವೇನು?

'ಪಠಾಣ್' ಫಸ್ಟ್ ಡೇ ಕಲೆಕ್ಷನ್ ಲೆಕ್ಕಚಾರವೇನು?

ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಕ್ರೇಜ್ ಜೋರಾಗಿದೆ. ಅಡ್ವಾನ್ಸ್ ಬುಕಿಂಗ್‌ನಿಂದಲೇ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆ ಒಂದು ದಿನ ಬಾಕಿ ಇರುವಾಗಲೇ ಸುಮಾರು 4.19 ಲಕ್ಷ ಟಿಕೆಟ್‌ಗಳು ಅಡ್ವಾನ್ಸ್ ಬುಕಿಂಗ್ ಆಗಿದ್ದವು. ಅದೇ 'ಕೆಜಿಎಫ್ 2' 5.15 ಲಕ್ಷ ಟಿಕೆಟ್ ಸೇಲ್ ಆಗಿದ್ದವು. ಈ ಅಂದಾಜಿನ ಪ್ರಕಾರ, 'ಕೆಜಿಎಫ್ 2' ಮೊದಲ ದಿನದ ದಾಖಲೆಯನ್ನು ಮುರಿಯೋದು ಅಸಾಧ್ಯ ಆಗಿದ್ದರೂ, ಫಸ್ಟ್ ಡೇ 50 ಕೋಟಿ ರೂ. ಆಸುಪಾಸಿನಲ್ಲಿ ಕಲೆಹಾಕುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಮೊದಲ ಹೆಚ್ಚು ಗಳಿಸಿದ ಸಿನಿಮಾಗಳ ಪಟ್ಟಿ

ಮೊದಲ ಹೆಚ್ಚು ಗಳಿಸಿದ ಸಿನಿಮಾಗಳ ಪಟ್ಟಿ

ಪ್ರತಿ ಸಿನಿಮಾದ ಬಹುಪಾಲು ಯಶಸ್ಸು ಮೊದಲ ದಿನದ ಕಲೆಕ್ಷನ್ ಮೇಲೆ ನಿರ್ಧಾರವಾಗಿರುತ್ತೆ. ಅದರಂತೆ ಫಸ್ಟ್ ಡೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಪಟ್ಟಿ ಹೀಗಿದೆ.

'ಕೆಜಿಎಫ್ 2' 53.94 ಕೋಟಿ ರೂ.
'ವಾರ್' 51.60 ಕೋಟಿ ರೂ.
'ಥಗ್ಸ್ ಆಫ್ ಹಿಂದೂಸ್ತಾನ್' 50.75 ಕೋಟಿ ರೂ.
'ಹ್ಯಾಪಿ ನ್ಯೂ ಇಯರ್' 44.97 ಕೋಟಿ ರೂ.
'ಭಾರತ್' 42.30 ಕೋಟಿ ರೂ.

100 ದೇಶಗಳಲ್ಲಿ 'ಪಠಾಣ್' ರಿಲೀಸ್

100 ದೇಶಗಳಲ್ಲಿ 'ಪಠಾಣ್' ರಿಲೀಸ್

'ಪಠಾಣ್' ಸಿನಿಮಾದ ಟಾರ್ಗೆಟ್ ದೊಡ್ಡದಿದೆ. ಭಾರತದ ಅಷ್ಟೇ ಅಲ್ಲ. ಸುಮಾರು 100ಕ್ಕೂ ಅಧಿಕ ದೇಶಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತೆ. ಜೊತೆಗೆ ವಿದೇಶದಲ್ಲಿಯೇ ಸುಮಾರು 2500 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಒಟ್ಟು ವಿಶ್ವದಾದ್ಯಂತ ಸುಮಾರು 3500 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮೊದಲ ದಿನವೇ ದಾಖಲೆ ಬರೆಯಲು ಪಣ ತೊಟ್ಟು ನಿಂತಿದೆ.

More from Filmibeat

English summary
Shah Rukh Khan Movie Pathaan Day 1 Vs KGF 2 Day 1 Box Office Prediction, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X