'ಪಠಾಣ್', 'ಜವಾನ್','ಡಂಕಿ' ವೀಕ್ಷಿಸಲು ಬಂದಿದ್ದು 8 ಕೋಟಿ ಮಂದಿ; ಒಂದೊಂದು ಸಿನಿಮಾಗೆ ಎಷ್ಟೆಷ್ಟು ಪ್ರೇಕ್ಷಕರು?
2023 ಆರಂಭದಿಂದಲೇ ಶಾರುಖ್ ಖಾನ್ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದಕ್ಕೆ ಶುರು ಮಾಡಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ ಖಾನ್ ಮೂರು ವರ್ಷ ನಟನೆಗೆ ಬ್ರೇಕ್ ಕೊಟ್ಟಿದ್ದರು. ಕೆಲವು ಮಂದಿ ಶಾರುಖ್ ಖಾನ್ ಕತೆ ಅಲ್ಲಿಗೆ ಮುಗೀತು ಅಂತಲೇ ಎಷ್ಟೋ ಮಂದಿ ಟೀಕೆ ಮಾಡಿದ್ದೂ ಇದೆ.
ಆದರೆ, ಶಾರುಖ್ ಖಾನ್ ಕಮ್‌ಬ್ಯಾಕ್ ಸಿಕ್ಕಾಪಟ್ಟೆ ಸಕ್ಸಸ್‌ಫುಲ್ ಆಗಿತ್ತು. ಶಾರುಖ್ ಮತ್ತೆ ಬಾಲಿವುಡ್ ಕಿಂಗ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. 2023ರಲ್ಲಿ ಶಾರುಖ್ ಖಾನ್ ಬಾಕ್ಸಾಫೀಸ್ ಕಿಂಗ್ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಕಿಂಗ್ ಖಾನ್ ನಟಿಸಿದ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಸೋಲಿನಿಂದ ಕಂಗೆಟ್ಟು 'ಜೀರೋ' ಆಗಿದ್ದ ಶಾರುಖ್ ಖಾನ್ ಕಮ್‌ಬ್ಯಾಕ್ ಮಾಡಿದ ವರ್ಷವೇ ಹ್ಯಾಟ್ರಿಕ್ ಸಕ್ಸಸ್ ಕೊಟ್ಟಿದ್ದಾರೆ. 2023 ವರ್ಷದ ಆರಂಭದಲ್ಲಿ ತೆರೆಕಂಡ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಲೂಟಿ ಮಾಡಿತ್ತು. ಹಾಗೇ 'ಜವಾನ್' ಕೂಡ ಸಾವಿರ ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿತ್ತು. ಇನ್ನು 2023 ಕೊನೆಯಲ್ಲಿ ತೆರೆಕಂಡ 'ಡಂಕಿ' ಕೂಡ ಬಾಕ್ಸಾಫೀಸ್ ಸಕ್ಸಸ್ ಕಂಡಿದೆ.
ಹಾಗಂತ ಶಾರುಖ್ ಖಾನ್ ಈ ಮೂರು ಸಿನಿಮಾಗಳಿಂದ ಕೇವಲ ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನಷ್ಟೇ ಮಾಡಿಲ್ಲ. ಈ ಮೂರು ಸಿನಿಮಾಗಳ ವೀಕ್ಷಣೆಯಲ್ಲೂ ರೆಕಾರ್ಟ್ ಮಾಡಿದ್ದಾರೆ. ಕೋವಿಡ್ ಬಳಿಕ ಮಾಸ್ ಲೆಕ್ಕದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರಲು ಬಾಲಿವುಡ್ ಮಂದಿ ಒದ್ದಾಡುತ್ತಿದ್ದರು. ಕೊನೆಗೂ ಶಾರುಖ್ ಖಾನ್ ಸಿನಿಮಾಗಳು ಜನರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

'ಪಠಾಣ್', 'ಜವಾನ್','ಡಂಕಿ' ಈ ಮೂರು ಸಿನಿಮಾಗಳಿಂದ ಒಟ್ಟು 8 ಕೋಟಿ ಮಂದಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆಂಬ ಲೆಕ್ಕ ಸಿಕ್ಕಿದೆ. ಈ 8 ಕೋಟಿ ವೀಕ್ಷಕರಲ್ಲಿ 'ಜವಾನ್' 3.93 ಕೋಟಿ ಮಂದಿ, 'ಪಠಾಣ್' 3.20 ಕೋಟಿ ಹಾಗೂ 'ಡಂಕಿ' ಸಿನಿಮಾವನ್ನು ಸುಮಾರು 1 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಇಂತಹದ್ದೊಂದು ಸಾಧನೆ ಮಾಡಿದ ಮೊದಲ ನಟ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.
2023ರಲ್ ಶಾರುಖ್ ಖಾನ್ ನಟಿಸಿದ 'ಜವಾನ್' ಹಾಗೂ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದು ಗೊತ್ತೇ ಇದೆ. ಈ ಎರಡು ಸಿನಿಮಾಗಳ ಬಳಿಕ 'ಡಂಕಿ' ಕೂಡ ಸೇರಿಕೊಂಡಿದೆ. 'ಪಠಾಣ್' ಹಿಂದಿ ಬೆಲ್ಟ್‌ನಲ್ಲಿಯೇ 524 ಕೋಟಿ ರೂಪಾಯಿ ಗಳಿಸಿದ್ರೆ, ಭಾರತಾದ್ಯಂತ 545 ಕೋಟಿ ರೂಪಾಯಿ ಲೂಟಿ ಮಾಡಿತ್ತು. ಅದೇ ವಿಶ್ವದಾದ್ಯಂತ 'ಪಠಾಣ್' ಸುಮಾರು 1055 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಬಳಿಕ ಜೂನ್‌ನಲ್ಲಿ ತೆರೆಕಂಡ 'ಜವಾನ್' ಹಿಂದಿ ಏರಿಯಾಗಳಲ್ಲಿ 643 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ವಿಶ್ವಾದ್ಯಂತ 580 ಕೋಟಿ ರೂಪಾಯಿ ಲೂಟಿ ಮಾಡಿತ್ತು. ಇನ್ನು 2023 ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆದ 'ಡಂಕಿ' ಕೇವಲ 13 ದಿನದಲ್ಲಿ ವಿಶ್ವದಾದ್ಯಂತ 447.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಮತ್ತೆ ಟ್ರ್ಯಾಕ್ ಮರಳಿರೋ ಶಾರುಖ್ ಖಾನ್ ಇತ್ತೀಚೆಗೆ ಎಕ್ಸ್‌ನಲ್ಲಿ (ಟ್ವಿಟರ್) ಅಭಿಮಾನಿಗಳೊಂದಿಗೆ ಸಂವಾದ ಮಾಡಿದ್ದರು. ಈ ವೇಳೆ ಅಭಿಮಾನಿಯೊಬ್ಬ 2023ರ ಬೆಸ್ಟ್ ಪಾರ್ಟ್ ಯಾವುದು? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಶಾರುಖ್ ಖಾನ್ "ಕೇವಲ ಪಾರ್ಟ್ ಅಲ್ಲ.. ಇಡೀ 2023 ಅತ್ಯುತ್ತಮ" ಎಂದು ಪ್ರತಿಕ್ರಿಯೆ ನೀಡಿದ್ದರು.


Click it and Unblock the Notifications











