ಲೀಕ್ ಆಗಿದ್ದ ಟೈಟಲ್ ಫೈನಲ್ ಆಯ್ತು: ಶಾರುಖ್, ಆಟ್ಲಿ ಸಿನಿಮಾ ಟೈಟಲ್ ಏನು?

ಬಾಲಿವುಡ್‌ ಕಿಂಗ್ ಖಾನ್ ಶಾರುಖ್ ಮತ್ತೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲುಂಡ ಬಳಿಕ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮತ್ತೆ ಶಾರುಖ್ ಖಾನ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದ್ರಲ್ಲೊಂದು ತಮಿಳಿನ ಆಟ್ಲಿ ನಿರ್ದೇಶನದ ಸಿನಿಮಾ.

ಆಟ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್‌ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ದಳಪತಿ ವಿಜಯ್ ಅಭಿನಯಿಸಿದ್ದ 'ಬಿಗಿಲ್' ಸಿನಿಮಾವನ್ನು ಆಟ್ಲಿ ಕೊನೆಯದಾಗಿ ನಿರ್ದೇಶಿಸಿದ್ದರು. ಇದು ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆ ಮಾಡಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ ಶಾರುಖ್ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದರು. ಸದ್ಯ ಆಟ್ಲಿ ಸಿನಿಮಾದ ಚಿತ್ರೀಕರಣದಲ್ಲಿ ಶಾರುಖ್ ಖಾನ್ ಭಾಗಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಶಾರುಖ್ ಖಾನ್ ಹಾಗೂ ಆಟ್ಲಿ ಸಿನಿಮಾ ಟೈಟಲ್ ಬಗ್ಗೆ ಸುದ್ದಿಯಾಗುತ್ತಲೇ ಇತ್ತು. ಕೊನೆಗೂ ಅದೇ ಟೈಟಲ್ ಅನ್ನೇ ಇಡಲು ಸಿನಿಮಾ ತಂಡ ನಿರ್ಧಾರ ಮಾಡಿದೆ. ಹಾಗಿದ್ದರೆ, ಶಾರುಖ್-ಆಟ್ಲಿ ಸಿನಿಮಾದ ಟೈಟಲ್ ಏನು? ಸಿನಿಮಾ ಟೀಸರ್ ಯಾವಾಗ ರಿಲೀಸ್ ಆಗುತ್ತೆ? ಈ ಮಾಹಿತಿಗಾಗಿ ಮುಂದೆ ಓದಿ.

 ಶಾರುಖ್-ಆಟ್ಲಿ ಸಿನಿಮಾ ಟೈಟಲ್ 'ಜವಾನ್'!

ಶಾರುಖ್-ಆಟ್ಲಿ ಸಿನಿಮಾ ಟೈಟಲ್ 'ಜವಾನ್'!

ಕಳೆದ ವರ್ಷದಿಂದ ಶಾರುಖ್ ಖಾನ್, ನಯನತಾರಾ ಹಾಗೂ ಆಟ್ಲಿ ಕಾಂಬಿನೇಷನ್ ಸಿನಿಮಾದ ಟೈಟಲ್ ಬಗ್ಗೆನೇ ಚರ್ಚೆಯಾಗುತ್ತಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿಯೇ ಈ ಸಿನಿಮಾ ಟೈಟಲ್ 'ಜವಾನ್' ಎಂದು ಹೇಳಲಾಗಿತ್ತು. ಅದೇ ಟೈಟಲ್ ಅನ್ನೇ ಈಗ ಸಿನಿಮಾ ತಂಡ ಫಿಕ್ಸ್ ಮಾಡಿಕೊಂಡಿದೆ. ಕಳೆದೊಂದು ದಿನದಿಂದ ಈ ಟೈಟಲ್ ಬಗ್ಗೆನೇ ಎಲ್ಲಾ ಕಡೆ ಟಾಕ್ ಆಗುತ್ತಿದೆ. ಅಂದ್ಹಾಗೆ ಅತೀ ಶೀಘ್ರದಲ್ಲಿ 'ಜವಾನ್' ಟೈಟಲ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

 ಟೀಸರ್ ಮೂಲಕವೇ ಟೈಟಲ್ ಘೋಷಣೆ

ಟೀಸರ್ ಮೂಲಕವೇ ಟೈಟಲ್ ಘೋಷಣೆ

ಶಾರುಖ್ ಖಾನ್, ನಯನತಾರಾ ಹಾಗೂ ಆಟ್ಲಿ ಈ ಮೂವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾದ ಟೈಟಲ್ ಅನೌನ್ಸ್ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ. ಬಾಲಿವುಡ್ ಮೂಲಗಳ ಪ್ರಕಾರ, 'ಜವಾನ್' ಟೈಟಲ್ ಅನ್ನು ಟೀಸರ್ ರಿಲೀಸ್ ಮಾಡುವ ಮೂಲಕ ಅನೌನ್ಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಇನ್ನು ಕೆಲವೇ ದಿನಗಳಲ್ಲಿ 1 ನಿಮಿಷ 34 ಸೆಕೆಂಡುಗಳಿರುವ 'ಜವಾನ್' ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಿದೆ.

 ಜವಾನ್‌ ಸಿನಿಮಾ ಡಬಲ್ ರೋಲ್

ಜವಾನ್‌ ಸಿನಿಮಾ ಡಬಲ್ ರೋಲ್

'ಜವಾನ್' ಸಿನಿಮಾದಲ್ಲಿ ಶಾರುಖ್ ಖಾನ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಒಂದೇ ಸಿನಿಮಾದಲ್ಲಿ ಶಾರುಖ್ ತಂದೆ ಹಾಗೂ ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಗ ಗ್ಯಾಂಗಸ್ಟರ್ ಆಗಿದ್ದರೆ, ತಂದೆ ಪಾತ್ರ ಸೀನಿಯರ್ ರಾ (RAW) ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 1996ನಲ್ಲಿ ಕಮಲ್ ಹಾಸನ್ ನಟಿಸಿದ 'ಹಿಂದುಸ್ತಾನಿ' ಸಿನಿಮಾ ಶೈಲಿಯಲ್ಲಿಯೇ ಸಿನಿಮಾವಿರುತ್ತೆ ಎನ್ನುತ್ತಿದೆ ಬಾಲಿವುಡ್. ಇದೇ ಸಿನಿಮಾದಲ್ಲಿ ನಯನತಾರಾ ತನಿಖಾಧಿಕಾರಿಯಾಗಿ ನಟಿಸುತ್ತಿದ್ದಾರೆ.

 ತೆರೆಮೇಲೆ ಶಾರುಖ್ ನೋಡಲು ಕಾತುರ

ತೆರೆಮೇಲೆ ಶಾರುಖ್ ನೋಡಲು ಕಾತುರ

ನಾಲ್ಕು ವರ್ಷಗಳಿಂದ ಶಾರುಖ್ ಖಾನ್ ಅಭಿನಯದ ಒಂದೇ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಈ ಕಾರಣಕ್ಕೆ ಕಿಂಗ್ ಖಾನ್ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ. ಸದ್ಯ ಶಾರುಖ್ 'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಳಿಕ ಆಟ್ಲಿ ಸಿನಿಮಾ 'ಜವಾನ್' ರಿಲೀಸ್ ಆಗಲಿದ್ದು, ಆ ಬಳಿಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸೆಟ್ಟೇರಲಿದೆ.

More from Filmibeat

English summary
Shah Rukh Khan, Nayanthara and Atlee Movie Title Finalized as Jawan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X