Jawan-Karnataka: ಕರ್ನಾಟಕದಲ್ಲಿ ರಜನಿ 'ಜೈಲರ್' ಗಳಿಸಿದ್ದು ₹36 ಕೋಟಿ.. 'ಜವಾನ್' ದೋಚಿದ್ದೆಷ್ಟು ಗೊತ್ತಾ?

₹18.5 ಕೋಟಿ ₹25 ಕೋಟಿಕೆಲವು ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರೋಕ್ಷವಾಗಿ 'ಜೈಲರ್' ಸಿನಿಮಾ ಬಗ್ಗೆ ಗುಡುಗಿದ್ದರು. "ತಮಿಳು ಸಿನಿಮಾವೊಂದು 36 ಕೋಟಿ ರೂಪಾಯಿ ಕೇವಲ ಕರ್ನಾಟಕದಲ್ಲಿ ಲಾಭ ಮಾಡಿತು" ಎಂದು ರೈತ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು.

ಕಾವೇರಿ ಹೋರಾಟ ತ್ರೀವಗೊಂಡ ಬೆನ್ನಲ್ಲೇ ದರ್ಶನ್ ನೀಡಿದ ಈ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಕನ್ನಡ ಸಿನಿಮಾಗಳೇ ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡುತ್ತಿಲ್ಲ. ಹೀಗಿರುವಾಗ ಪರಭಾಷೆಯ ಸಿನಿಮಾವೊಂದು 30 ಕೋಟಿ ರೂಪಾಯಿ ಲಾಭ ಮಾಡಿದ್ದು ಗಮನ ಸೆಳೆದಿದೆ.

Shah Rukh Khan Nayanthara Jawan movie crossed 50 Crores in Karnataka here is top 10 list

ರಜನಿಕಾಂತ್ 'ಜೈಲರ್' ಸಿನಿಮಾವೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅಂದುಕೊಂಡರೆ ಅದು ತಪ್ಪು. ಈ ಸಿನಿಮಾವನ್ನು ಮೀರಿಸಿ ಕರ್ನಾಟಕ ಬಾಕ್ಸಾಫೀಸ್‌ ಅನ್ನು ದೋಚಿದ್ದು ಶಾರುಖ್ ಖಾನ್, ನಯನತಾರಾ ಸಿನಿಮಾ 'ಜವಾನ್'. ಕರ್ನಾಟಕದಲ್ಲಿ 'ಜವಾನ್' ದೋಚಿದ ಒಟ್ಟು ಮೊತ್ತ ಎಷ್ಟು ಹೊತ್ತಾ?

ಕರ್ನಾಟಕದಲ್ಲಿ ಬಾಕ್ಸಾಫೀಸ್ ಲೂಟಿ

ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದೇನೋ ನಿಜ. ಕಳೆದ ವರ್ಷ ವಿಶ್ವದಾದ್ಯಂತ ಕನ್ನಡ ನಾಲ್ಕು ಸಿನಿಮಾ ಸದ್ದು ಮಾಡಿದ್ದವು. 'ಕೆಜಿಎಫ್ 2', 'ಕಾಂತಾರ', '777 ಚಾರ್ಲಿ' ಹಾಗೂ 'ವಿಕ್ರಾಂತ್ ರೋಣ'. ಈ ಸಿನಿಮಾ ಕೋಟಿ ಕೋಟಿ ಲೂಟಿ ಮಾಡಿದ್ದು ಇದೆ. ಆದರೆ, ಅವರದ್ದೇ ಭಾಷೆಯಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ, ಕನ್ನಡ ಯಾವುದೇ ಸಿನಿಮಾ ಬೇರೆ ರಾಜ್ಯದಲ್ಲಿ ಕನ್ನಡದಲ್ಲಿಯೇ ರಿಲೀಸ್ ಆಗಿ ದೊಡ್ಡ ಸದ್ದು ಮಾಡಿಲ್ಲ. ಆದರೆ, ಕರ್ನಾಟಕದಲ್ಲಿ ಸ್ಥಿತಿ ಬೇರೆನೇ ಇದೆ. ಇದಕ್ಕೆ 'ಜೈಲರ್' ಹಾಗೂ 'ಜವಾನ್' ಈ ಎರಡು ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಸಾಕ್ಷಿ.

'ಜವಾನ್' ದೋಚಿದ್ದು ಎಷ್ಟು?

ಶಾರುಖ್ ಖಾನ್ ಸಿನಿಮಾ 'ಜವಾನ್' ವಿಶ್ವದಾದ್ಯಂತ ಸುಮಾರು 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದರಲ್ಲಿ ಕರ್ನಾಟಕ ಪಾಲೇನು ಕಮ್ಮಿಯಿಲ್ಲ. ಇದೇ ತಿಂಗಳು ರಿಲೀಸ್ ಆಗಿದ್ದ 'ಜವಾನ್'ಗೆ ಕರ್ನಾಟಕದಲ್ಲೂ ಉತ್ತರ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದ ವಿತರಕರ ಪ್ರಕಾರ, 'ಜವಾನ್' ಕೇವಲ ಕರ್ನಾಟಕದಲ್ಲಿ 51.5 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಅಂಕಿ ಅಂಶಗಳು ಕನ್ನಡ ಸಿನಿಮಾ ಮಂದಿಯ ನಿದ್ದೆ ಕದ್ದಿದೆ.

Shah Rukh Khan Nayanthara Jawan movie crossed 50 Crores in Karnataka here is top 10 list

₹50 ಕೋಟಿ ಗಳಿಸಿ ಮೊದಲ ಸಿನಿಮಾ

ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತವೆ ಅನ್ನೋದು ರಹಸ್ಯವೇನೂ ಅಲ್ಲ. ಆದರೆ, ಅದೆಷ್ಟೇ ದೊಡ್ಡ ಸಿನಿಮಾ ಬಂದಿದ್ದರೂ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಉದಾಹರಣೆಗಳಿರಲಿಲ್ಲ. 'ಜವಾನ್' ಮೊದಲನೇ ಸಿನಿಮಾ ಎನಿಸಿಕೊಂಡಿದೆ. ಆದರೆ, ವಿಪರ್ಯಾಸ ಅಂದರೆ, ಕನ್ನಡದ ಒಳ್ಳೊಳ್ಳೆ ಸಿನಿಮಾಗಳೇ ಈ ಮಟ್ಟಿಗೆ ಕಲೆಕ್ಷನ್ ಮಾಡುತ್ತಿಲ್ಲ.

ಕರ್ನಾಟಕದಲ್ಲಿ ಗಳಿಸಿದ ಟಾಪ್ 10 ಹಿಂದಿ ಸಿನಿಮಾ

ಶಾರುಖ್ ಖಾನ್ ಹಾಗೂ ಅಟ್ಲೀ ಕಾಂಬಿನೇಷನ್ ಸಿನಿಮಾ 'ಜವಾನ್' ಎಲ್ಲೆಡೆ ಜೋರಾಗಿಯೇ ಅಬ್ಬರಿಸಿದೆ. ಹಾಗಂತ 'ಜವಾನ್' ಅಷ್ಟೇ ಅಲ್ಲ, ಈ ಹಿಂದೆ ರಿಲೀಸ್ ಆಗಿದ್ದ ಬೇರೆ ಹಿಂದಿ ಸಿನಿಮಾಗಳು ಕರ್ನಾಟಕದ ಬಾಕ್ಸಾಫೀಸ್‌ ಅನ್ನು ಕೊಳ್ಳೆ ಹೊಡೆದಿವೆ.

ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿದ ಹಿಂದಿ ಚಿತ್ರ

1 ಜವಾನ್ ₹51.1 ಕೋಟಿ
2 ಪಠಾಣ್ ₹45 ಕೋಟಿ
3 ದಂಗಲ್ ₹34 ಕೋಟಿ
4 ಪದ್ಮಾವತ್ ₹29 ಕೋಟಿ
5 ಪಿಕೆ ₹27 ಕೋಟಿ
6 ಸಂಜು ₹25 ಕೋಟಿ
7 ಟೈಗರ್ ಜಿಂದಾ ಹೇ ₹20 ಕೋಟಿ
8 ಉರಿ ₹19 ಕೋಟಿ
9 ಧೂಮ್ 3 ₹18.5 ಕೋಟಿ
10 ಭಜರಂಗಿ ಭಾಯಿಜಾನ್ ₹18 ಕೋಟಿ

More from Filmibeat

English summary
Shah Rukh Khan Nayanthara Movie Jawan crosses 50 crore in Karnataka:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X