Jawan Box Office Day 1: ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಧೂಳೀಪಟ.. ಮೊದಲ ದಿನ 'ಜವಾನ್' ಭರ್ಜರಿ ಭೇಟೆ
ದಾಖಲೆಗಳು ಹುಟ್ಟಿಕೊಳ್ಳುವುದೇ ಮುರಿಯುವುದಕ್ಕೆ. ಮೊದಲ ದಿನದ ಅಬ್ಬರ ನೋಡಿದರೆ ಶಾರುಖ್ ಖಾನ್ ಹಳೆಯ ದಾಖಲೆಗಳನ್ನೆಲ್ಲ ಮುರಿಯೋದು ಕನ್ಫರ್ಮ್ ಎನಿಸುತ್ತಿದೆ. ನಿನ್ನೆ (ಸೆಪ್ಟೆಂಬರ್ 7) ತಾನೇ ಅದ್ಧೂರಿಯಾಗಿ ಬಿಡುಗಡೆಯಾಗಿರುವ 'ಜವಾನ್' ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆ ಮಾಡಿದೆ ಎನ್ನಲಾಗಿದೆ.
ಶಾರುಖ್ ಖಾನ್ ಡಬಲ್ ರೋಲ್‌ನಲ್ಲಿ ಕಂಡಿದ್ದು ಅಭಿಮಾನಿಗಳಿಗೆ ಡಬಲ್ ಧಮಾಕ ಸಿಕ್ಕಂತಾಗಿದೆ. ಇನ್ನು ನಯನತಾರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಸಂಜಯ್ ದತ್ ಅಂತಹ ನಟರ ಸಿನಿಮಾದಲ್ಲಿ ನಟಿಸಿರಬೇಕಾದರೇ, ಪ್ರೇಕ್ಷಕರು ಸುಮ್ಮನೆ ಕೂರುವುದುಂಟೇ..

'ಜವಾನ್' ಸಿನಿಮಾ ವಿಶ್ವದಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಇದರಲ್ಲಿ ವಿದೇಶದಲ್ಲಿಯೇ ಹೆಚ್ಚು ಕಡಿಮೆ 4 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ ಎನ್ನಲಾಗಿದೆ. ಹೀಗಾಗಿ ಮೊದಲ ದಿನ ದಾಖಲೆ ಕಲೆಕ್ಷನ್ ನಿರೀಕ್ಷೆ ಮಾಡಲಾಗಿತ್ತು. ಹಾಗಿದ್ದರೆ, ಮೊದಲ ದಿನ 'ಜವಾನ್' ಸಿನಿಮಾದ ಕಲೆಕ್ಷನ್ ಎಷ್ಟು? 'ಕೆಜಿಎಫ್ 2'. 'RRR', 'ಬಾಹುಬಲಿ', 'ಪಠಾಣ್' ದಾಖಲೆಗಳನ್ನು ಮುರಿಯಿತೇ.. ತಿಳಿಯಲು ಮುಂದೆ ಓದಿ.
ಮೊದಲ ದಿನದ ರೆಸ್ಪಾನ್ಸ್ ಹೇಗಿತ್ತು?
'ಜವಾನ್' ಸಿನಿಮಾ ಮೊದಲ ದಿನ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಿಂದಿ ಬೆಲ್ಟ್‌ಗಳಲ್ಲಿ ಶೇ. 46ರಷ್ಟು ಮಂದಿ ಥ್ರಿಯೇಟರ್‌ಗೆ ಬಂದಿದ್ದರು. ಅದೇ ದೆಹಲಿಯಲ್ಲಿ ಶೇ.42ರಷ್ಟು ಆಕ್ಯೂಪೆನ್ಸಿ, ಕೊಲ್ಕತ್ತಾದಲ್ಲಿ ಶೇ.66, ಹೈದರಾಬಾದ್‌ನಲ್ಲಿ ಶೇ.62ರಷ್ಟು ಆಕ್ಯೂಪೆನ್ಸಿ ಇತ್ತು ಎಂದು ಸಿನಿಮಾಗಳ ಬಾಕ್ಸಾಫೀಸ್ ಟ್ರ್ಯಾಕ್ ಮಾಡುವ Sacnilk ತನ್ನ ವರದಿಯಲ್ಲಿ ತಿಳಿಸಿದೆ. ಇದರ ಪ್ರಕಾರವೇ ಸಿನಿಮಾ ಕಲೆಕ್ಷನ್ ದಾಖಲೆ ಬರೆಯುವ ಸಾಧ್ಯತೆಯಿದೆ.
ಭಾರತದಲ್ಲಿ ಸಿನಿಮಾ ಕಲೆಕ್ಷನ್ ಎಷ್ಟು?
'ಜವಾನ್' ಸಿನಿಮಾ ಮೊದಲ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಮೊದಲ ದಿನ ಕೇವಲ ಭಾರತದಲ್ಲಿ ಮೂರು ಭಾಷೆಗಳಿಂದ (ಹಿಂದಿ, ತಮಿಳು ಹಾಗೂ ತೆಲುಗು) ಸುಮಾರು 73 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ. ಅದೇ ಒಟ್ಟು (Gross) ಗಳಿಕೆ 84 ಕೋಟಿ ರೂಪಾಯಿ ದಾಟಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಹಿಂದಿ ಅವತರಣಿಕೆಯಿಂದಲೇ 77 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಅಂದಾಜಿಸಿದ್ದಾರೆ.

ತಮಿಳು, ತೆಲುಗು ಭಾಷೆಯಲ್ಲಿ ಎಷ್ಟು?
'ಜವಾನ್' ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಯಿಂದಲೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳಿನಿಂದ 4.75 ಕೋಟಿ ರೂಪಾಯಿ ಹಾಗೂ ತೆಲುಗಿನಿಂದ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿ ಮಾಡಲಾಗಿದೆ. ಈ ಮೂಲಕ ಹಿಂದಿ ನಟನ ಸಿನಿಮಾಗೆ ಮೊದಲ ದಿನವೇ ಅತಿ ದೊಡ್ಡ ಓಪನಿಂಗ್ ಸಿಕ್ಕ ಸಿನಿಮಾ ಇದಾಗಿದೆ. ಇದರ ಕ್ರೆಡಿಟ್ ನಯನತಾರಾ, ವಿಜಯ್ ಸೇತುಪತಿ ಹಾಗೂ ನಿರ್ದೇಶಕ ಅಟ್ಲೀಗೆ ಸಲ್ಲಲಿದೆ.
'ಕೆಜಿಎಫ್ 2', 'RRR' ದಾಖಲೆ ಕಥೆಯೇನು?
'ಜವಾನ್' ವಿಶ್ವದಾದ್ಯಂತ ಸುಮಾರು 120 ರಿಂದ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದು ಎಂದು ಲೆಕ್ಕ ಹಾಕಲಾಗಿದೆ. ಆದರೆ, ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಬೇಕಿದೆ. ಈ ಮಧ್ಯೆ 'ಕೆಜಿಎಫ್ 2', 'RRR' ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕೆ ಹಾಕುತ್ತಾ ಅಂತ ಎದುರು ನೋಡುತ್ತಿದ್ದಾರೆ. 'ಕೆಜಿಎಫ್ 2' ಮೊದಲ ದಿನ ವಿಶ್ವದಾದ್ಯಂತ 134.5 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ರಾಜಮೌಳಿಯ RRR 158.6 ಕೋಟಿ ರೂ. ಕಲೆಕ್ಷನ್ ಮಾಡಿತ್ತು.


Click it and Unblock the Notifications











