Jawan 1000Cr: ಜಸ್ಟ್ 15 ದಿನ.. ಬಾಕ್ಸಾಫೀಸ್ ದೋಚಿದ 'ಜವಾನ್'.. ₹1000 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?

'ಪಠಾಣ್' ಬಳಿಕ ಶಾರುಖ್ ಖಾನ್ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ ಅನ್ನೇ ಲೂಟಿ ಮಾಡಿದೆ. ದಕ್ಷಿಣ ಸ್ಟಾರ್ ನಿರ್ದೇಶಕ ಅಟ್ಲೀ ಜೊತೆ ಕೈ ಜೋಡಿಸಿದ್ದ ಕಿಂಗ್ ಖಾನ್‌ಗೆ ಮತ್ತೊಂದು ಮೆಗಾ ಸಕ್ಸಸ್ ಸಿಕ್ಕಿದೆ. 'ಜವಾನ್' ಈ ವರ್ಷ ಮೆಗಾ ಹಿಟ್ ಅಂತ ಬಾಕ್ಸಾಫೀಸ್‌ನಲ್ಲಿ ಸಾಬೀತಾಗಿದೆ.

ಸತತ ಸೋಲುಗಳ ಬಳಿಕ ಕಿಂಗ್ ಖಾನ್ ಕಮ್‌ಬ್ಯಾಕ್ ಮಾಡಿದ್ದರು. ಪಕ್ಕಾ ಆಕ್ಷನ್ ಮೂಡಿನಲ್ಲಿ 'ಪಠಾಣ್' ಅವತಾರವೆತ್ತಿ ಬಂದಿದ್ದ ಶಾರುಖ್‌ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದರು. ಈಗ ಅದೇ ಹಾದಿಯಲ್ಲಿ 'ಜವಾನ್' ಸಿನಿಮಾ ಕೂಡ ಸಾಗುತ್ತಿದೆ.

ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಹಣ ಹೂಡಿಕೆ ಮಾಡಿತ್ತು. ಕಳೆದ 15 ದಿನಗಳಲ್ಲಿ 'ಜವಾನ್' ದೋಚಿದ್ದೆಷ್ಟು ಅನ್ನೋದನ್ನು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ರಿಲೀಸ್ ಮಾಡಿದೆ.

shah-rukh-khan-jawan-box-office

15ನೇ ದಿನ 'ಜವಾನ್' ಕಲೆಕ್ಷನ್ ಎಷ್ಟು?

ಶಾರುಖ್ ಬಿಟ್ಟು 'ಜವಾನ್' ಸಿನಿಮಾದಲ್ಲಿ ದಿಗ್ಗಜರ ದೊಡ್ಡ ತಂಡವೇ ಇದೆ. ನಯನತಾರಾ ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಖಳನಾಯಕನಾಗಿ ವಿಜಯ್ ಸೇತುಪತಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದೀಪಿಕಾ ಪಡುಕೋಣೆ ಹಾಗೂ ಸಂಜಯ್ ದತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಹೀಗಾಗಿ ರಿಲೀಸ್ ಆದ ದಿನದಿಂದ ಬಾಕ್ಸಾಫೀಸ್‌ನಲ್ಲಿ ಕಟ್ಟಿಯಾಗಿ ಅಂಟಿಕೊಂಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 15ನೇ ದಿನ ಸಿನಿಮಾದ ಕಲೆಕ್ಷನ್ ಸುಮಾರು 8.1 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

15 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಕಿಂಗ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಸಂಸ್ಥೆ ಭರ್ಜರಿ ಲಾಭ ಮಾಡಿದೆ. ಇದೂವರೆಗೂ 'ಜವಾನ್' ಸಿನಿಮಾ ವಿಶ್ವದಾದ್ಯಂತ ಸುಮಾರು 937.61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಲೆಕ್ಕವನ್ನು ರೆಡ್ ಚಿಲ್ಲೀಸ್ ಸಂಸ್ಥೆ ಅಧಿಕೃತವಾಗಿಯೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಈ ಅಂಕಿ ಅಂಶಗಳ ಪ್ರಕಾರ ಇನ್ನೊಂದು ವಾರದಲ್ಲಿ 'ಜವಾನ್' 1000 ಕೋಟಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆಗಳೂ ಇವೆ.

shah-rukh-khan-jawan-box-office

1000 ಕೋಟಿ ಕ್ಲಬ್ ಲೆಕ್ಕಾಚಾರವೇನು?

'ಜವಾನ್' ಸಿನಿಮಾ ವಿಶ್ವದಾದ್ಯಂತ 4500 ಸಾವಿರಕ್ಕೂ ಅಧಿಕ ಸ್ಕ್ರೀನ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಹಿಂದಿ, ತೆಲುಗು ಹಾಗೂ ತಮಿಳು ಮೂರು ಭಾಷೆಯಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ತೆಲುಗಿನಲ್ಲಿ ಅಂತ ದೊಡ್ಡ ಮೊತ್ತವನ್ನೇನು ಕಲೆ ಹಾಕಿಲ್ಲ. ಆದರೆ, ತಮಿಳಿನಲ್ಲಿ ಸಮಾಧಾನ ಪಡುವಂತಹ ಕಲೆಕ್ಷನ್ ಮಾಡಿದೆ. ಆದರೆ, ಹಿಂದಿ ಬೆಲ್ಟ್‌ನಲ್ಲಿ 'ಜವಾನ್' ಬಂಪರ್ ಬೆಳೆ ಬೆಳೆದಿದೆ. ಹೀಗೆ ಮುಂದುವರೆದರೆ ಮುಂದಿನ ವಾರದ ಹೊತ್ತಿಗೆ 1000 ಕೋಟಿ ರೂಪಾಯಿ ಕ್ಲಬ್ ಸೇರಿಕೊಳ್ಳಲಿದೆ.

ಭಾರತದ ಕಲೆಕ್ಷನ್ ಎಷ್ಟು?

ಶಾರುಖ್ ಖಾನ್‌ಗೆ ವಿದೇಶದಲ್ಲಿಯೂ ಅಭಿಮಾನಿಗಳಿದ್ದಾರೆ. ಅಮೆರಿಕ, ಯುಕೆ, ದುಬೈ ಇಂತಹ ದೇಶಗಳಿಂದಲೂ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗುತ್ತೆ. ಆದರೆ, ಭಾರತದಲ್ಲಿ ಶಾರುಖ್‌ಗೆ ಕ್ರೇಜ್ ಹೇಗಿದೆ ಅನ್ನೋದು ಮುಖ್ಯ. ಇದೂವರೆಗೂ ಗಳಿಸಿದ 937 ಕೋಟಿ ರೂಪಾಯಿಯಲ್ಲಿ ಹೆಚ್ಚು ಕಡಿಮೆ ಶೇ.60ರಷ್ಟು ಹಣ ಭಾರತದಲ್ಲಿ ಕಲೆ ಹಾಕಿದೆ. ಅಂದ್ರೆ, 525.98 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಒಪ್ಪಿಸಿದ್ದಾರೆ.

More from Filmibeat

English summary
Shah Rukh Khan Nayanthara Jawan Movie may enter 1000 crore Club
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X