Jawan: ರಿಲೀಸ್‌ಗೆ 4 ದಿನ ಇರುವಾಗಲೇ 1.95 ಲಕ್ಷ ಟಿಕೆಟ್ ಸೇಲ್.. 'ಜವಾನ್' ಸ್ಪೀಡ್ ನೋಡಿ ದಂಗಾದ ಬಾಲಿವುಡ್ !
ಶಾರುಖ್ ಖಾನ್ ಮತ್ತು ನಯನತಾರಾ ನಟನೆಯ ಸಿನಿಮಾ 'ಜವಾನ್' ಬಿಡುಗಡೆಗೆ ಇನ್ನೂ 4 ದಿನ ಬಾಕಿ ಇದೆ. ಆದರೆ, ಈ ಸಿನಿಮಾ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡೋಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ತಮಿಳು ನಿರ್ದೇಶಕ ಅಟ್ಲಿ ಮೊಟ್ಟಮೊದಲ ಬಾಲಿವುಡ್ ಸಿನಿಮಾ 'ಜವಾನ್' ಮೊದಲ ದಿನದ ಟಿಕೆಟ್‌ಗಳು ಭಾರೀ ಸ್ಪೀಡ್‌ನಲ್ಲಿ ಸೇಲ್ ಆಗ್ತಿದೆ. ಈಗಾಗಲೇ ರಿಲೀಸ್ ದಿನದ ಒಟ್ಟು 1.95 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಇದೇ ವೇಗದಲ್ಲಿ ಟಿಕೆಟ್ ಬುಕಿಂಗ್ ಮುಂದುವರೆದರೆ 'ಜವಾನ್' ಬಿಡುಗಡೆಗೂ ಮುನ್ನವೇ 'ಪಠಾಣ್' ಚಿತ್ರದ ದಾಖಲೆಗಳನ್ನು ಧೂಳೀಪಟ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್.

ಅಟ್ಲೀ ಕುಮಾರ್ ನಿರ್ದೇಶನದ 'ಜವಾನ್'ನಲ್ಲಿ ಶಾರುಖ್ ಖಾನ್‌ಗೆ ನಯನತಾರಾ ಜೋಡಿ. ಜೊತೆಗೆ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ ಸೇರಿದಂತೆ ಭಾರೀ ದೊಡ್ಡ ತಾರಾಗಣವೇ ಇದೆ. ಅನಿರುದ್ಧ್ ಸಂಗೀತ ಈಗಾಗಲೇ ಸೂಪರ್ ಹಿಟ್ ಆಗಿದ್ದು ಹಾಡುಗಳು ಎಲ್ಲೆಡೆ ಕೇಳಿಬರುತ್ತಿವೆ.
4 ದಿನ ಇರುವಾಗಲೇ ದಾಖಲೆ ಟಿಕೆಟ್ ಮಾರಾಟ
ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಅಡ್ವಾನ್ಸ್ ಬುಕಿಂಗ್ ಆರಂಭ ಮಾಡಲಾಗಿತ್ತು. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆ ಟಿಕೆಟ್ ಮಾರಾಟದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸುತ್ತ ಮುನ್ನುಗ್ಗುತ್ತಿದೆ.
ಅಂದ್ಹಾಗೆ ಈ 1.95 ಲಕ್ಷ ಟಿಕೆಟ್‌ಗಳು ಪ್ರಮುಖ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಸಂಸ್ಥೆಗಳ ಲೆಕ್ಕ ಮಾತ್ರ. ಪಿವಿಆರ್ ಐನಾಕ್ಸ್ ಇದೂವರೆಗೆ 'ಜವಾನ್' ಮೊದಲ ದಿನದ ಒಟ್ಟು 1.59 ಲಕ್ಷ ಟಿಕೆಟ್ ಮಾರಾಟ ಮಾಡಿರೋದಾಗಿ ಹೇಳಿದೆ. ಇನ್ನು ಸಿನಿಪೊಲಿಸ್ 35 ಸಾವಿರ ಟಿಕೆಟ್ ಸೇಲ್ ಮಾಡಿದೆ ಎಂದಿದೆ. ಇವಿಷ್ಟಲ್ಲದೇ ದೇಶ ವಿದೇಶಗಳ ಬೇರೆ ದೊಡ್ಡ ಸಿನಿಮಾ ಹಾಲ್‌ಗಳು, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಲೆಕ್ಕ ಇನ್ನೂ ಸರಿಯಾಗಿ ಸಿಕ್ಕೇ ಇಲ್ಲ.

ಭರ್ಜರಿಯಾಗಿ ಟಿಕೆಟ್ ಮಾರಾಟ
ಎಲ್ಲಾ ಕಡೆಗಳಲ್ಲೂ ಟಿಕೆಟ್‌ಗಳ ಮಾರಾಟವನ್ನಂತೂ ಭರ್ಜರಿಯಾಗೇ ನಡೆಸ್ತಿದ್ದಾರೆ. ಅನೇಕ ಕಡೆ ಹೆಚ್ಚುವರಿ ಶೋಗಳನ್ನೂ ಆಯೋಜಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಉಂಟಾದ ಭಾರೀ ನಷ್ಟದಿಂದ ಇನ್ನೂ ಅನೇಕ ಸಿಂಗಲ್ ಸ್ಕ್ರೀನ್‌ಗಳು ಚೇತರಿಸಿಕೊಂಡಿಲ್ಲ. ಅವುಗಳೆಲ್ಲಾ ಜವಾನ್ ಬಿಡುಗಡೆಯಿಂದ ಮರುಜೀವ ಪಡೆಯುವ ನಿರೀಕ್ಷೆಯಲ್ಲಿವೆ.
'ಜವಾನ್' ಬಿಡುಗಡೆಯ ಆರ್ಭಟ ನೋಡಿದ್ರೆ ಬಹುಶಃ ಇದು ಹಿಂದಿ ಚಿತ್ರಗಳಲ್ಲಿ ಅತೀ ದೊಡ್ಡ ಮಟ್ಟಗಿನ ಓಪನಿಂಗ್ ಡೇ ಆಗೋ ಎಲ್ಲಾ ಲಕ್ಷಣಗಳಿದೆ. ವಿದೇಶದಲ್ಲೂ ಜವಾನ್ ಜ್ವರ ಜೋರಾಗೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ಜವಾನ್' ನಿನ್ನೆ(ಸೆಪ್ಟಂಬರ್ 3) ಸಂಜೆಯ ವೇಳೆಗೆ ಅಡ್ವಾನ್ಸ್ ಬುಕಿಂಗ್‌ನಲ್ಲಿ 1 ಮಿಲಿಯನ್ ಡಾಲರ್ ಮಾರಾಟ ನಡೆದಿತ್ತು.
ಹೊಸ ದಾಖಲೆ ಬರೆಯುತ್ತಾ 'ಜವಾನ್'
ಇನ್ನು ಬಿಡುಗಡೆಯ ವಾರ 4 ದಿನಗಳ ಲಾಂಗ್ ವೀಕೆಂಡ್ ಇರೋದ್ರಿಂದ ಅದರ ಸೇಲ್ ಕೂಡಾ 2 ಮಿಲಿಯನ್ ಡಾಲರ್ ದಾಟಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿದ್ರೆ 'ಜವಾನ್' ಹಿಂದಿನ ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಉಡೀಸ್ ಮಾಡುವತ್ತ ದಾಪುಗಾಲು ಹಾಕುತ್ತಿರೋದು ಸ್ಪಷ್ಟವಾಗಿದೆ. ಸೆಪ್ಟೆಂಬರ್ 7ರಂದು 'ಜವಾನ್' ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











