ದೀಪಾವಳಿ ಹಬ್ಬದಂದು ಯುದ್ಧಕ್ಕೆ ಇಳಿದ ಶಾರುಖ್ ಖಾನ್-ಸಲ್ಮಾನ್ ಖಾನ್!

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಅಖಾಡಕ್ಕೆ ಇಳಿಯುವುದಕ್ಕೆ ಸಜ್ಜಾಗಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಸಲ್ಮಾನ್ ಖಾನ್ 'ರಾಧೆ' ಥಿಯೇಟರ್‌ಗೆ ರಿಲೀಸ್ ಆಗಿರಲಿಲ್ಲ. ಇನ್ನು 'ಅಂತಿಮ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ.

ಬಾಲಿವುಡ್‌ನ ಇಬ್ಬರೂ ಸೂಪರ್‌ಸ್ಟಾರ್‌ಗಳು ಬಿಗ್ ಬಜೆಟ್ ಸಿನಿಮಾ ಜೊತೆ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ಶಾರುಖ್ ಖಾನ್ 'ಪಠಾಣ್' ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ. ಅತ್ತ ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಸಿನಿಮಾ ರಿಲೀಸ್ ಮಾಡುವ ತರಾತುರಿಯಲ್ಲಿದ್ದಾರೆ.

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ದೀಪಾವಳಿ ಹಬ್ಬಕ್ಕೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅನ್ನೋ ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ಅಷ್ಟಕ್ಕೂ ಬೆಳಕಿನ ಹಬ್ಬದಲ್ಲಿ ಇಬ್ಬರು ದಿಗ್ಗಜರು ಯಾವ ಕಾರಣಕ್ಕೆ ಫೈಟ್ ಮಾಡುತ್ತಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ದೀಪಾಳಿಗೆ ಶಾರುಖ್ Vs ಸಲ್ಮಾನ್

ದೀಪಾಳಿಗೆ ಶಾರುಖ್ Vs ಸಲ್ಮಾನ್

ದೀಪಾವಳಿ ಹಬ್ಬಕ್ಕೆ ಬಾಲಿವುಡ್‌ ಖಾನ್‌ಗಳು ಫೈಟ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿ ಇರುವಾಗಲೇ ಮತ್ತೇನಕ್ಕೆ ಯುದ್ಧಕ್ಕೆ ಇಳಿಯುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡುವುದು ಸಹಜ. ಬೆಳಕಿನ ಹಬ್ಬದಂದು ಶಾರುಖ್ 'ಪಠಾಣ್' ಸಿನಿಮಾದ ಟೀಸರ್ ಹಾಗೂ ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಸಿನಿಮಾದ ಟೀಸರ್ ಒಂದೇ ದಿನ ರಿಲೀಸ್ ಆಗುತ್ತಿದೆ. ಅಕ್ಟೋಬರ್ 23ರಂದು ಎರಡೂ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.

ಒಂದೇ ದಿನ ಎರಡು ಟೀಸರ್

ಒಂದೇ ದಿನ ಎರಡು ಟೀಸರ್

ಶಾರುಖ್ ಖಾನ್ ಒಂದೇ ಒಂದು ಸಿನಿಮಾ ರಿಲೀಸ್ ಆಗದೆ ಸುಮಾರು 5 ವರ್ಷಗಳೇ ಕಳೆಯುತ್ತಿವೆ. ಈ ಕಾರಣಕ್ಕೆ ದೀಪಾವಳಿ ಹಬ್ಬಕ್ಕೆ ಚಿಕ್ಕದೊಂದು ಮಿನಿ ಟೀಸರ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಇನ್ನೊಂದು ಕಡೆ ಇದೇ ದಿನ ಸಲ್ಮಾನ್ ಖಾನ್ ಕೂಡ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಟೀಸರ್ ಅನ್ನು ರಿಲೀಸ್ ಮಾಡಲಿದ್ದಾರೆ. ಎರಡು ಸಿನಿಮಾಗಳು ಬಿಡುಗಡೆಗೆ ಸಮೀಪವಿರುವ ಕಾರಣ ಈಗಿನಿಂದಲೇ ಪ್ರಚಾರಕ್ಕೆ ಮುಂದಾಗಿದ್ದಾರೆ.

ಇಂಡಿಯಾ-ಪಾಕ್ ಪಂದ್ಯದ ವೇಳೆ ಟೀಸರ್

ಇಂಡಿಯಾ-ಪಾಕ್ ಪಂದ್ಯದ ವೇಳೆ ಟೀಸರ್

ಅಕ್ಟೋಬರ್ 23ರಂದು ಟ್ವಿ20 ಪಂದ್ಯಾವಳಿಯ ಹೈ ವೋಲ್ಟೇಜ್ ಮ್ಯಾಚ್ ನಡೆಯಲಿದೆ. ಅಂದು ಇಂಡಿಯಾ Vs ಪಾಕಿಸ್ತಾನ್ ಮ್ಯಾಚ್ ಅಂದೇ ಈ ಎರಡೂ ಸಿನಿಮಾಗಳ ಟೀಸರ್ ಬಿಡುಗಡೆಯಾಗಲಿದೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಟೀಸರ್ ಬಿಡುಗಡೆಗೆ ಈ ಪಂದ್ಯವನ್ನು ಬಳಸಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಆದರೆ, ಈ ಬಗ್ಗೆ ಎರಡೂ ತಂಡಗಳೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಇಬ್ಬರದ್ದೂ ಬಿಗ್ ಬಜೆಟ್ ಸಿನಿಮಾ

ಇಬ್ಬರದ್ದೂ ಬಿಗ್ ಬಜೆಟ್ ಸಿನಿಮಾ

ಶಾರುಖ್ ಖಾನ್ ಸಿನಿಮಾ 'ಪಠಾಣ್‌'ನಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಂತಹ ಸ್ಟಾರ್ ನಟರು ಕಾಣಿಸಿಕೊಳ್ಳಲಿದ್ದಾರೆ. ಮತ್ತೆ ಶಾರುಖ್ ಖಾನ್ ಹಾಗೂ ದೀಪಿಕಾ 'ಓಂ ಶಾಂತಿ ಓಂ' ಹಾಗೂ 'ಚೆನೈ ಎಕ್ಸ್‌ಪ್ರೆಸ್', 'ಹ್ಯಾಪಿ ನ್ಯೂ ಇಯರ್' ಸಿನಿಮಾಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಇತ್ತ ಸಲ್ಮಾನ್ ಖಾನ್ ಸಿನಿಮಾ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್'ನಲ್ಲಿ ಪೂಜಾ ಹೆಗ್ಡೆ, ತೆಲುಗು ನಟ ವೆಂಕಟೇಶ್, ಅತಿಥಿ ಪಾತ್ರದಲ್ಲಿ ರಾಮ್‌ ಚರಣ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Shah Rukh Khan Pathaan And Salman Kisi Ka Bhai Kisi Ka Jaan Teaser Fight, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X