ಕೊನೆಗೂ ಯಶ್ ದಾಖಲೆ ಮುರಿದ ಶಾರುಖ್ ಖಾನ್: ಆದರೂ, 'ಕೆಜಿಎಫ್ 2' ವಿರುದ್ಧ ಗೆಲ್ಲೋದು ಅನುಮಾನ!

2023 ಬಾಲಿವುಡ್‌ ಮಂದಿಗೆ ಆರಂಭದಲ್ಲಿಯೇ ದೊಡ್ಡ ರಿಲೀಫ್ ಸಿಕ್ಕಿದೆ. 'ಪಠಾಣ್' ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಕಳೆದ ಎರಡು ವರ್ಷಗಳಿಂದ ಸೋತು ಕಂಗಾಲಾಗಿದ್ದ ಬಾಲಿವುಡ್‌ಗೀಗ ತಲೆ ಎತ್ತಿ ನಿಲ್ಲುವ ಸಮಯ ಬಂದಿದೆ.

ಕಳೆದ ವರ್ಷ ಬಾಲಿವುಡ್ ಅಂಗಳದಲ್ಲಿಯೇ ರಾಕಿ ಭಾಯ್ ಸಿನಿಮಾ 'ಕೆಜಿಎಫ್ 2' ಮೊದಲ ದಿನವೇ ದಾಖಲೆಯನ್ನು ಬರೆದಿತ್ತು. ಆದ್ರೀಗ ಆ ರೆಕಾರ್ಡ್ ಅನ್ನು ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ ಬ್ರೇಕ್ ಮಾಡಿದೆ.

'ಕೆಜಿಎಫ್ 2' ಹಿಂದಿಗೆ ಡಬ್ ಮಾಡಿದ ಸಿನಿಮಾ ಆಗಿದ್ದರೂ, ಮೊದಲ ದಿನವೇ ಕಲೆಕ್ಷನ್ ವಿಚಾರದಲ್ಲಿ ಎಲ್ಲಾ ಸಿನಿಮಾಗಳ ದಾಖಲೆಯನ್ನು ಅಳಿಸಿ ಹಾಕಿತ್ತು. ಈಗ 'ಪಠಾಣ್' ಆ ದಾಖಲೆಯನ್ನು ಮುರಿದಿದೆ. ಆದರೂ, 'ಕೆಜಿಎಫ್ 2' ಬರೆದಿದ್ದ ಇನ್ನೂ ಹಲವು ದಾಖಲೆಗಳನ್ನು ಅಳಿಸಲು 'ಪಠಾಣ್' ಸೋತಿದೆ.

'ಪಠಾಣ್' ಮೊದಲ ದಿನದ ಕಲೆಕ್ಷನ್ ಎಷ್ಟು?

'ಪಠಾಣ್' ಮೊದಲ ದಿನದ ಕಲೆಕ್ಷನ್ ಎಷ್ಟು?

ಭಾರತದಲ್ಲಿ ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಅದೆಷ್ಟೇ ವಿವಾದಗಳು ಕಿಂಗ್ ಖಾನ್ ಸಿನಿಮಾವನ್ನು ಸುತ್ತಿಕೊಂಡರೂ, ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವಲ್ಲಿ ಶಾರುಖ್ ಖಾನ್ ಯಶಸ್ವಿಯಾಗಿದ್ದಾರೆ. ಹಿಂದಿ ಬೆಲ್ಟ್‌ಗಳಲ್ಲಿ ಶಾರುಖ್ ಸಿನಿಮಾ ಮೊದಲ ದಿನ ಸುಮಾರು 55 ಕೋಟಿ ರೂ.ಗಳನ್ನು ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, 'ಕೆಜಿಎಫ್ 2' ಹೆಸರಿನಲ್ಲಿದ್ದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಅಳಿಸಿ ಹಾಕಿದೆ.

'ಕೆಜಿಎಫ್ 2' ದಾಖಲೆ ಅಳಿಸಿತೇ 'ಪಠಾಣ್'

ರಾಕಿ ಭಾಯ್ 'ಕೆಜಿಎಫ್ 2'ಗೆ ಇದ್ದಷ್ಟು ಕ್ರೇಜ್ 'ಪಠಾಣ್' ಸಿನಿಮಾಗೆ ಇರಲಿಲ್ಲ. ಆದರೂ, ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ ಆಗಿದ್ದಕ್ಕೊಂದು ನಿರೀಕ್ಷೆಯಿತ್ತು. ಅಲ್ಲದೆ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಾಹಂರಂತಹ ಕಾಂಬಿನೇಷನ್ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದ್ದು ನಿಜ. 'ಕೆಜಿಎಫ್ 2' ಮೊದಲ ಹಿಂದಿ ಬೆಲ್ಟ್‌ಗಳಲ್ಲಿ ಮೊದಲ ದಿನ 53.95 ಕೋಟಿ ರೂ. ಕಲೆಕ್ಷನ್ ಮಾಡಿ, ಅದೂವರೆಗೂ ಇದ್ದ ದಾಖಲೆಗಳನ್ನು ಮುರಿದಿತ್ತು. ಆದ್ರೀಗ 'ಪಠಾಣ್' 55 ಕೋಟಿ ರೂ. ಗಳಿಸಿ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ, ಈ ಸಾಧನೆ ಆಗಿದ್ದು, ಕೇವಲ ಹಿಂದಿ ಬೆಲ್ಟ್‌ಗಳಲ್ಲಿ ಮಾತ್ರ.

ವರ್ಲ್ಡ್‌ವೈಡ್ ಕಲೆಕ್ಷನ್ ಹಿಂದಕ್ಕಲಿಲ್ಲ

ವರ್ಲ್ಡ್‌ವೈಡ್ ಕಲೆಕ್ಷನ್ ಹಿಂದಕ್ಕಲಿಲ್ಲ

ಯಶ್ ಸಿನಿಮಾ 'ಕೆಜಿಎಫ್ 2' ಮೊದಲ ದಿನ ಭಾರತದಲ್ಲಿ 138 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ, ವಿದೇಶದಾದ್ಯಂತ ಸುಮಾರು 164 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದೇ ಶಾರುಖ್ ಖಾನ್ ಸಿನಿಮಾ 'ಪಠಾಣ್' 100 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ ಎನ್ನುತ್ತಿದ್ದಾ ಟ್ರೇಡ್ ಅನಲಿಸ್ಟ್‌ಗಳು. 'ಪಠಾಣ್' ತೆಲುಗು ಹಾಗೂ ತಮಿಳಿನಲ್ಲಿರ ರಿಲೀಸ್ ಆಗಿದ್ದರೂ, ಎರಡೂ ಭಾಷೆಯಿಂದ ಕೇವಲ 2 ಕೋಟಿ ರೂ. ಕಲೆಕ್ಷನ್ ಮಾಡಿದೆ ಅಷ್ಟೇ. ಈ ಮೂಲಕ ಭಾರತದ 57 ಕೋಟಿ ರೂ. ಹಾಗೂ ವಿಶ್ವದಾದ್ಯಂತ 100+ ಕೋಟಿ ರೂ. ಕಲೆಕ್ಷನ್ ಗಳಿಸುವುದಕ್ಕಷ್ಟೇ ಆಗಿದೆ. ಹೀಗಾಗಿ ಹಿಂದಿ ಬೆಲ್ಟ್‌ನಲ್ಲಿ ಬಿಟ್ಟರೆ ಬೇರೆ ಕಡೆಗಳಲ್ಲಿ 'ಕೆಜಿಎಫ್ 2' ಹಿಂದಿಕ್ಕಲು 'ಪಠಾಣ್' ಸೋತಿದೆ.

ಭಾರತದ 2 ದಿನ ಕಲೆಕ್ಷನ್ ಲೆಕ್ಕಾಚಾರವೇನು?

ಗಣರಾಜ್ಯೋತ್ಸವಕ್ಕೂ ಒಂದು ದಿನ ಮುನ್ನ 'ಪಠಾಣ್' ಸಿನಿಮಾ ರಿಲೀಸ್ ಆಗಿದೆ. ಎರಡನೇ ದಿನ ರಜೆ ಇರುವುದರಿಂದ ಭಾರತದಾದ್ಯಂತ ಮೊದಲನೇ ದಿನಕ್ಕಿಂತಲೂ ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ಮೂಲಕ ಎರಡು ದಿನಗಳಲ್ಲಿ 'ಪಠಾಣ್' ಕಲೆಕ್ಷನ್ 100 ಕೋಟಿ ರೂ. ಎಂದು ಹೇಳಲಾಗುತ್ತಿದೆ.

More from Filmibeat

English summary
Shah Rukh Khan Pathaan Movie Beat Yash KGF 2 In Day 1 Box Office Collection In Hindi Area, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X