ನರೇಂದ್ರ ಮೋದಿ ಪ್ರಮಾಣವಚನದಲ್ಲಿ ಶಾರುಖ್, ರಜನಿ, ಅಕ್ಷಯ್: ಚಿತ್ರರಂಗದಿಂದ ಬಂದವರ್‍ಯಾರು?

ನರೇಂದ್ರ ಮೋದಿ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ವಿಶ್ವದ ಮೂಲೆ ಮೂಲೆಯಿಂದ ಗಣ್ಯರು ಆಗಮಿಸಿದ್ದಾರೆ. ಹಾಗೇ ಭಾರತೀಯ ಚಿತ್ರರಂಗದ ಪ್ರಮುಖ ಗಣ್ಯರು ಈ ಸಮಾರಂಭಕ್ಕೆ ಆಹ್ವಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ನಟ- ನಟಿಯರು ಆಗಮಿಸಿದ್ದಾರೆ.

ಪಂಡಿತ್ ಜವಾಹರಲಾಲ್‌ ನೆಹರು ಬಳಿಕ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪದಗ್ರಹಣ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಿಯಸ್, ಮಾಲ್ದೀವ್ಸ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದಾರೆ.

Shah Rukh Khan Rajinikanth Akshay Kumar attended PM Narendra Modi s swearing in ceremony in Delhi

ಇದೇ ವೇಳೆ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳಿಗೂ ಆಹ್ವಾನ ನೀಡಲಾಗಿತ್ತು. ಹೀಗಾಗಿ ದೆಹಲಿಗೆ ಆಹ್ವಾನ ನೀಡಿದ ಎಲ್ಲ ನಟ- ನಟಿರೂ ಬಂದಿದ್ದಾರೆ. ಆ ನಟ- ನಟಿಯರ ಪಟ್ಟಿ ಇಲ್ಲಿದೆ.

ಶಾರುಖ್ ಖಾನ್

ಈ ಸಮಾರಂಭಕ್ಕೆ ಶಾರುಖ್ ಖಾನ್‌ಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ ಶಾರುಖ್ ಖಾನ್ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಆಗಮಿಸಿದ್ದರು. ಬ್ಲ್ಯಾಕ್ ಸೂಟ್ ಧರಿಸಿ ಬಂದಿದ್ದರು. ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ರಜನಿಕಾಂತ್

ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬೆನ್ನಲ್ಲೇ ಶಾರುಖ್ ಖಾನ್ ಜೊತೆ ಸೂಪರ್ ಸ್ಟಾರ್‍ ರಜನಿಕಾಂತ್‌ಗೂ ಆಹ್ವಾನ ನೀಡಲಾಗಿತ್ತು. ಹೀಗಾಗಿ ಪತ್ನಿಯೊಂದಿಗೆ ರಾಷ್ಟ್ರಪತಿ ಭವನಕ್ಕೆ ರಜನಿಕಾಂತ್ ಆಗಮಿಸಿದ್ದರು.


ಅಕ್ಷಯ್ ಕುಮಾರ್

ಬಾಲಿವುಡ್‌ನ ಮತ್ತೊಬ್ಬ ಸೂಪರ್‍‌ಸ್ಟಾರ್ ಅಕ್ಷಯ್ ಕುಮಾರ್‍‌ಗೂ ಆಹ್ವಾನ ನೀಡಲಾಗಿತ್ತು. ಹೀಗಾಗಿ ಅಕ್ಷಯ್ ಕುಮಾರ್ ರಾಷ್ಟ್ರಪತಿ ಭವನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಶಾರುಖ್ ಖಾನ್‌ಗೆ ಅಪ್ಪಿಕೊಂಡು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.


ಕಂಗನಾ ರನೌತ್


ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ನಟಿ ಕಂಗನಾ ರನೌತ್ ಕೂಡ ಕಾಣಿಸಿಕೊಂಡಿದ್ದರು. ಮಿರಮಿರ ಮಿಂಚುವ ಸೀರೆಯುಟ್ಟು ಕಂಗನಾ ಈ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ವಿಕ್ರಾಂತ್ ಮಸ್ಸಿ- ರಾಜ್‌ಕುಮಾರ್

ಬಾಲಿವುಡ್‌ನ ಸ್ಟಾರ್ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಹಾಗೂ ಇತ್ತೀಚೆಗೆ '12th ಫೈಲ್' ಸಿನಿಮಾದ ಮೂಲಕ ಜನರ ಮನಗೆದ್ದಿರುವ ವಿಕ್ರಾಂತ್ ಮೆಸ್ಸಿ ಕೂಡ ರಾಷ್ಟ್ರಪತಿ ಭವನದಲ್ಲಿ ಕಾಣಿಸಿಕೊಂಡಿದ್ದಾರೆ.

ಇವರೊಂದಿಗೆ ರಾಷ್ಟ್ರಪತಿ ಭವನದಲ್ಲಿ ರವೀನಾ ಟಂಡನ್, ಅನಿಲ್ ಕಪೂರ್, ಅನುಪಮ್ ಖೇರ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳು ಕೂಡ ಈ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
List of Movie stars attended PM Narendra Modi's swearing-in ceremony in Delhi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X