"ಯಶ್ ಫಾಸ್ಟ್ ಆಗಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಬೇಕು": ಶಾರುಖ್ ಖಾನ್

ಶಾರುಖ್ ಖಾನ್‌ಗೂ ದಕ್ಷಿಣ ಭಾರತದ ಹೀರೋಗಳಿಗೂ ಒಂದು ಬಿಡಲಾರದ ನಂಟಿದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸದೇ ಹೋದರೂ ಇಲ್ಲಿನ ಸೂಪರ್‌ಸ್ಟಾರ್‌ಗಳಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅಂತಹ ನಟರಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವುದು ರಾಕಿಂಗ್ ಸ್ಟಾರ್ ಯಶ್. ಇತ್ತೀಚೆಗೆ ಶಾರುಖ್ ದುಬೈನಲ್ಲಿ ನೀಡಿದ ಕಾರ್ಯಕ್ರಮದಲ್ಲಿ ಯಶ್ ಹೆಸರನ್ನು ಪ್ರಸ್ತಾಪಿಸಿ ಮಾತಾಡಿದ್ದಾರೆ.

ಯಶ್ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಿನಿಮಾಗೆ ಟಕ್ಕರ್ ಕೊಟ್ಟು ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಅನ್ನು ಶಾರುಖ್ ನಟಿಸಿದ 'ಝೀರೊ' ಮುಂದೆ ರಿಲೀಸ್ ಮಾಡಿದ್ದರು. ಮೊದಲ ಯತ್ನದಲ್ಲಿಯೇ ಶಾರುಖ್ ಖಾನ್ ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ ಸೋಲಿಸಿ ಗೆದ್ದಿದ್ದರು. ಅಲ್ಲಿಂದ ಶಾರುಖ್ ಖಾನ್ ಹಾಗೂ ಯಶ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಅನ್ನೋ ಭಾವವಿತ್ತು. ಅದೆಲ್ಲ ಸುಳ್ಳು ಅಂತ ಪ್ರೂವ್ ಆಗುವುದಕ್ಕೆ ಹೆಚ್ಚು ದಿನ ಉಳಿಯಲಿಲ್ಲ.

Shah Rukh Khan about yash Dance in dubai

ಈಗ ದುಬೈನಲ್ಲಿ ಶಾರುಖ್ ಖಾನ್ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ಗಳ ಜೊತೆಗೆ ಕನ್ನಡದ ಪ್ಯಾನ್ ಇಂಡಿಯಾ ಸೂಪರ್‌ ಸ್ಟಾರ್ ಯಶ್ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಯಶ್‌ಗೆ ವೇಗವಾಗಿ ಡ್ಯಾನ್ಸ್ ಮಾಡಬೇಡಿ ಅಂತ ಹೇಳಿದ್ದಾರೆ. ಅದ್ಯಾಕೆ ಹೀಗೆ ಹೇಳಿದರು? ಯಶ್ ಜೊತೆಗೆ ದಕ್ಷಿಣ ಭಾರತದ ಮತ್ಯಾವ ನಟರಿಗೆ ಈ ಸಲಹೆ ನೀಡಿದ್ದಾರೆ? ಅನ್ನೋದನ್ನು ನೋಡುವುದಾದರೆ..

ಇತ್ತೀಚೆಗೆ ಶಾರುಖ್ ಖಾನ್ ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಿಂಗ್ ಖಾನ್ ಅನ್ನು ನೋಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಇದೇ ಇವೆಂಟ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ದಕ್ಷಿಣ ಭಾರತದ ಸ್ಟಾರ್ ನಟರ ಬಗ್ಗೆ ಪ್ರಸ್ತಾಪಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ನೆಟ್ಟಿಗರು ದುಬೈ ಸಮಾರಂಭದ ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Shah Rukh Khan about yash Dance in dubai

ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ದಕ್ಷಿಣ ಭಾರತದ ಸ್ಟಾರ್‌ ನಟರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲೂ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಸೂಪರ್‌ ಸ್ಟಾರ್ ಅಭಿಮಾನಿಗಳನ್ನು ಉದ್ದೇಶಿಸಿ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ವೇಳೆ ಯಶ್ ಸೇರಿದಂತೆ ದಕ್ಷಿಣ ಭಾರತದ ನಟರ ಡ್ಯಾನ್ಸ್ ಬಗ್ಗೆನೂ ಪ್ರಸ್ತಾಪ ಮಾಡಿದ್ದಾರೆ.

"ಇಲ್ಲಿಗೆ ದಕ್ಷಿಣ ಭಾರತದಿಂದ ಬಂದಿರುವವರು ಎಷ್ಟು ಮಂದಿ ಇದ್ದಾರೆ. ಕೇರಳದಿಂದ ಬಂದಿರುವವರು, ತೆಲಂಗಾಣದಿಂದ, ಕರ್ನಾಟಕದಿಂದ, ಆಂಧ್ರದಿಂದ, ತಮಿಳುನಾಡಿನಿಂದ ನನಗೆ ಸಿಕ್ಕಾಪಟ್ಟೆ ಜನರು ಸ್ನೇಹಿತರಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಯಶ್, ಮಹೇಶ್ ಬಾಬು, ದಳಪತಿ ವಿಜಯ್, ರಜನಿಕಾಂತ್, ಕಮಲ್ ಹಾಸನ್ ಎಲ್ಲರೂ ನನ್ನ ಸ್ನೇಹಿತರು. ಅವರಲ್ಲಿ ನನ್ನದೊಂದು ಮನವಿ ಇದೆ. ಅಷ್ಟು ವೇಗವಾಗಿ ಡ್ಯಾನ್ಸ್ ಮಾಡಬಾರದು. ನನಗೆ ಅವರೊಂದಿಗೆ ಪೈಪೋಟಿ ಮಾಡುವುದಕ್ಕೆ ಬಹಳ ಕಷ್ಟ ಆಗುತ್ತೆ" ಎಂದು ಮನವಿ ಮಾಡಿಕೊಳ್ಳುತ್ತೇನೆ.

ಯಶ್ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಮುಂಬೈನಲ್ಲಿ ಇದ್ದಾಗ, ಶಾರುಖ್ ಖಾನ್ ಮನೆಗೆ ಭೇಟಿ ಕೊಟ್ಟಿದ್ದರು ಎಂದು ಗುಲ್ಲೆದ್ದಿತ್ತು. ಯಶ್ ಹಲವು ವೇದಿಕೆಗಳಲ್ಲಿ ಶಾರುಖ್ ಖಾನ್ ಬಗ್ಗೆ ಮಾತಾಡಿದ್ದಾರೆ. ಶಾರುಖ್ ಖಾನ್ ಕೂಡ 'ಟಾಕ್ಸಿಕ್' ಸಿನಿಮಾ ನೋಡಬೇಕು ಎಂದು ಅಭಿಪ್ರಾಯ ಹಂಚಿಕೊಂಡಿದ್ದರು. ಇತ್ತ ಶಾರುಖ್ ಖಾನ್ 'ಕಿಂಗ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Shah Rukh Khan said Yash, Allu Arjun, Ram Charan should stop doing fast dance in Dubai
Read more about: shah rukh khan yash dubai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X