'ಪ್ರೇಕ್ಷಕರು ಸಿನಿಮಾ ಮೇಲೆ ಆಸಕ್ತಿ ಕಳೆದುಕೊಳ್ಳಬಹುದು': 11 ವರ್ಷಗಳ ಹಿಂದೆನೇ ಶಾರುಖ್ ಭವಿಷ್ಯ!

2018ರಿಂದ ಶಾರುಖ್ ಖಾನ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿಲ್ಲ. ಹೀರೊ ಆಗಿ ನಟಿಸಿದ ಕೊನೆಯ ಸಿನಿಮಾ 'ಜೀರೊ'. ಈ ಸಿನಿಮಾ ಹೀನಾಯವಾಗಿ ಸೋಲುಂಡ ಬಳಿಕ ಶಾರುಖ್ ಖಾನ್ ಹೆಚ್ಚು ಕಡಿಮೆ ಮೂರು ವರ್ಷಗಳ ಕಾಲ ಬ್ರೇಕ್ ಕೊಟ್ಟಿದ್ದರು.

ಸದ್ಯ ಶಾರುಖ್ ಖಾನ್ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ 'ಪಠಾಣ್', 'ಜವಾನ್' ಸಿನಿಮಾದ ಶೂಟಿಂಗ್ ಶುರುವಾಗಿದೆ. ಎರಡೂ ಸಿನಿಮಾಗಳ ಶೂಟಿಂಗ್‌ನಲ್ಲಿ ಕಿಂಗ್ ಖಾನ್ ಬ್ಯುಸಿಯಾಗಿದ್ದಾರೆ. ಈ ವೇಳೆ 2011ರಲ್ಲಿ ಶಾರುಖ್ ನುಡಿದಿದ್ದ ಭವಿಷ್ಯವೊಂದು ವೈರಲ್ ಆಗಿದೆ.

11 ವರ್ಷಗಳ ಹಿಂದೆ ಶಾರುಖ್ ಖಾನ್ ಹೇಳಿದ್ದೇನು?

ರಾ.ಒನ್ ಅಂತಹ ವಿಎಫ್‌ಎಕ್ಸ್ ಆಧಾರಿತ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಲಿಲ್ಲ. ಆದರೂ, ಬಾಲಿವುಡ್‌ಗೆ ಅದೊಂದು ವಿಶಿಷ್ಟ ಸಿನಿಮಾ ಆಗಿತ್ತು. ಆ ವೇಳೆ ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗದ ಬಗ್ಗೆ ಭವಿಷ್ಯ ನುಡಿದಿದ್ದರು.

Shah Rukh Khan Says That Audiences Will Lose Interest In Bollywood Movies

2011ರಲ್ಲಿ ಶಾರುಖ್ ಖಾನ್ 'ರಾ.ಓನ್' ಸಿನಿಮಾದಲ್ಲಿ ನಟಿಸಿದ್ದರು. ಆ ವೇಳೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು. ಶಾರುಖ್ ಖಾನ್ ಇಲ್ಲ ಎಂದಾಗ, ಮುಂದಿನ ಪೀಳಿಗೆ ಹಿಂತಿರುಗಿ ನೋಡಿದಾಗ, ಅವರ ಕೊಡುಗೆಯನ್ನು ಕೇವಲ ಪಾತ್ರವಷ್ಟೇ ಅಲ್ಲದೆ, ಬೇರೆ ವಿಭಾಗದಲ್ಲೂ ನೀಡಿದ್ದನ್ನು ನೆನಪಿಸಿಕೊಳ್ಳಬೇಕು ಎಂದು ಬಯಸಿದ್ದರು.

ತಂತ್ರಜ್ಞಾನದಲ್ಲಿ ಬದಲಾವಣೆ ತರುವ ಬಯಕೆ

ಶಾರುಖ್ ಖಾನ್ ತಂತ್ರಜ್ಞಾನದಲ್ಲಿ ಬದಲಾವಣೆಯನ್ನು ತರಲು ಬಯಸಿದ್ದರು. ಆ ಕಾರಣಕ್ಕಾಗಿಯೇ ರಾ.ಒನ್ ಅನ್ನು ಸೂಪರ್ ಹೀರೋ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಅತೀ ಹೆಚ್ಚು ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಬಳಸಿದ್ದರು.

'ಫ್ಯಾನ್', 'ಜೀರೊ' ಅಂತ ಸಿನಿಮಾಗಳಲ್ಲೂ ಹೆಚ್ಚು ತಂತ್ರಜ್ಞಾನವನ್ನು ಬಳಸಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಓಡಲಿಲ್ಲ. 11 ವರ್ಷಗಳ ಹಿಂದೆ ಶಾರುಖ್ ಖಾನ್ ಬಾಲಿವುಡ್ ತುಂಬಾನೇ ಕೆಟ್ಟಸ ಸ್ಥಿತಿಯಲ್ಲಿ ಎಂದು ಹೇಳಿದ್ದರು.

Shah Rukh Khan Says That Audiences Will Lose Interest In Bollywood Movies

ಪ್ರೇಕ್ಷಕರ ಸಿನಿಮಾ ನೋಡುವುದನ್ನು ನಿಲ್ಲಿಸಬಹುದು

2011ರಲ್ಲಿ ಪ್ರೀತಿ ಜಿಂಟಾ ಜೊತೆಗಿನ ಸಂದರ್ಶನದಲ್ಲಿ ಶಾರುಖ್ ಖಾನ್ ಬಾಲಿವುಡ್ ಸಿನಿಮಾಗಳ ಭವಿಷ್ಯದ ಬಗ್ಗೆ ನುಡಿದಿದ್ದರು. "ನಾವು ಐಶಾರಾಮಿ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ನಾವು ಇಂತಹ ಸಿನಿಮಾಗಳನ್ನು ನಿರ್ಮಾಣ ಮಾಡದೇ ಹೋದರೆ, ಯುವ ಪೀಳಿಗೆ ನಮ್ಮ ಸಿನಿಮಾಗಳನ್ನು ನೋಡುವುದನ್ನೇ ನಿಲ್ಲಿಸಬಹುದು. ಅವರು ಅಂತರಾಷ್ಟ್ರೀಯ ಸಿನಿಮಾಗಳ ಕಡೆಗೆ ಹೋಗಬಹುದು. ನಾವು ನಮ್ಮ ಸೂಪರ್ ಹೀರೊಗಳ ಕಡೆ ಗಮನ ಹರಿಸಬೇಕು." ಎಂದಿದ್ದರು ಶಾರುಖ್ ಖಾನ್.

" ಈ ಚಿತ್ರರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನ ವೃತ್ತಿ ಬದುಕು ಕೊನೆಗೊಂಡಾಗ, ನಾನು ಖಳನಾಯಕನಾಗಿ ನಟಿಸಿದ್ದು, ನಾಯಕಿರೊಂದಿಗೆ ರೊಮ್ಯಾನ್ಸ್ ಮಾಡಿದ್ದು, ಡ್ಯಾನ್ಸ್ ಮಾಡಿದ್ದೆಲ್ಲವೂ ಬಿಟ್ಟು ಬೇರೆ ಗುರುತನ್ನು ಬಿಡಬೇಕಿದೆ. ಅವೆಲ್ಲವನ್ನೂ ನನಗೋಸ್ಕರ ಮಾಡಿದ್ದೆ. ಆದರೆ, ಇದೆಲ್ಲವನ್ನೂ ಬಿಟ್ಟು ಜನರು ಭಾರತೀಯ ಸಿನಿಮಾ ವಿಎಫ್‌ಎಕ್ಸ್ ಅಂತ ಬಂದಾಗ, ನನ್ನ ಕಡೆಗೆ ತಿರುಗಿ ನೋಡಬೇಕು" ಎಂದಿದ್ದರು.

More from Filmibeat

English summary
Shah Rukh Khan Says That Audiences Will Lose Interest In Bollywood Movies, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X