Shah Rukh Khan: "ನೀವು ಮಾಸ್" ಎಂದ ಅಲ್ಲು ಅರ್ಜುನ್.. ಇದಕ್ಕಾಗಿ 3 ದಿನದಲ್ಲಿ 3 ಬಾರಿ 'ಪುಷ್ಪ' ನೋಡಿದ್ದೆ ಎಂದ ಖಾನ್!

ಶಾರುಖ್ ಖಾನ್ ಮತ್ತೆ ತಾನು ಬಾಕ್ಸಾಫೀಸ್ ಕಿಂಗ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಆರು ವರ್ಷ ನಿರಂತರ ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದ ಕಿಂಗ್ ಖಾನ್, ಮೂರು ವರ್ಷ ಸಿನಿಮಾದಿಂದಲೇ ದೂರವಿದ್ದರು. 'ಪಠಾಣ್' ಮೂಲಕ ಕಮ್‌ಬ್ಯಾಕ್ ಮಾಡಿದ್ದ ಶಾರುಖ್ 'ಜವಾನ್‌'ನಲ್ಲೂ ಯಶಸ್ಸು ಕಂಡಿದ್ದಾರೆ.

ಶಾರುಖ್ ಖಾನ್ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದ್ದಾರೆ. ಪಕ್ಕಾ ಮಾಸ್ ಮಸಾಲ ಎಂಟರ್‌ಟೈನರ್ ಸಿನಿಮಾ 'ಜವಾನ್' ಮೊದಲ ವಾರವೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಶಾರುಖ್ ಮಾಸ್ ಅವತಾರಕ್ಕೆ ಸಿನಿಮಾ ತಾರೆಯರು ಬಹುಪರಾಕ್ ಹೇಳುತ್ತಿದ್ದಾರೆ.

allu-arjun-shah-rukh-khan-jawan-pushpa

'ಜವಾನ್' ಸಿನಿಮಾ ರಿಲೀಸ್ ಆದ ಏಳು ದಿನಗಳಲ್ಲಿಯೇ ವಿಶ್ವದಾದ್ಯಂತ 650ಸ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಶಾರುಖ್ ವೃತ್ತಿ ಬದುಕಿನಲ್ಲೇ ಅತೀ ವೇಗವಾಗಿ ದಾಖಲೆ ಗಳಿಕೆ ಕಂಡ ಸಿನಿಮಾ. ಇದೇ ಖುಷಿಯಲ್ಲಿ ಇರುವಾಗಲೇ ಟಾಲಿವುಡ್ 'ಪುಷ್ಪ' ಉರ್ಫ್ ಅಲ್ಲು ಅರ್ಜುನ್ 'ಜವಾನ್' ಸಿನಿಮಾ ಸಕ್ಸಸ್‌ಗೆ ಕಿಂಗ್‌ ಖಾನ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅದಕ್ಕೆ ಶಾರುಖ್ ಖಾನ್ ನೀಡಿದ ಪ್ರತಿಕ್ರಿಯೆ ಅಲ್ಲು ಅರ್ಜುನ್ ಅಭಿಮಾನಿಗಳ ಗರ್ವಕ್ಕೆ ಕಾರಣವಾಗಿದೆ.

'ಜವಾನ್' ಯಶಸ್ಸಿಗೆ ಅಲ್ಲು ಅರ್ಜುನ್ ವಿಶ್

ಶಾರುಖ್ ಖಾನ್ ನಟಿಸಿದ ಮತ್ತೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ 'ಜವಾನ್' ಬಾಕ್ಸಾಫೀಸ್‌ ಅನ್ನು ಕೊಳ್ಳೆ ಹೊಡೆಯುವುದನ್ನು ಇನ್ನೂ ನಿಲ್ಲಿಸಿಲ್ಲ. 'ಜವಾನ್' ಸಿನಿಮಾ ಕಮರ್ಷಿಯಲ್ ಆಗಿಯೂ ಗೆದ್ದಿದೆ. ಹಾಗೇ ಕ್ರಿಟಿಕಲ್ ಆಗಿಯೂ ಗೆದ್ದಿದೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ಇಡೀ 'ಜವಾನ್' ತಂಡಕ್ಕೆ ಶುಭಾಶಯವನ್ನು ತಿಳಿಸಿದ್ದರು. ಅದರಲ್ಲೂ 'ಜವಾನ್' ಗೆದ್ದಿದ್ದಕ್ಕೆ ಶಾರುಖ್ ಖಾನ್ ಅನ್ನು ಹೊಗಳಿ ಶುಭಾಶಯ ತಿಳಿಸಿದ್ದರು. " ಶಾರುಖ್ ಖಾನ್ ಅವರ ಮಾಸ್‌ನಲ್ಲಿ ಮಾಸ್ ಅವತಾರವಿದು. ಇಡೀ ಭಾರತದಲ್ಲಿ ಮಿಂಚುತ್ತಿದ್ದಾರೆ. ನಿಮ್ಮ ಬಗ್ಗೆ ತುಂಬಾನೇ ಖುಷಿಯಾಗುತ್ತಿದೆ. ಹೀಗಾಗಬೇಕು ಅಂತ ಪ್ರಾರ್ಥಿಸಿದ್ದೆ" ಎಂದು ಅಲ್ಲು ಅರ್ಜುನ್ ಟ್ವೀಟ್ (X) ಮಾಡಿದ್ದರು.

"3 ದಿನದಲ್ಲಿ 3 ಬಾರಿ ಪುಷ್ಪ ನೋಡಿದ್ದೆ"

ಅಲ್ಲು ಅರ್ಜುನ್ ಟ್ವೀಟ್‌ಗೆ ಶಾರುಖ್ ಖಾನ್ ಕೂಡ ಟ್ವೀಟ್ (X) ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. "ಥ್ಯಾಂಕ್ ಯು.. ನಿಮ್ಮ ಪ್ರಾರ್ಥನೆ ಹಾಗೂ ಪ್ರೀತಿ ಆಬಾರಿಯಾಗಿದ್ದೇನೆ. ಸ್ವ್ಯಾಗ್ (swag) ಹಾಗೂ ಫೈರ್ ನನ್ನನ್ನು ಹೊಗಳಿದ್ದು ನನಗೆ ಖುಷಿಕೊಟ್ಟಿದೆ. ಜವಾನ್ ದ್ವಿಗುಣಗೊಂಡಂತಹ ಅನುಭವ ಆಗಿದೆ. ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ. ನಾನು 'ಪುಷ್ಪ' ಸಿನಿಮಾವನ್ನು 3 ದಿನಗಳಲ್ಲಿ ಮೂರು ಬಾರಿ ನೋಡಿದ್ದೇನೆ. ಆದಷ್ಟು ಬೇಗ ಬಂದು ವೈಯಕ್ತಿಕವಾಗಿ ಒಂದು ಅಪ್ಪು ಕೊಡುತ್ತೇನೆ." ಎಂದು ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲು ಅರ್ಜುನ್ ಫ್ಯಾನ್ಸ್ ಫಿದಾ

'ಪುಷ್ಪ' ಸಿನಿಮಾವನ್ನು 3 ದಿನಗಳಲ್ಲಿ ಮೂರು ಬಾರಿ ನೋಡಿದ್ದೇನೆ ಅಂತ ಶಾರುಖ್ ಖಾನ್ ಹೇಳುತ್ತಿದ್ದಂತೆ ಅಲ್ಲು ಅರ್ಜುನ್ ಫ್ಯಾನ್ಸ್ ಭೂಮಿ ಮೇಲೆ ನಿಲ್ಲುತ್ತಿಲ್ಲ. "ಪುಷ್ಪ ಇನ್ಮುಂದೆ ರೂಲ್ ಮಾಡುತ್ತಾರೆ" ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. "ಇಬ್ಬರು ಬಾಕ್ಸಾಫೀಸ್‌ ಕಿಂಗ್‌ಗಳು ನಮಗೆ ಖುಷಿ ಕೊಟ್ಟಿದ್ದೀರಿ. ಇಬ್ಬರನ್ನೂ ಒಂದೇ ಫೋಟೊದಲ್ಲಿ ನೋಡಲು ಬಯಸುತ್ತೇವೆ." ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 'ಜವಾನ್' ಪೋಷ್ಟರ್‌ನಲ್ಲಿ ಅಲ್ಲು ಅರ್ಜುನ್ ಫೋಟೊ ಇರುವುದನ್ನು ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ.

ಇಡೀ ಜವಾನ್ ತಂಡಕ್ಕೆ ವಿಶ್

ಅಲ್ಲು ಅರ್ಜುನ್ ಕೇವಲ ಶಾರುಖ್ ಖಾನ್‌ಗೆ ಅಷ್ಟೇ ಅಲ್ಲ. ಈ ಸಿನಿಮಾ ಖಳನಾಯಕನಾಗಿ ನಟಿಸಿರುವ ವಿಜಯ್ ಸೇತುಪತಿಯನ್ನು ಹಾಡಿಹೊಗಳಿದ್ದಾರೆ. " ಎಂದಿನಂತೆ ವಿಜಯ್ ಸೇತುಪತಿ ಅದ್ಭುತ ಪಾತ್ರ" ಎಂದು ಗುಣಗಾನ ಮಾಡಿದ್ದಾರೆ. ಅದರಂತೆಯೇ ನಯನತಾರಾಗೂ ವಿಶ್ ಮಾಡಿದ್ದು, "ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ" ಎಂದಿದ್ದಾರೆ. ಇದರೊಂದಿಗೆ ದೀಪಿಕಾ ಪಡುಕೋಣೆ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಅನ್ನು ಹೊಗಳಿದಿದ್ದಾರೆ.

More from Filmibeat

English summary
Shah Rukh Khan says he had seen Allu Arjun pushpa three times
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X