ಪಿಕೆನೂ ಇಲ್ಲ.. ರಜನಿಯ 2.0ನೂ ಇಲ್ಲ.. ಎಲ್ಲನೂ ದಾಟಿ ಮುಂದಕ್ಕೆ ಹೋಯ್ತು 'ಪಠಾಣ್'
ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ ಗೆದ್ದಿದೆ. ಮುಜುಗರದಿಂದ ನಲುಗಿ ಹೋಗಿದ್ದ ಬಾಲಿವುಡ್ ಮಂದಿಯ ಮುಖ ಈಗ ಅರಳಿದೆ. ಬಾಲಿವುಡ್‌ನ ಬಿಗ್ ಪ್ರೊಡಕ್ಷನ್ ಹೌಸ್ ಯಶ್ ರಾಜ್ ಫಿಲ್ಮ್ಸ್ ಮತ್ತೆ ಗೆಲುವು ದಾಖಲಿಸಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್ ಕಿಂಗ್ ಖಾನ್‌ಗೆ ನಾಲ್ಕು ವರ್ಷಗಳ ಬಳಿಕ ಮತ್ತೆ ಬಿಗ್ ಸಕ್ಸಸ್ ಸಿಕ್ಕಿದೆ. 'ಪಠಾಣ್' ರಿಲೀಸ್ ಆದಲ್ಲಿಂದ ಹಿಡಿದು ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಅಲ್ಲಾಡುತ್ತಲೇ ಇದೆ.
'ಪಠಾಣ್' ಸಿನಿಮಾ 12 ದಿನಗಳಲ್ಲೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಬಾಲಿವುಡ್‌ನಲ್ಲಿ ದಾಖಲೆ ಬರೆದ ಸಿನಿಮಾಗಳನ್ನೆಲ್ಲಾ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಸದ್ಯ ಆಮಿರ್ ಖಾನ್ ಪಿಕೆ, ರಜನಿಯ 2.0 ಸಿನಿಮಾವನ್ನು ಹಿಂದಿಕ್ಕಿ ಮುಂದಕ್ಕೆ ಸಾಗುತ್ತಿದೆ. ಅಷ್ಟಕ್ಕೂ ಸಿನಿಮಾ ಬಿಡುಗಡೆಯಾಗಿ 14 ದಿನಗಳಾಗಿದ್ದು ಅಡ್ವಾನ್ಸ್ ಬುಕಿಂಗ್ ಜೋರಾಗಿಯೇ ಇದೆ.

'ಪಠಾಣ್' ಅಡ್ವಾನ್ಸ್ ಬುಕಿಂಗ್ ಜೋರು
ಶಾರುಖ್ ಖಾನ್ ಅಭಿನಯದ 'ಪಠಾಣ್'ಗೆ ಈ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದನ್ನು ಬಾಲಿವುಡ್ ಮಂದಿನೂ ನಿರೀಕ್ಷೆ ಮಾಡಿರಲಿಲ್ಲ. 14ನೇ ದಿನ ಸಿನಿಮಾದ ಕಲೆಕ್ಷನ್ ಅದ್ಭುತವಾಗಿ ಆಗಿದೆ ಎನ್ನುತ್ತಾರೆ ಟ್ರೇಡ್ ಎಕ್ಸ್‌ಪರ್ಟ್ಸ್. 14ನೇ ದಿನ ಸುಮಾರು 1.62 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ. 13ನೇ ದಿನ ಸಿನಿಮಾದ 1.59 ಲಕ್ಷ ಟಿಕೆಟ್‌ಗಳು ಸೇಲ್ ಆಗಿದ್ದವು. ಹೀಗಾಗಿ ದಿನದಿಂದ ದಿನಕ್ಕೆ ಕಲೆಕ್ಷನ್ ಅದ್ಭುತವಾಗಿಯೇ ಇದೆ.'

'ಪಠಾಣ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
'ಪಠಾಣ್' ಬಾಕ್ಸಾಫೀಸ್‌ನಲ್ಲಿ ತಣ್ಣಗಾಗೋ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಗಳಿಸಬೇಕಿದ್ದ ಹಣವನ್ನೆಲ್ಲಾ ಶಾರುಖ್ ಸಿನಿಮಾ ಬಾಚಿಕೊಳ್ಳುವ ಎಲ್ಲಾ ಲಕ್ಷಣಗಳೂ ಇವೆ. ಸದ್ಯ 'ಪಠಾಣ್' 14ನೇ ದಿನ 2.40 ಕೋಟಿ ರೂ.ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಕೊಟ್ಟಿದ್ದಾರೆ. ಅದೇ 13ನೇ ದಿನ ಇದೇ ಸಿನಿಮಾ 1.59 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

12 ದಿನಗಳಲ್ಲಿ ಪಿಕೆ, 2.0 ದಾಖಲೆ ಉಡೀಸ್
'ಪಠಾಣ್' ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಆಮಿರ್ ಖಾನ್ ಅಭಿನಯದ 'ಪಿಕೆ', ರಜನಿಕಾಂತ್, ಅಕ್ಷಯ್ ಕುಮಾರ್ ಸಿನಿಮಾ '2.0' ಸಿನಿಮಾದ ದಾಖಲೆಯನ್ನು ಹಿಂದಿಕ್ಕಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 832 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಅತೀ ಹೆಚ್ಚು ಗಳಿಕೆ ಕಂಡ ಭಾರತದ 7ನೇ ಸಿನಿಮಾ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಂಡಿದೆ.

'ಕೆಜಿಎಫ್ 2' ದಾಖಲೆ ಮುರಿಯುತ್ತಾ?
ಅದೆಷ್ಟೇ ಪ್ರಯತ್ನ ಪಟ್ಟರೂ ಶಾರುಖ್ ಖಾನ್ ಸಿನಿಮಾ 'ಕೆಜಿಎಫ್ 2' ದಾಖಲೆಯನ್ನು ಮುರಿಯೋದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಯನ್ನು ಹಿಂದಿಕ್ಕಲು ಇನ್ನೂ 400 ಕೋಟಿ ರೂ. ಅಷ್ಟು ಕಲೆಕ್ಷನ್ ಆಗಬೇಕಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, 'ಪಠಾಣ್' ಯಶ್ ಸಿನಿಮಾ 'ಕೆಜಿಎಫ್ 2' ಹತ್ತಿರಕ್ಕೂ ಹೋಗುವುದು ಅನುಮಾನ ಎನ್ನಲಾಗಿದೆ.


Click it and Unblock the Notifications











