ಸಲಾರ್ ಬಿಡುಗಡೆಗೂ ಮುನ್ನವೇ 'ಡಂಕಿ' ಮತ್ತೊಂದು ರಿಲೀಸ್: ಶಾರುಖ್ ಸ್ನೇಹಿತರ ಎಮೋಷನಲ್ ಜರ್ನಿ ಶುರು!
ಈ ವರ್ಷ ಕಿಂಗ್ ಖಾನ್ ಶಾರುಖ್ ಮೂರನೇ ಸಿನಿಮಾ ರಿಲೀಸ್ ಆಗಲಿದೆ. 'ಪಠಾಣ್', 'ಜವಾನ್' ಸಿನಿಮಾ ಬಳಿಕ ಮೂರನೇ ಸಿನಿಮಾ 'ಡಂಕಿ' ಕಿಕ್ ಕೊಡೋಕೆ ಸಜ್ಜಾಗಿ ನಿಂತಿದೆ. 'ಡಂಕಿ' ಇಷ್ಟೊಂದು ಚರ್ಚೆಯಾಗುತ್ತಿರೋದಕ್ಕೆ ಕಾರಣ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಖಾನ್.
ಈಗಾಗಲೇ 'ಡಂಕಿ' ಡ್ರಾಪ್ 1 ಹಾಗೂ ಡ್ರಾಪ್ 2 ರಿಲೀಸ್ ಆಗಿದೆ. ಈ ಎರಡೂ ತುಣುಕುಗಳು ಸಿನಿರಸಿಕರಿಗೆ ಈಗಾಗಲೇ ಕಿಕ್ ಕೊಟ್ಟಿದೆ. ಈಗ ಡ್ರಾಪ್ 3 ಕೂಡ ರಿಲೀಸ್ ಆಗಿದೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ನಡುವಿನ ರೊಮ್ಯಾಂಟಿಕ್ ಸಾಂಗ್ ಬಳಿಕ ಎಮೋಷನಲ್ ಜರ್ನಿಯನ್ನು ತೋರಿಸುವುದಕ್ಕೆ ಹೊರಟಿದ್ದಾರೆ.

'ಡಂಕಿ' ಡ್ರಾಪ್ 3 ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೆ ವೀವ್ಸ್ ಸಿಗುತ್ತಿದೆ. ಅಂದ್ಹಾಗೆ ಇಂದು ಸಿನಿಮಾ ಎಮೋಷನಲ್ ಸನ್ನಿವೇಶದಲ್ಲಿ ಬರುವ ಹಾಡು. ಶಾರುಖ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ ಈ ಕ್ರೇಜಿ ಕಾಂಬಿನೇಷನ್ ಈ ವರ್ಷ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ.
ಇದೇ ಡಿಸೆಂಬರ್ 21ರಂದು ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಶಾರುಖ್ ಖಾನ್ ಹಾಗೂ ತಂಡ ಪ್ರಚಾರಕ್ಕೆ ಇಳಿದಿದ್ದಾರೆ. 'ಡಂಕಿ'ಯ "ಲುಟ್ ಪುಟ್ ಗಯಾ.." ಹಾಡು ಸಿನಿಪ್ರಿಯರನ್ನು ಮೋಡಿ ಮಾಡಿತ್ತು. ಶಾರುಖ್ ಹಾಗೂ ತಾಪ್ಸಿ ನಡುವಿನ ಈ ಪ್ರೇಮಗೀತೆ ಬಳಿಕ ಇದೀಗ ಮೋಷನಲ್ ನಂಬರ್ ರಿಲೀಸ್ ಆಗಿದೆ. "ನಿಕ್ಲೆ ಥೆ ಕಭಿ ಹಮ್ ಘರ್ ಸೆ.." ಎಂಬ ಹಾಡನ್ನು ಜಾವೇದ್ ಅಖ್ತಾರ್ ಬರೆದಿದ್ದಾರೆ. ಸಂಗೀತ ನಿರ್ದೇಶಕ ಪ್ರೀತಂ ಟ್ಯೂನ್‌ಗೆ ಸೋನು ನಿಗಂ ಧ್ವನಿಗೂಡಿಸಿದ್ದಾರೆ.

ಇಂದು (ಡಿಸೆಂಬರ್ 1) ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಸಲಾರ್' ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಆದರೆ, ಅದಕ್ಕೂ ಮುನ್ನ 'ಡಂಕಿ' ಮೂರನೇ ತುಣುಕನ್ನು ಚಿತ್ರತಂಡ ರಿಲೀಸ್ ಮಾಡಿದೆ. ಎರಡೂ ಸಿನಿಮಾಗಳೂ ಒಂದು ದಿನದ ಅಂತರದಲ್ಲಿ ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಮಹಾ ಯುದ್ಧದ ಸೂಚನೆಯನ್ನು ನೀಡಿದೆ. ಇನ್ಮುಂದೆ ಎರಡೂ ಸಿನಿಮಾಗಳು ಬರೆಯೋ ದಾಖಲೆಗಳ ಮೇಲೆ ಗುದ್ದಾಡುವ ಸಾಧ್ಯತೆಯಿದೆ.
ಅಂದ್ಹಾಗೆ 'ಡಂಕಿ' ನಾಲ್ಕು ಜನ ಸ್ನೇಹಿತರು ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ವಲಸೆ ಹೋಗುವುದೇ ಸಿನಿಮಾದ ಕಥೆ. ಆ ಕಥೆಯ ಎಮೋಷನಲ್ ಪಯಣವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. 'ಮುನ್ನಾಭಾಯಿ ಎಂಬಿಬಿಎಸ್', 'ಲಗೆ ರಹೋ ಮುನ್ನಾಭಾಯಿ', '3 ಇಡಿಯಟ್ಸ್', 'ಪಿಕೆ', 'ಸಂಜು' ಇಂತಹ ಮೆಗಾ ಸಿನಿಮಾಗಳನ್ನು ನೀಡುವ ರಾಜ್‌ಕುಮಾರ್ ಹಿರಾನಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್‌ಗೆ ಆಕ್ಷನ್ ಕಟ್ ಹೇಳಿರೋದು ಸಿನಿಮಾ ಹೈಲೈಟ್.
'ಡಂಕಿ' ಸಿನಿಮಾವನ್ನು ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್, ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್‌ನಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ. 'ಡಂಕಿ' ಇದೇ ಡಿಸೆಂಬರ್ 21ಕ್ಕೆಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.


Click it and Unblock the Notifications











