»   » ಬಾಲಿವುಡ್ ಗೆ ಶಾರುಖ್ ಮಕ್ಕಳ ಪಾದಾರ್ಪಣೆ: ಕಿಂಗ್ ಖಾನ್ ಹೇಳಿದ್ದೇನು?

ಬಾಲಿವುಡ್ ಗೆ ಶಾರುಖ್ ಮಕ್ಕಳ ಪಾದಾರ್ಪಣೆ: ಕಿಂಗ್ ಖಾನ್ ಹೇಳಿದ್ದೇನು?

Posted By:
Subscribe to Filmibeat Kannada

ಬಾಲಿವುಡ್ ಅಂಗಳದಲ್ಲಿ ಸದ್ಯದಲ್ಲಿ ಸೈಫ್ ಅಲಿ ಖಾನ್ ಮತ್ತು ಶಾರುಖ್ ಖಾನ್ ಮಕ್ಕಳು ಸಿನಿ ರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಸೈಫ್ ಇತ್ತೀಚೆಗೆ ತಮ್ಮ ಮಗಳು ಸಾರಾ ಅಲಿ ಖಾನ್ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈಗ ಶಾರುಖ್ ಖಾನ್ ಸರದಿ.

ಕಿಂಗ್ ಖಾನ್ ನಿನ್ನೆ ಮಾಧ್ಯಮದವರೊಂದಿಗೆ ರಂಜಾನ್ ಆಚರಣೆ ಮಾಡಿದ್ದು, ಜೊತೆಗೆ ತಮ್ಮ ಮೂವರು ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಂ ರವರ ಬಾಲಿವುಡ್ ಎಂಟ್ರಿ ಕುರಿತು ಮಾತನಾಡಿದ್ದಾರೆ.

ಮಕ್ಕಳ ಸಿನಿಮಾ ಎಂಟ್ರಿ ಬಗ್ಗೆ ಶಾರುಖ್ ಮಾತನಾಡಿದ್ದು ಏಕೆ?

ಶಾರುಖ್ ಮಗಳು ಸುಹಾನಾ ಖಾನ್ ಈಗಾಗಲೇ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾಳೆ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೆ ಸುಹಾನಾ ಸ್ಕೂಲ್ ನಲ್ಲಿ 'ಸಿಂಡ್ರೆಲ್ಲಾ' ನಾಟಕದ ಲೀಡ್ ರೋಲ್ ನಲ್ಲಿ ಅದ್ಭುತವಾಗಿ ನಟಿಸಿದ್ದರು. ಇದನ್ನು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಶಾರುಖ್ ನನ್ನ ಮಗಳು ನನ್ನಂತೆಯೇ ಆಕ್ಟರ್ ಆಗುವ ಆಸೆ ಇಟ್ಟುಕೊಂಡಿದ್ದಾಳೆ. ನನ್ನ ಬೆಂಬಲ ಇಲ್ಲದೇ ಚಿತ್ರರಂಗಕ್ಕೆ ಬರುತ್ತಾಳೆ ಎಂದು ಹೇಳಿದ್ದರು. ಇದರಿಂದಾಗಿ ಸಾಮಾನ್ಯವಾಗಿ ಶಾರುಖ್ ಮಗಳ ಬಾಲಿವುಡ್ ಎಂಟ್ರಿ ಬಗ್ಗೆ ಕುತೂಹಲದಿಂದ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಅದಕ್ಕೆ ಬಾದ್ ಶಾ ಉತ್ತರ ಮುಂದಿನಂತಿದೆ.[ಶಾರುಖ್ ಮಗಳು ಸುಹಾನಾ ಖಾನ್ ನಟನೆಯ ಮೋಡಿ ನೋಡಿದ್ರಾ?]

ಮಕ್ಕಳ ಬಾಲಿವುಡ್ ಎಂಟ್ರಿ ಬಗ್ಗೆ ಶಾರುಖ್ ಹೇಳಿದ್ದು..

ತಮ್ಮ ಫ್ಯಾಮಿಲಿ ಬಗ್ಗೆ ಸದಾ ಪ್ರೊಟೆಕ್ಟಿವ್ ಮೈಂಡ್ ಹೊಂದಿರುವ ಶಾರುಖ್ ಖಾನ್, "ನನ್ನ ಮಕ್ಕಳು ಮೊದಲಿಗೆ ಅವರ ಶಿಕ್ಷಣ ಪೂರ್ಣಗೊಳಿಸಬೇಕು. ನಮ್ಮ ಮನೆಯಲ್ಲಿ ಯಾರೇ ಆದರೂ ಕಡೆ ಪಕ್ಷ ಪದವಿಯನ್ನಾದರೂ ಪಡೆದಿರಬೇಕು. ಇಲ್ಲವಾದರೇ ಅವರನ್ನು ಮನೆಯೊಳಗೆ ಸೇರಿಸುವುದಿಲ್ಲ' ಎಂದಿದ್ದಾರೆ.

ಶಿಕ್ಷಣಕ್ಕೆ ಮೊದಲ ಆಧ್ಯತೆ

"ಸುಹಾನಾ ಪ್ರಸ್ತುತ ಇನ್ನು ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಅವಳ ಶಿಕ್ಷಣ ಮುಗಿಯಲು ಇನ್ನು 5 ವರ್ಷಗಳು ಬೇಕು. ಆರ್ಯನ್ ಗೆ ನಾಲ್ಕು ವರ್ಷಗಳು ಬೇಕು. ಸುಹಾನಾ ಏನಾದರೂ ಆಕ್ಟರ್ ಆಗಲು ಬಯಸಿದರೆ ನಂತರ ಆಕೆ ಅಭಿನಯದ ಬಗ್ಗೆ ಕಲಿಕೆ ಮುಂದುವರೆಸಬಹುದು. ಆದರೆ ಅದಕ್ಕೆಲ್ಲಾ ಇನ್ನೂ ಬಹಳ ವರ್ಷಗಳು ಬೇಕಿವೆ. ಸದ್ಯಕ್ಕೆ ಅವರಿಗೆ ಸಿನಿರಂಗದ ಕಡೆ ಆಸಕ್ತಿ ಇಲ್ಲ. ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ" ಎಂದು ತಮ್ಮ ಮಕ್ಕಳ ಸಿನಿ ರಂಗ ಪಾದಾರ್ಪಣೆ ಕುರಿತು ಹೇಳಿದ್ದಾರೆ.

ಸುಹಾನಾ'ಳನ್ನು ಆಕ್ಟರ್ ಆಗಿ ಬಿಂಬಿಸುತ್ತಿಲ್ಲ

"ಸುಹಾನಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿ ನಾವು ಆಕೆಯನ್ನು ಆಕ್ಟರ್ ಆಗಿ ಮಾಡಲು ಹೊರಟಿದ್ದೀವಿ ಎಂದು ಜನ ತಿಳಿಯುತ್ತಾರೆ. ಆದರೆ ಅದು ತಪ್ಪು" ಎಂದು ಸಹ ಶಾರುಖ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಹಾಭಾರತದ ಬಗ್ಗೆ ಶಾರುಖ್ ಮಾತು

ಶಾರುಖ್ ತಮ್ಮ ಮಕ್ಕಳ ಬಾಲಿವುಡ್ ಎಂಟ್ರಿ ಬಗ್ಗೆ ಮಾತು ಮುಗಿಸಿದ ನಂತರ 'ಮಹಾಭಾರತ' ಕುರಿತು ಸಿನಿಮಾ ಮಾಡುವ ಆಸಕ್ತಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕಾಗಿ ಅವರು ಒಂದೂವರೆ ವರ್ಷಗಳಿಂದ 'ಮಹಾಭಾರತ' ಮಹಾಕಾವ್ಯವನ್ನು ಓದುತ್ತಿದ್ದಾರಂತೆ.

English summary
Yesterday(June 26), while celebrating Eid with the media, Shahrukh Khan talked about his three children - Aryan, Suhana and Abram's Bollywood entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada