»   » ಶಾರುಖ್ ಮಗಳು ಸುಹಾನಾ ಖಾನ್ ನಟನೆಯ ಮೋಡಿ ನೋಡಿದ್ರಾ?

ಶಾರುಖ್ ಮಗಳು ಸುಹಾನಾ ಖಾನ್ ನಟನೆಯ ಮೋಡಿ ನೋಡಿದ್ರಾ?

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಗಳ ಚಿತ್ರಗಳು, ಅವರ ಅಭಿನಯದ ಬಗ್ಗೆ ದಿನದಿಂದ ದಿನಕ್ಕೆ ಸಿನಿ ಪ್ರಿಯರಲ್ಲಿ ಎಕ್ಸ್ ಪೆಕ್ಟೇಶನ್ ಹೆಚ್ಚಾಗತ್ತಲೇ ಇರುತ್ತದೆ. ಅಂತೆಯೇ ಬಾಲಿವುಡ್ ಮಂದಿಯಲ್ಲಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸಹ ನಟನೆಗೆ ಎಂಟ್ರಿ ಕೊಡಬಹುದಾ ಅನ್ನೋ ನಿರೀಕ್ಷೆ ಸಾಮಾನ್ಯವಾಗಿ ಇತ್ತು. ಈಗ ಈ ಕುತೂಹಲಕ್ಕೆ ಒಂದಷ್ಟು ಉತ್ತರಗಳು ಸಿಕ್ಕಿವೆ.['ಡಿಡಿಎಲ್ ಜೆ' ಸೀನ್ ರೀಕ್ರಿಯೇಟ್ ಮಾಡಿ ಶಾರುಖ್ ಅಣಕಿಸಿದ ಹಾಟ್ ಬಾಯ್]

ಶಾರುಖ್ ಖಾನ್ ಅವರ ಮೂವರು ಮಕ್ಕಳಲ್ಲಿ ಯಾರು ಸಿನಿಮಾ ರಂಗಕ್ಕೆ ಕಾಲಿಡಬಹುದು ಎಂಬ ಪ್ರಶ್ನೆ ಹಲವರಲ್ಲಿ ಇತ್ತು. ಇತ್ತೀಚೆಗೆ ಸುಹಾನಾ ಸ್ಕೂಲ್ ಸ್ಟೇಜ್‌ ನಾಟಕಗಳಲ್ಲಿ ಕಾಣಿಸಿಕೊಂಡ ನಂತರ ಶಾರುಖ್ ಖಾನ್, 'ನನಂತೆಯೇ ನನ್ನ ಮಗಳು ಆಕ್ಟರ್ ಆಗುತ್ತಾಳೆ' ಎಂದು ಹೇಳಿದ್ದಾರೆ. ಅಲ್ಲದೆ ಅದಕ್ಕೆ ಸಾಕ್ಷಿ ಆಗಿ ತಮ್ಮ ಮಗಳ ಆಕ್ಟಿಂಗ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಶಾರುಖ್ ಖಾನ್ ಅಂತೆಯೇ ಅವರ ಮಗಳು

ಶಾರುಖ್ ಖಾನ್ ಅಭಿಮಾನಿಗಳು, ಅವರ ಮಕ್ಕಳು ಸಹ ಚಿತ್ರಗಳಲ್ಲಿ ಅಭಿನಯಿಸುವುದನ್ನು ನೋಡಲು ಕಾತುರರಾಗಿದ್ದರು. ಈ ನಿರೀಕ್ಷೆಗಳಿಗೆ ಶಾರುಖ್ ಖಾನ್ 'ನನ್ನ ಮಗಳಿಗೆ ನಟನೆಯಲ್ಲಿ ಹೆಚ್ಚು ಒಲವಿದೆ. ಅವಳು ಅವರ ತಂದೆಯಂತೆ ಆಕ್ಟರ್ ಆಗುವ ಆಸೆ ಇಟ್ಟುಕೊಂಡಿದ್ದಾಳೆ. ಸುಹಾನಾ ನನ್ನ ಬೆಂಬಲ ಇಲ್ಲದೇ ಚಿತ್ರರಂಗಕ್ಕೆ ಬರುತ್ತಾಳೆ' ಎಂದು ಹೇಳಿದ್ದಾರೆ.['ದಂಗಲ್', 'ಸುಲ್ತಾನ್' ಚಿತ್ರಕ್ಕೆ 'ರಯೀಸ್' ಹೋಲಿಸುವುದಿಲ್ಲ: ಶಾರುಖ್]

ರಂಗ ಚಟುವಟಿಕೆಗಳಲ್ಲಿ ಸುಹಾನಾ ಖಾನ್

ಸುಹಾನಾ ಅಭಿನಯದಲ್ಲಿ ಹೆಚ್ಚು ಒಲವು ಇಟ್ಟುಕೊಂಡಿರುವುದರಿಂದ, ಈಗಾಗಲೇ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಸುಹಾನಾ ಆಕ್ಟಿಂಗ್ ವಿಡಿಯೋಗಳು ವೈರಲ್

ಸುಹಾನಾ, ಇತ್ತೀಚೆಗೆ ಅವರ ಸ್ಕೂಲ್ ನಲ್ಲಿ ನಡೆದ ಸಿಂಡ್ರೆಲ್ಲಾ ನಾಟಕದ ಲೀಡ್ ರೋಲ್ ನಲ್ಲಿ ಅದ್ಭುತವಾಗಿ ನಟಿಸಿದ್ದರು. ಆ ವಿಡಿಯೋಗಳು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಅವರ ನಟನೆಗೆ ಉತ್ತಮ ಪ್ರತಿಕ್ರಿಯೆಗಳು ಸಿಗುತ್ತಿವೆ. ಅವರ ಅಭಿನಯ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ಬಾಲಿವುಡ್ ಫ್ಯೂಚರ್ ನಟಿ ಸುಹಾನಾ ಖಾನ್

ಮಗಳು ಬೋಲ್ಡ್ ಆಗಿ ನಟಿಸುವುದನ್ನು ನೋಡಿ ಶಾರುಖ್ ಖಾನ್, ಬ್ಯೂಟಿಫುಲ್, ವಾಯ್ಸ್ ಕ್ಯೂಟ್ ಎಂದು, ಆಕ್ಟಿಂಗ್ ಗೆ ಹೃದಯ ಪೂರಕ ಪ್ರೀತಿಯ ಸಿಂಬಲ್ ಅನ್ನು ಕಾಮೆಂಟ್ ಮಾಡಿದ್ದಾರೆ. ಶಾರುಖ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ ಲೋಡ್ ಮಾಡಿದ ಅವರ ಮಗಳ ನಟನೆಯ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

English summary
Bollywood superstar Shah Rukh Khan has often said that his teenage daughter Suhana Khan, is keen to follow in his footsteps and become an actor. The young lady, who often steers clear from the limelight, is ready now more than ever before to claim her spot on the centre stage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada